Advertisement

ಸೂ ಕಿ ಭಾವಚಿತ್ರ ಎತ್ತಂಗಡಿ

07:25 AM Oct 01, 2017 | Team Udayavani |

ಲಂಡನ್‌/ಢಾಕಾ: ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾಗಳ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯನ್ನು ಖಂಡಿಸಿ ಆಕ್ಸ್‌ಫ‌ರ್ಡ್‌ ವಿವಿಯ ಮುಖ್ಯ ಆವರಣದಲ್ಲಿ ಹಾಕಲಾಗಿದ್ದ ಆಂಗ್‌ ಸಾನ್‌ ಸೂ ಕಿ ತೈಲ ವರ್ಣ ಕಲಾಕೃತಿಯನ್ನು ತೆಗೆದು ಹಾಕಲಾಗಿದೆ.

Advertisement

ಕಾರ್ಯಾಚರಣೆ ವಿರುದ್ಧ  ಸೂ ಕಿ ಖಂಡನೆ ವ್ಯಕ್ತಪಡಿಸದೇ ಇದ್ದುದರಿಂದ ಅವರ ತೈಲಚಿತ್ರ ತೆಗೆಯಬೇಕು ಎಂದು ವಿವಿ ಆಡಳಿತದ ಮೇಲೆ ಒತ್ತಡ ಹೆಚ್ಚಾಗಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ. ಆದರೆ, ಚಿತ್ರ ತೆರವುಗೊಳಿಸಿರುವುದಕ್ಕೆ ಅಧಿಕೃತ ಕಾರಣ ನೀಡಲಾಗಿಲ್ಲ. ನೊಬೆಲ್‌ ಪ್ರಶಸ್ತಿ ಪುರಸ್ಕೃತ ನಾಯಕಿ 1967ರಲ್ಲಿ ವಿವಿಯ ಸೈಂಟ್‌ ಹಗ್ಸ್‌ ಕಾಲೇಜಿನಿಂದ ಪದವಿ ಪಡೆದಿದ್ದರು. 1997ರಲ್ಲಿ ಕಲಾವಿದ ಚೆನ್‌ ಯಾನಿಂಗ್‌ ಅವರು ಮ್ಯಾನ್ಮಾರ್‌ ನಾಯಕಿಯ ತೈಲಚಿತ್ರ ರಚಿಸಿದ್ದರು. 1999ರಿಂದ ಈ ಚಿತ್ರ ವಿವಿಯ ಮುಖ್ಯ ಆವರಣದಲ್ಲಿತ್ತು. 

ಸಾಂಕ್ರಾಮಿಕ ರೋಗ: ಈ ನಡುವೆ ಬಾಂಗ್ಲಾದೇಶದ ಕಾಕ್ಸ್‌ ಬಜಾರ್‌ನಲ್ಲಿ ಮ್ಯಾನ್ಮಾರ್‌ನಿಂದ ಬಂದಿರುವ ರೊಹಿಂಗ್ಯಾಗಳು ಇರುವ ಶಿಬಿರಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ. ಶೌಚಾಲಯ, ಕುಡಿಯುವ ನೀರಿನ ಕೊರತೆ ಹೆಚ್ಚಾಗಿ ಬಾಧಿಸುತ್ತಿರುವ ಕಾರಣ, ಅಲ್ಲಿ ಕಾಯಿಲೆಗಳು ಹರಡುವ ಆತಂಕ ಹೆಚ್ಚಿದೆ ಎಂದು ರಕ್ಷಣಾ ಕಾರ್ಯಕರ್ತರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next