Advertisement

Oxford University Press: ಆಕ್ಸ್‌ಫ‌ರ್ಡ್‌ನ 2024ರ ವರ್ಷದ ಪದ “ಬ್ರೈನ್‌ ರಾಟ್‌”

04:00 AM Dec 04, 2024 | Team Udayavani |

ಹೊಸದಿಲ್ಲಿ: ಕೆಲಸಗಳ ಮಧ್ಯೆ ಪದೇ ಪದೇ ಮೊಬೈಲ್‌ ನೋಡುವುದು, 1 ಬೈಟ್‌ನಷ್ಟಿದ್ದರೂ ವೀಡಿಯೋಗಳನ್ನು ಸ್ಕಿಪ್‌ ಮಾಡುತ್ತಾ ಗಂಟೆಗಟ್ಟಲೆ ಕಳೆಯು ವುದನ್ನು “ಬ್ರೈನ್‌ ರಾಟ್‌’ ಎಂಬ ಪದ ದಿಂದ ಗುರುತಿಸಲಾಗುತ್ತಿದೆ. ಈ ಪದ ಇದೀಗ ಆಕ್ಸ್‌ಫ‌ರ್ಡ್‌ನ ವರ್ಷದ ಪದ ಎನಿಸಿಕೊಂಡಿದೆ. ಈ ವರ್ಷ ಈ ಪದದ ಬಳಕೆ ಶೇ.230ರಷ್ಟು ಹೆಚ್ಚಳವಾಗಿದೆ ಎಂದು ಆಕ್ಸ್‌ಫ‌ರ್ಡ್‌ ಸಂಸ್ಥೆ ಹೇಳಿದೆ.

Advertisement

ಆಕ್ಸ್‌ಫ‌ರ್ಡ್‌ ವಿವಿ ಪ್ರಸ್‌ನ ಪ್ರಕಾರ, ಈ ಪದ ಮನುಷ್ಯನ ಮಾನಸಿಕ ಮತ್ತು ಬೌದ್ಧಿಕ ಸ್ಥಿಮಿತತೆ ಹಾಳಾಗುತ್ತಿರುವುದನ್ನು ಇದು ಸೂಚಿಸುತ್ತದೆ. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಆನ್‌ಲೈನ್‌ನಲ್ಲಿ ಹೆಚ್ಚು ಕಾಲ ಕಳೆಯುವ ಮೂಲಕ ಸಾಮಾನ್ಯ ಜೀವನದಿಂದ ವಿಮುಖವಾಗುವುದನ್ನು ಸೂಚಿಸುತ್ತದೆ.

ಬಳಕೆ ಶೇ.230ರಷ್ಟು ಹೆಚ್ಚಳ:
ಈ ನುಡಿ ಗಟ್ಟಿನ ಬಳಕೆ ಹೆಚ್ಚಾಗುವಲ್ಲಿ ಸಾಮಾ ಜಿಕ ಜಾಲತಾಣಗಳ ಕೊಡುಗೆಯೂ ಸಹ ದೊಡ್ಡದಿದೆ. “ರಾಟಿಂಗ್‌ ಬ್ರೈನ್‌’ ಹೆಸರಲ್ಲಿ ಈ ವರ್ಷ ಅತಿಹೆಚ್ಚು ಮೀಮ್‌ಗಳು ಹರಿದಾಡಿವೆ. ಹೊಸ ತಲೆಮಾರಿನ ವಿದ್ಯಾರ್ಥಿಗಳು ಸಹ ಈ ಬಗ್ಗೆ ಹಾಸ್ಯ ಮಾಡುತ್ತಾ, ಆನ್ಲ„ನ್‌ನಲ್ಲೇ ಕಾಲ ಕಳೆಯತ್ತಿದ್ದಾರೆ. ಇದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಕ್ಸ್‌ಫ‌ರ್ಡ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next