ರಿಯೊ ಡಿ ಜನೆರೊ : ಆಕ್ಸ್‌ಫೋರ್ಡ್ ವಿವಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯನ್ನು ಬ್ರೆಜಿಲ್‌ನಲ್ಲಿ ಪರೀಕ್ಷೆಗೊಳಪಡಿಸಲಾಗುವುದು. ಈ ಪ್ರಯೋಗದಲ್ಲಿ ಬ್ರೆಜಿಲ್‌ನ 2000 ಮಂದಿ ಕೋವಿಡ್ ಸೋಂಕಿತರಿಗೆ ಲಸಿಕೆ ನೀಡಲಾಗುವುದು. ಸಾವೊಪೌಲೊದಲ್ಲಿ 1,000 ಮಂದಿಯ ಮೇಲೆ ಲಸಿಕೆ ಪ್ರಯೋಗ ನಡೆಸಲು ಮಂಗಳವಾರವೇ ಬ್ರೆಜಿಲ್‌ನ ಆರೋಗ್ಯ ಸಚಿವಾಲಯ ಅನುಮತಿ ನೀಡಿದೆ. ಇನ್ನುಳಿದ 1,000 ಮಂದಿಯನ್ನು ರಿಯೊ ಡಿ ಜನೆರೊದಿಂದ ಆರಿಸಲಾಗುವುದು. ಬ್ರೆಜಿಲ್‌ನಲ್ಲಿ ಕೋವಿಡ್ ಸೋಂಕಿನ ಪ್ರಕರಣ ಏರುಗತಿಯಲ್ಲೇ ಇರುವುದರಿಂದ ಆ ದೇಶವನ್ನು ಲಸಿಕೆ ಪ್ರಯೋಗಕ್ಕಾಗಿ ಆರಿಸಲಾಗಿದೆ. ಮಂಗಳವಾರ ಇಲ್ಲಿ 1,262 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 24 ತಾಸುಗಳಲ್ಲಿ ಸಂಭವಿಸಿದ ಅತ್ಯಧಿಕ ಪ್ರಮಾಣದ ಸಾವು ಇದು. ಬ್ರೆಜಿಲ್‌ನ ದೊಡ್ಡ ನಗರಗಳಲ್ಲಿ ಇನ್ನೂ ಲಾಕ್‌ಡೌನ್ ಪೂರ್ತಿ ತೆರವಾಗಿಲ್ಲ. ಸೋಂಕಿನ ಗ್ರಾಫ್ ಮೇಲ್ಮುಖವಾಗಿರುವಾಗಲೇ ಲಸಿಕೆಯ ಪ್ರಯೋಗ ನಡೆಸುವ ಅಗತ್ಯವಿರುವುದರಿಂದ ಬ್ರಜಿÇನ್ನು ಆಯ್ದುಕೊಳ್ಳಲಾಗಿದೆ. ಅಮೆರಿಕ ಬಳಿಕ ಬ್ರೆಜಿಲ್‌ನಲ್ಲಿ ಹೆಚ್ಚು ಸೋಂಕಿತರಿದ್ದಾರೆ.