Advertisement

ಗಮನ ಸೆಳೆದ ಜೋಡೆತ್ತಿನ ಗಾಡಿ ಶರ್ಯತ್ತು

02:15 PM Feb 17, 2020 | Suhan S |

ಚಿಕ್ಕೋಡಿ: ಮೂರು ವರ್ಷಕ್ಕೊಮ್ಮೆ ಜರುಗುವ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರೆ ಅಂಗವಾಗಿ ರವಿವಾರ ನಡೆದ ಅಂತಾರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಶರ್ಯತ್ತು, ಕುದರೆ ಗಾಡಿ ಶರ್ಯತ್ತು ಜನಮನ ಸೆಳೆದವು.

Advertisement

ಹತ್ತರವಾಟ ಗ್ರಾಮದಿಂದ ಹತ್ತರವಾಟ ಕ್ರಾಸ್‌ ದವರಿಗೆ ಅಂದಾಜು 6ಕಿ.ಮೀ. ದೂರದವರಿಗೆ ನಡೆದ ಅಂತಾರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಶರ್ಯತ್ತುಗಳಿಗೆ ತಾಪಂ ಮಾಜಿ ಸದಸ್ಯ ಅಶೋಕ ಹರಗಾಪುರೆ ಚಾಲನೆ ನೀಡಿದರು. ಜೋಡೆತ್ತಿನ ಗಾಡಿ ಶರ್ಯತ್ತು ಮತ್ತು ಕುದರೆ ಗಾಡಿ ಶರ್ಯತ್ತು ನೋಡಲು ನೆರೆಯ ಮಹಾರಾಷ್ಟ್ರ ಮತ್ತು ರಾಜ್ಯದ ಗಡಿ ಭಾಗದ ಸಾವಿರಾರು ಜನರು ಆಗಮಿಸಿದ್ದರು. ಈ ಜೋಡೆತ್ತಿನ ಗಾಡಿಯ ಶರ್ಯತ್ತಿನಲ್ಲಿ ಮಹಾರಾಷ್ಟ್ರದ ಧಾನೋಳಿ ಬಂಡಾ ಖೀಲಾರೆ ಎತ್ತುಗಳು ಪ್ರಥಮ ಸ್ಥಾನ ಪಡೆದು 50 ಸಾವಿರ ನಗದು ಬಹುಮಾನ ಪಡೆದವು. ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದ ಭೀಮಗೌಡ ಹುದ್ದಾರ ಎತ್ತುಗಳು ದ್ವಿತೀಯ ಸ್ಥಾನ ಪಡೆದು 40 ಸಾವಿರ ರೂ. ನಗದು ಬಹುಮಾನ ಪಡೆದರು. ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದ ಮಹಾದೇವ ಗಜಬರ ಎತ್ತುಗಳು ತೃತೀಯ ಸ್ಥಾನ ಪಡೆದು 30 ಸಾವಿರ ರೂ. ನಗದು ಬಹುಮಾನ ಪಡೆದವು.

ಹಲ್ಲು ಹಚ್ಚದ ಕುದುರೆ ಗಾಡಿ ಶರ್ಯತ್ತು: ಬಿದರೊಳ್ಳಿಯ ಅಶೋಕ ಕಿಲ್ಲೆದಾರ ಕುದುರೆ ಗಾಡಿ ಪ್ರಥಮ, ಹತ್ತರವಾಟದ ಬಸವರಾಜ ಕಮತೆ ಕುದರೆ ಗಾಡಿ ದ್ವಿತೀಯ, ಘಟಪ್ರಭಾದ ದಯಾನಂದ ಕಾಂಬಳೆ ಕುದರೆ ಗಾಡಿ ತೃತೀಯ ಸ್ಥಾನ ಪಡೆದವು. ಹಲ್ಲು ಹಚ್ಚಿದ ಕುದುರೆ ಗಾಡಿ ಶರ್ಯತ್ತು: ಮಹಾರಾಷ್ಟ್ರದ ಕುವಾಡದ ಪ್ರಮೋದ ರಜಪೂತ ಕುದರೆ ಗಾಡಿ ಪ್ರಥಮ, ಘಟಪ್ರಭಾದ ದಯಾನಂದ ಕಾಂಬಳೆ ದ್ವಿತೀಯ, ನರಸಿಂಹವಾಡಿಯ ಸಾಗರ ಗೌಂಡಿ ತೃತೀಯ ಸ್ಥಾನ ಪಡೆದವು.

ಒಂದು ಎತ್ತು ಮತ್ತು ಒಂದು ಕುದರೆ ಗಾಡಿ ಶರ್ಯತ್ತು: ಧಾನೋಳಿಯ ಬಂಡು ಖೀಲಾರೆ ಗಾಡಿ ಪ್ರಥಮ, ಸಾಂಗಲಿಯ ನಾಮದೇವ ಮಾನೆ ದ್ವಿತೀಯ, ಧಾನವಾಡದ ಸತೀಶ ಅಂಭಿ ಗಾಡಿ ತೃತೀಯ ಸ್ಥಾನ ಪಡೆದವು.

ಈ ವೇಳೆ ಗ್ರಾಮದ ಮುಖಂಡ ಅಶೋಕ ಹರಗಾಪುರೆ ಮಾತನಾಡಿ, ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಮಹಾಲಕ್ಷ್ಮೀ ದೇವಿ ಜಾತ್ರೆಯಲ್ಲಿ ಜನಪದ ಶೈಲಿಯ ಎತ್ತಿನ ಗಾಡಿ ಮತ್ತು ಕುದುರೆ ಗಡಿ ಶರ್ಯತ್ತುಗಳು ಸುತ್ತಮುತ್ತ ಹತ್ತಾರು ಹಳ್ಳಿಯ ಜನರಿಗೆ ಮನರಂಜನೆ ನೀಡಿವೆ. ಜಾತ್ರೆಗೆ ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯದ ಸುಮಾರು ಲಕ್ಷ ಜನರು ದರ್ಶನ ಪಡೆದುಕೊಂಡು ಹೋಗುತ್ತಾರೆ. ಶರ್ಯತ್ತಿನಲ್ಲಿ ಗೆದ್ದಿರುವ ಗಾಡಿಯ ಮಾಲೀಕರಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದರು.

Advertisement

ಈ ವೇಳೆ ಜೈನುಲುಬಾ ಪಟೇಲ, ರವೀಂದ್ರ ಹಿರೇಕೊಡಿ, ಕುಮಾರ ಕಮತೆ, ಪೀರ ಮುಲ್ಲಾ, ರಾಜು ಮಗದುಮ್ಮ, ಆನಂದ ಕಮತೆ, ಮನೋಹರ ಕಮತೆ ಸೇರಿದಂತೆ ಜಾತ್ರಾ ಕಮೀಟಿ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next