ರಾಮನಗರ: ಖಾಸಗಿ ನರ್ಸಿಂಗ್ ಹೋಂಗೆ ಸೇರಿದ ಆಕ್ಷಿಜನ್ ಸಿಲಿಂಡರ್ ಗಳು ನಗರದಲ್ಲಿರುವ ಜಿಲ್ಲಾ ಆಸ್ಪತ್ರೆ ಯಲ್ಲಿ ಪತ್ತೆಯಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಜಿಲ್ಲಾಸ್ಪತ್ರೆಯ ಅಡುಗೆ ಮನೆಯಲ್ಲಿ 9 ಖಾಲಿ ಆಕ್ಸಿಜನ್ ಸಿಲಿಂಡರ್‌ಗಳು ಪತ್ತೆಯಾಗಿದೆ.
ಕನಕಪುರ ದ ಖಾಸಗಿ ಆಸ್ಪ ತ್ರೆಗೆ ಈ ಸಿಲಿಂಡರ್‌ಗಳು ಸರ್ಕಾರಿ ಆಸ್ಪತ್ರೆ ಯಲ್ಲಿದೆ. ಸರ್ಕಾರದ ಲೆಕ್ಕದಲ್ಲಿ ಈ ಸಿಲಿಂಡರ್‌ಗಳಿಗೆ ಆಕ್ಸಿಜನ್ ತುಂಬುವ ಹುನ್ನಾರವೇ? ಎಂದು ನಾಗರಿಕರು ಪ್ರಶ್ನಿಸಿದ್ದಾರೆ. ಆದರೆ ಈ ಆರೋಪವನ್ನು ಜಿಲ್ಲಾ ಸರ್ಜನ್ ಡಾ.ಶಶಿಧರ್ ಅಲ್ಲಗಳೆದಿದ್ದಾರೆ.
ಕನಕಪುರದ ಖಾಸಗಿ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ.ಶಶಿಧರ್ ಅವರ ಪತ್ನಿಯ ಮಾಲೀಕತ್ವದಲ್ಲಿದೆ. ತಮ್ಮ ಪತ್ನಿಯ ಮಾಲೀಕತ್ವದ ನರ್ಸಿಂಗ್ ಹೋಂನ ಸಿಲಿಂಡರ್‌ಗಳು ಇಲ್ಲಿವೆ ಎಂಬುವುದನ್ನು ಡಾ.ಶಶಿಧರ್ ಒಪ್ಪಿಕೊಂಡಿದ್ದಾರೆ. ಆದರೆ ಅವುಗಳಿಗೆ ಸರ್ಕಾರಿ ಲೆಕ್ಕದಲ್ಲಿ ಆಕ್ಸಿಜನ್ ತುಂಬಿಸಲು ತಂದಿಲ್ಲ.
ಕನಕಪುರದಿಂದ ಬೆಂಗಳೂರಿಗೆ ತೆಗೆದುಕೊಂಡು ಹೋಗ ಬೇಕಿತ್ತು. ಮಳೆ ಕಾರಣ ಸಾಧ್ಯವಾಗಲಿಲ್ಲ. ಹೀಗಾಗಿ ತತ್ಕಾಲಿಕವಾಗಿ ಇಲ್ಲಿರಿಸಿದ್ದೇನೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ ದ್ದಾರೆ. ಒಂದು ಸಿಲಿಂಡರ್ ತುಂಬಿಸಲು 200 ರೂ. ವೆಚ್ಚವಾಗುತ್ತದೆ. ಅದನ್ನು ಸರ್ಕಾರಿ ಲೆಕ್ಕದಲ್ಲಿ ತುಂಬಿಸುವ ಅಗತ್ಯ ತಮಗಿಲ್ಲ ಎಂದಿದ್ದಾರೆ.
ತಾವು ಜಿಲ್ಲಾ ಸರ್ಜನ್ ಆಗಿ ಕರ್ತವ್ಯ ವಹಿಸಿಕೊಂಡ ನಂತರ ವಸತಿ ಗೃಹದಲ್ಲಿ ಕೆಲವರನ್ನು ಖಾಲಿ ಮಾಡಿ ಎಂದು ತಿಳಿಸಿದ್ದು, ಅದನ್ನು ಸಹಿಸದವರು ತಮ್ಮ ತೇಜೋವಧೆಗೆ ಮುಂದಾಗಿದ್ದಾರೆ ಎಂದು ದೂರಿದ್ದಾರೆ.