Advertisement
ನಗರದಲ್ಲಿ ಸುದ್ದಿಗೋ ಷ್ಠಿ ನಡೆಸಿದ ಅವರು, ಕೋವಿಡ್ ಸೋಂಕು ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳು ಜಾರಿಯಲ್ಲಿದೆ ಎಂದರು.
Related Articles
Advertisement
ಜಿಲ್ಲೆಯಲ್ಲಿರುವ ಕೈಗಾರಿಕೆಗಳಿಂದ 211 ಮೆಡಿಕಲ್ ಆಕ್ಸಿಜನ್ ಸಿಲಿಂಡರ್‌ಗಳನ್ನು ಪಡೆಯಲಾಗಿದೆ. ಈ ಸಿಲಿಂಡರ್‌ಗಳನ್ನು ಬಫರ್ ಸ್ಟಾಕ್ ಎಂದು ಪರಿಗಣಿಸಿ ಸದ್ಯ ಇರುವ ಆಕ್ಸಿಜನ್ ವ್ಯವಸ್ಥೆಗೆ ಹೆಚ್ಚು ವರಿಯಾಗಿ ಶೇಖರಿಸಲಾಗಿದೆ ಎಂದರು.
ಗಂಭೀರ ಸೋಂಕಿತರು ಆರ್‌ಆರ್ ಆಸ್ಪತ್ರೆಗೆ: ಬೆಂಗಳೂರು ಬಳಿಯ ರಾಜರಾಜೇಶ್ವರಿ ಮೆಡಿಕಲ್ ಆಸ್ಪತ್ರೆಯಲ್ಲಿ ಸರ್ಕಾರದೊಂದಿಗೆ ಎಸ್‌ಒಪಿಯಂತೆ ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಸಿಗುತ್ತಿದೆ. ಈ ಆಸ್ಪತ್ರೆಗೆ ಬಹಳಗಂಭೀರವಾಗಿರುವ ರೋಗಿಗಳನ್ನು ಚಿಕಿತ್ಸೆಗೆ ಕಳುಹಿಸಿಕೊಡಲಾಗುತ್ತದೆ ಎಂದರು.
4 ಕೋವಿಡ್ ಕೇರ್ ಸೆಂಟರ್‌ಗಳು ಜಿಲ್ಲೆಯಲ್ಲಿ 4 ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಕೋವಿಡ್ ಲಕ್ಷಣಗಳಿಲ್ಲದ ಸೋಂಕಿತರು ಹಾಗೂ ಅಲ್ಪ ಪ್ರಮಾಣದ ಲಕ್ಷಣವುಳ್ಳವರ ಚಿಕಿತ್ಸೆಯನ್ನು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 4 ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 405 ಹಾಸಿಗೆಗಳಿವೆ. ಸದ್ಯ 276 ಮಂದಿ ಇಲ್ಲಿ ನಿಗಾದಲ್ಲಿದ್ದಾರೆ ಎಂದರು.
ಭೇಟಿ: 2914 ಸೋಂಕಿತರಿಗೆ ಹೋಮ್ ಐಸೊ ಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಈ ಮಂದಿಯನ್ನು ಪರಿಶೀಲಿಸುತ್ತಿದ್ದಾರೆ. ಪ್ರತಿ ತಾಲೂಕಿನಲ್ಲಿ ಹೋಮ್ ಐಸೋಲೇಷನ್ ರೋಗಿಗಳ ಚಿಕಿತ್ಸೆಗಾಗಿ ಇಬ್ಬರು ಆರ್‌ಬಿಎಸ್‌ಕೆ ವೈದ್ಯರನ್ನು ನಿಯೋಜಿಸಲಾಗಿದೆ. ರೋಗಿಗಳ ಸ್ಥಿತಿಗತಿಗಳನ್ನು ಪರಿಶೀಲಿಸಲು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಾರ್‌ರೂಂ ತೆರೆದು ನೋಡಲ್ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ|ನಿರಂ ಜನ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ|ಪದ್ಮ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.