Advertisement

ಗೋಶಾಲೆಗಳಿಗೂ ಆಕ್ಸಿಮೀಟರ್‌ ರವಾನೆ

01:11 AM May 08, 2021 | Team Udayavani |

ಲಕ್ನೋ: ಉತ್ತರ ಪ್ರದೇಶ ಸರಕಾರ, ತಾನು ನಡೆಸುತ್ತಿರುವ ಗೋ ಶಾಲೆಗಳಲ್ಲಿ ಗೋವುಗಳ ಆರೋಗ್ಯವನ್ನು ಆಗಾಗ ತಪಾಸಣೆ ಮಾಡುವ ಉದ್ದೇಶದಿಂದ, ಪ್ರತಿಯೊಂದು ಗೋಶಾಲೆಗಳಿಗೂ ಆಕ್ಸಿಮೀಟರ್‌ಗಳನ್ನು ಹಾಗೂ ಥರ್ಮಲ್‌ ಸ್ಕ್ಯಾನರ್‌ಗಳನ್ನು ರವಾನಿಸಿದೆ.

Advertisement

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರಕಾರದ ಹಿರಿಯ ಅಧಿಕಾರಿಯೊಬ್ಬರು, ಈ ಸಾಮಗ್ರಿಗಳನ್ನು, ಗೋ ಶಾಲೆಗಳಲ್ಲಿ ಸೇವೆ ಸಲ್ಲಿಸುವ ಸಿಬಂದಿಯ ತಪಾಸಣೆಗಾಗಿ ಕಳುಹಿಸಲಾಗಿದೆ ಎಂದಿದ್ದಾರೆ. ಆದರೆ ಪ್ರಕಟನೆಯಲ್ಲಿ “ಗೋವುಗಳನ್ನು ನೋಡಿ­ಕೊಳ್ಳುತ್ತಿರುವ ಸಿಬಂದಿಯುಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಗೋವುಗಳ ಆರೈಕೆ ಮಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಅಲ್ಲದೆ ವೈದ್ಯಕೀಯ ತಪಾಸಣ ಸಾಮಗ್ರಿಗಳನ್ನು ಸಿಬಂದಿ ಸಹಿತ  ಗೋವುಗಳಿಗೆ ಹಾಗೂ ಗೋಶಾಲೆ­ಗಳಲ್ಲಿರುವ ಇತರ ಪ್ರಾಣಿಗಳ ತಪಾಸಣೆಗೂ ಬಳಸಬಹುದು’ ಎಂದು ಉಲ್ಲೇಖೀಸಿದೆ.

Advertisement

Udayavani is now on Telegram. Click here to join our channel and stay updated with the latest news.

Next