ಲಂಡನ್: ಆಕ್ಸ್‌ಫರ್ಡ್ ಡಿಕ್ಷನರಿಯು ಈ ಬಾರಿ “ಗೋಬ್ಲಿನ್ ಮೋಡ್’ ಎಂಬ ಪದವನ್ನು “2022ರ ವರ್ಷದ ಪದ’ ಎಂದು ಘೋಷಿಸಿದೆ.
ಗೋಬ್ಲಿನ್ ಮೋಡ್ ಎಂದರೆ, “ಸ್ವೇಚ್ಛಾಭೋಗದ, ಆಲಸಿ, ಮಂದ ಅಥವಾ ದುರಾಸೆಯ ಬುದ್ಧಿಯುಳ್ಳ ಅಂದರೆ ಸಾಮಾಜಿಕ ರೂಢಿ ಅಥವಾ ನಿರೀಕ್ಷೆಗಳನ್ನು ತಿರಸ್ಕರಿಸುವಂಥ ನಡವಳಿಕೆ’ ಎಂದರ್ಥ.
2022ರ ಇಡೀ ವರ್ಷವನ್ನು “ಒಂದು ಪದ’ದಲ್ಲಿ ವ್ಯಾಖ್ಯಾನಿಸಿ ಎಂದು ಹೇಳಿ ಆಕ್ಸ್‌ಫರ್ಡ್ ಡಿಕ್ಷನರಿಯು ಆನ್‌ಲೈನ್ ವೋಟಿಂಗ್ ಮಾಡಿತ್ತು. ಅದರಂತೆ, ಜನರು ಈ ಪದವನ್ನು ಆಯ್ಕೆ ಮಾಡಿದ್ದಾರೆ.
2022ರಲ್ಲಿ ಜಗತ್ತು ಕೊರೊನಾ ಲಾಕ್‌ಡೌನ್‌ನಿಂದ ಹೊರಬಂದು ಅನಿಶ್ಚಿತತೆಯನ್ನು ಎದುರಿಸುತ್ತಿತ್ತು. ಗೊಂದಲ, ಖುಷಿ ಎಲ್ಲವೂ ಮಿಳಿತಗೊಂಡು ಜನರ ನಡವಳಿಕೆಯು “ಗೋಬ್ಲಿನ್ ಮೋಡ್’ಗೆ ಹೊರಳಿತ್ತು ಎನ್ನುವುದು ಬಹುತೇಕರ ಅಭಿಮತವಾಗಿದೆ.
ವರ್ಷದ ಪದದ ಅಂತಿಮ ಸುತ್ತಿಗೆ ಬಂದಿದ್ದ ಇನ್ನೆರಡು ಪದಗಳೆಂದರೆ, “ಮೆಟಾವರ್ಸ್ ಮತ್ತು ಐ ಸ್ಟಾಂಡ್ ವಿದ್’.