Advertisement

ಆಕ್ಸ್‌ಫ‌ರ್ಡ್‌ ಲಸಿಕೆಯ ಎರಡು ಪ್ರಯೋಗ ಫ‌ಲಿತಾಂಶ ತೃಪ್ತಿಕರ

03:51 AM Jul 21, 2020 | Hari Prasad |

ಲಂಡನ್‌: ಕೋವಿಡ್ 19 ಲಸಿಕೆ ಸಂಶೋಧನೆಯಲ್ಲಿ ಜಗತ್ತಿನ ಗಮನ ಸೆಳೆದಿದ್ದ ಆಕ್ಸ್‌ ಫ‌ರ್ಡ್‌ ವಿವಿ ಲಸಿಕೆಯ ಆರಂಭಿಕ 2 ಹಂತದ ಪ್ರಯೋಗ ಫ‌ಲಿತಾಂಶಗಳು ಭರವಸೆ ಹೆಚ್ಚಿಸಿವೆ.

Advertisement

ಆಕ್ಸ್‌ಫ‌ರ್ಡ್‌ ತಜ್ಞರು ಶೋಧಿಸಿದ ‘ಎಝೆಡ್‌ಡಿ1222’ ಪಡೆದ ಹಲವರಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ.
ಯಾವುದೇ ಅಡ್ಡ ಪರಿಣಾಮ ನೀಡದೆ ಲಸಿಕೆ ಸೋಂಕಿತನ ದೇಹದಲ್ಲಿ ಕೆಲಸ ಮಾಡಿದೆ.

ಕೋವಿಡ್ 19 ವಿರುದ್ಧ ಪ್ರಬಲವಾಗಿ ಹೋರಾಡುವ ಟಿ-ಸೆಲ್‌ ರೋಗ ನಿರೋಧಕಗಳನ್ನು ಹೆಚ್ಚಿಸುವಲ್ಲಿ ಸಫ‌ಲವಾಗಿದೆ.

‘ಲಸಿಕೆ ದೀರ್ಘ‌ಕಾಲದವರೆಗೆ ರೋಗನಿರೋಧಕ ಶಕ್ತಿಯನ್ನು ರಕ್ಷಿಸುತ್ತದೆ. ಆದಾಗ್ಯೂ ಲಸಿಕೆ ಬಗ್ಗೆ ಹೆಚ್ಚಿನ ಸಂಶೋಧನೆಗೆ ಕಾಲಾವಕಾಶ ಬೇಕಿದೆ’ ಎಂದು ವಿವಿ ತಜ್ಞ ಆ್ಯಂಡ್ರೂ ಪೊಲಾರ್ಡ್‌ ಹೇಳಿದ್ದಾರೆ.

ಟೆಸ್ಟ್‌ ಯಶಸ್ವಿ
ಇಂಗ್ಲೆಂಡ್‌ನ‌ ಸಂಸ್ಥೆ ಸೋಂಕಿತರ ಮೇಲೆ ನಡೆಸಿದ ಪ್ರೊಟೀನ್‌ ಆಧಾರಿತ ಚಿಕಿತ್ಸೆ ಪ್ರಯೋಗ ಪರೀಕ್ಷೆ ಸಫ‌ಲತೆ ಕಂಡಿದೆ. ಎಸ್‌ಎನ್‌ಜಿ-0001 ಸೂತ್ರೀ ಕರಣದ ಇಂಟರ್‌ಫೆರಾನ್‌ ಬೇಟಾ ಎಂಬ ಪ್ರೊಟೀನನ್ನು ಬಳಸಿ ಈ ಚಿಕಿತ್ಸೆ ನೀಡಲಾಗುತ್ತದೆ. 9 ಆಸ್ಪತ್ರೆಗಳಲ್ಲಿ ಉಸಿರಾಟದ ವೇಳೆ ಆಮ್ಲಜನಕದ ಕೊರತೆ ಅನುಭವಿಸಿದ್ದ 101 ಸೋಂಕಿತ ಪ್ರತಿನಿಧಿಗಳಿಗೆ ಪ್ರೊಟೀನ್‌ ಲಸಿಕೆ ನೀಡಲಾಗಿತ್ತು. ಅದರಲ್ಲಿ ಸರಿಸುಮಾರು ಅರ್ಧದಷ್ಟು ಮಂದಿ ಚೇತರಿಸಿಕೊಂಡಿದ್ದಾರೆ.

Advertisement

ಕೊವ್ಯಾಕ್ಸಿನ್‌ ಮಾನವ ಪ್ರಯೋಗ ಶೀಘ್ರ
ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಆವಿಷ್ಕರಿಸಿದ ‘ಕೊವ್ಯಾಕ್ಸಿನ್‌’ ಅನ್ನು ಮಾನವನ ಮೇಲೆ ಪ್ರಯೋಗಿಸಲು ಸಂಸ್ಥೆ ಮುಂದಾಗಿದೆ. ಹೊಸದಿಲ್ಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಈ ವಾರ ಕೊವ್ಯಾಕ್ಸಿನ್‌ ಮಾನವ ಪರೀಕ್ಷೆ ಆರಂಭಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next