ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಪ್ರತಿದಿನ ಸರ್ಕಾರಿ ಆಸ್ಪತ್ರೆ ಮತ್ತುಖಾಸಗಿ ಆಸ್ಪತ್ರೆಗಳಲ್ಲಿ 100 ಕ್ಕೂ ಜನ ಸೋಂಕಿತರು ಆಕ್ಸಿಜನ್ ಬೆಡ್‌ಗಳಿಗಾಗಿ ಸಾಲುಗಟ್ಟಿ ನಿಲ್ಲುತ್ತಿರುವುದು ಸಾಮಾನ್ಯವಾಗಿದ್ದು, ಸಾವುನೋವುಗಳು ಸಂಭವಿಸುತ್ತಿವೆ. ಸರ್ಕಾರ ಈ ಕೂಡಲೇ ಅಗತ್ಯವೈದ್ಯಕೀಯ ಸಿಬ್ಬಂದಿಗಳೊಂದಿಗೆ ವೈದ್ಯಕೀಯ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳು, ಆರೋಗ್ಯ ಹಾಗೂ ವೈದ್ಯಕೀಯ ಸಚಿವರು,ಕಂದಾಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಸಚಿವರೊಂದಿಗೆ ನಡೆದ ಜೂಮ್ ಮೀಟಿಂಗ್‌ನಲ್ಲಿ ಅವರು ಮಾತನಾಡಿದರು.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಯಾವುದೇವೈದ್ಯಕೀಯ ಕಾಲೇಜು ಇರುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು,ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಕಷ್ಟುಮನವಿ ಮಾಡಲಾಗಿದೆ. ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ 68ಆಕ್ಸಿಜನ್ ಬೆಡ್‌ಗಳು ಇದೆ. ತಾಲೂಕಿನ ಖಾಸಗಿ ಆಸ್ಪತ್ರೆಗಳಲ್ಲಿ 58ಆಕ್ಸಿಜನ್ ಬೆಡ್‌ಗಳು ಇದೆ ತಾಲೂಕಿನಿಂದ ಕೋವಿಡ್ 2ನೇ ಅಲೆಗೆ300 ಜನ ಸೋಂಕಿನಿಂದ ಆಕಾಶ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಇದರಲ್ಲಿ ಸೋಂಕಿನಿಂದ ದಾಖಲಾಗಿರುವ ಪೈಕಿ 186 ಜನಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿದಾಖಲಾದ ಕೊವಿಡ್ ಸೋಂಕಿತರಿಗೆ ರೆಮಿxಸಿಯರ್ ಇಂಜಕ್ಷನ್ ದೊರುಕುತ್ತಿಲ್ಲ. ವೈದ್ಯಕೀಯ ಕಾಲೇಜುಗಳಲ್ಲಿ ನನ್ನ ತಾಲೂಕಿಗೆ,ವೈದ್ಯರು ಮತ್ತು ದಾದಿಯರು ಅಂತಿಮ ವರ್ಷದಲ್ಲಿ ಪದವಿಪಡೆಯುತ್ತಿರುವವರನ್ನು ಸೂಕ್ತ ಗೌರವ ಧನ ನೀಡಿ ನೇಮಿಸಿಕೊಳ್ಳಬೇಕು.
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಘಟಕವನ್ನು ಸ್ಥಾಪನೆಮಾಡಬೇಕು. ಜರೂರಾಗಿ ವಿದ್ಯುತ್ ಚಿತಾಗಾರನಿರ್ಮಾಣವಾಗಬೇಕು. ನನ್ನ ತಾಲೂಕಿನ ವಸತಿ ಶಾಲೆಗಳಲ್ಲಿ, 200.ಆಕ್ಸಿಜನ್ ಬೆಡ್‌ಗಳು, 50ವೆಂಟಿಲೇಟರ್ ಬೆಡ್ ಗಳು, ಹಾಗೂ 25ಐಸಿಯು. ಬೆಡ್‌ಗಳ ವ್ಯವಸ್ಥೆಯನ್ನು ಒದಗಿಸಬೇಕಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಪ್ರತಿಯೊಂದುಗ್ರಾಮಗಳಲ್ಲೂ ಸಹಾ ಫೀವರ್ ಕ್ಲೀನಿಕ್ ಕ್ಯಾಂಪ್ ಮಾಡಬೇಕುಎಂದು ಮನವಿ ಮಾಡಿದರು.