Advertisement

ಲಸಿಕೆ ಅಭಿವೃದ್ಧಿ ಪ್ರಯೋಗಕ್ಕೆ ಮುಂದಾದ ಆಕ್ಸ್‌ಫ‌ರ್ಡ್‌ ವಿವಿ

12:30 PM Apr 24, 2020 | mahesh |

ಲಂಡನ್‌: ಕೋವಿಡ್ -19 ವೈರಸ್‌ ವಿರುದ್ಧ ಲಸಿಕೆ ಅಭಿವೃದ್ಧಿ ಪ್ರಯೋಗಕ್ಕೆ ಇಲ್ಲಿನ ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾಲಯ ಮುಂದಾಗಿದೆ. ಗುರುವಾರ ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಲಸಿಕೆಯ ಮಾನವ ಪ್ರಯೋಗಗಳ ಕೆಲಸ ಶುರುವಾಗಿದೆ. ಇಲ್ಲಿನ ವಿಜ್ಞಾನಿಗಳು ಶೇ.80 ರಷ್ಟು ಯಶಸ್ಸಿನ ಅವಕಾಶದಲ್ಲಿದ್ದಾರೆ. ಕೋವಿಡ್ -19 ವೈರಸ್‌ ಲಸಿಕೆ ಪ್ರಯೋಗ ಕಾರ್ಯಕ್ರಮ ಬೆಂಬಲಿಸಲು ಯುಕೆ ಸರಕಾರ, 20 ಮಿಲಿಯನ್‌ ಪೌಂಡ್‌ ನೀಡಲು ಮುಂದಾಗಿದೆ. ಇನ್ನು, ಯುಕೆ ಆರೋಗ್ಯ ಕಾರ್ಯದರ್ಶಿ ಮ್ಯಾಟ್‌ ಹ್ಯಾನ್‌ಕಾಕ್‌ ಅವರು ಮಾರಕ ವೈರಸ್‌ ವಿರುದ್ಧ ಲಸಿಕೆ ಕಂಡು ಹಿಡಿಯುವಲ್ಲಿ ಸರಕಾರ ಎಲ್ಲಾ ನಿಟ್ಟಿನಲ್ಲೂ ಸಹಕಾರ ನೀಡುತ್ತಿದೆ ಎಂದಿದ್ದಾರೆ.

Advertisement

ಪ್ರಯೋಗಿಸಲ್ಪಟ್ಟ ಲಸಿಕೆಯನ್ನು ನಿರುಪದ್ರವಿ ಚಿಂಪಾಂಜಿ ವೈರಸ್‌ನಿಂದ ತಯಾರಿಸಲಾಗಿದ್ದು, ಅದನ್ನು ಆರೋಗ್ಯದಿಂದ ಇರುವ 18 ರಿಂದ 55 ವರ್ಷದೊಳಗಿನ ಸ್ವಯಂ ಸೇವಕರ ಮೇಲೆ ಪರೀಕ್ಷಿಸಲು ಸಂಶೋಧಕರ ಪಡೆ ಸಜ್ಜಾಗಿದೆ. ಈ ಸಂಶೋಧನೆಯಲ್ಲಿ ಪಾಲ್ಗೊಳ್ಳಲು ಯುಕೆಯಲ್ಲಿನ ಸ್ವಯಂ ಸೇವಕರಿಗೆ ತಲಾ 625 ಪೌಂಡ್‌ ನೀಡಲಾಗುತ್ತಿದ್ದು, ಮುಂದಿನ ತಿಂಗಳ ಮಧ್ಯಭಾಗದಲ್ಲಿ 500 ಜನರನ್ನು ಇದಕ್ಕಾಗಿ ನಿಯೋಜಿಸಬೇಕಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಆಕ್ಸ್‌ಫ‌ರ್ಡ್‌ ಲಸಿಕೆ ಯೋಜನೆಯ ನೇತೃತ್ವವನ್ನು ಪ್ರೊಫೆಸರ್‌ ಸಾರಾ ಗಿಲ್ಬರ್ಟ್‌ ಮತ್ತು ಇತರೆ ರೋಗ ನಿರೋಧಕ ಶಕ್ತಿ ಮತ್ತು ಮಾನವ ತಳಿಶಾಸ್ತ್ರ ವಿಜ್ಞಾನಿಗಳು ವಹಿಸಿದ್ದು, ಈ ವರ್ಷದ ಜನವರಿಯಲ್ಲಿ ವೈರಸ್‌ ಲಸಿಕೆ ಅಭಿವೃದ್ಧಿಪಡಿಸುವ ಕೆಲಸ ಶುರು ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next