Advertisement

“ಯಂತ್ರಗಳಿಂದ ಎತ್ತು ಸಾಕಾಣಿಕೆ ಕ್ಷೀಣ’

01:08 PM Dec 22, 2017 | Team Udayavani |

ದೊಡ್ಡಬಳ್ಳಾಪುರ: ವ್ಯವಸಾಯಕ್ಕಾಗಿ ಎತ್ತುಗಳನ್ನು ಸಾಕಾಣಿಕೆ ಮಾಡುವುದು ಕಡಿಮೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೃಷಿ ಯಾಂತ್ರೀಕರಣಗೊಂಡಿದೆ. ಇಷ್ಟಾದರೂ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಎತ್ತುಗಳು ಬಂದಿರುವುದು ಸಂತಸದ ಸಂಗತಿಯಾಗಿದೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಮುನಿನರಸಿಂಹಯ್ಯ ಹೇಳಿದರು. ತಾಲೂಕಿನ ಎಸ್‌ಎಸ್‌ ಘಾಟಿ ಕ್ಷೇತ್ರದಲ್ಲಿ ನಡೆದ ಎತ್ತುಗಳ ಜಾತ್ರೆಗೆ ಬಂದಿದ್ದ ಉತ್ತಮ ಎತ್ತುಗಳ ಸಾಕಾಣಿಕೆ ರೈತರಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು.

Advertisement

ಎತ್ತುಗಳಿಗೆ ಅತ್ಯಂತ ಮಹತ್ವದ ಸ್ಥಾನ: ದೇವನಹಳ್ಳಿ ಸಮೀಪ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಾದ ನಂತರ ಕೃಷಿ ಹಾಗೂ ಎತ್ತುಗಳನ್ನು ಸಾಕಾಣಿಕೆ ಮಾಡುವ ರೈತರ ಸಂಖ್ಯೆಯು ಕಡಿಮೆಯಾಗಿದೆ. ಇಷ್ಟಾದರೂ ಕೆಲ ಹಿರಿಯ ರೈತರು ಇಂದಿಗೂ ಎತ್ತುಗಳನ್ನು ಸಾಕಾಣಿಕೆ ಮಾಡಿಕೊಂಡು ಜಾತ್ರೆಗೆ ಬಂದು ಬಹುಮಾನ ಪಡೆಯುವುದು ಹವ್ಯಾಸ ಮಾಡಿಕೊಂಡಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಕೃಷಿಗೆ ಹಾಗೂ ಕೃಷಿಯಲ್ಲಿ ಬಳಕೆ ಮಾಡುವ ಎತ್ತುಗಳಿಗೆ ಅತ್ಯಂತ ಮಹತ್ವದ ಸ್ಥಾನ ನೀಡಲಾಗಿದೆ. ಇದು ಹಿಗೇಯೇ ಮುಂದುವರಿಯಬೇಕು ಎಂದರು.

ಎಪಿಎಂಸಿಯಿಂದ ಬಹುಮಾನ: ಚನ್ನರಾಯಪ್ಪಟ್ಟಣ ಜಿಪಂ ಕ್ಷೇತ್ರದ ಸದಸ್ಯ ಲಕ್ಷ್ಮೀನಾರಾಯಣಪ್ಪಮಾತನಾಡಿ, ಆಗ ಸಾವಿರಾರು ಸಂಖ್ಯೆಯಲ್ಲಿ ಜಾತ್ರೆಗೆ ಎತ್ತುಗಳು ಬರುತ್ತಿದ್ದವು. 20 ದಿನಗಳ ಕಾಲ ಜಾತ್ರೆ ನಡೆಯುತಿತ್ತು. ಆದರೆ ಈಗ ರಥೋತ್ಸವಕ್ಕೂ ಮುನ್ನವೇ ಎತ್ತುಗಳ ಜಾತ್ರೆ ಮುಕ್ತಾಯವಾಗುತ್ತಿದೆ. ರಥೋತ್ಸವದ ದಿನದವರೆಗೂ ಎತ್ತುಗಳ ಜಾತ್ರೆ ನಡೆಯುವಂತೆ ರೈತರು ಸಹಕಾರ ನೀಡಬೇಕು. ಈ ಬಾರಿ ಉತ್ತುಮ ಎತ್ತುಗಳನ್ನು ಸಾಕಾಣಿಕೆ ಮಾಡಿದ್ದ ರೈತರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ 10,000, 7,500 ಹಾಗೂ 5,000 ರೂ.ಗಳ ನಗದು ಬಹುಮಾನ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.

ಘಾಟಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಿ.ಎಂ.ಚನ್ನಪ್ಪಮಾತನಾಡಿ, ಜಾತ್ರೆಯಲ್ಲಿ ಭಾಗವಹಿಸಿದ್ದ ಉತ್ತಮ ಎತ್ತುಗಳಿಗೆ ವಿವಿಧ ಮೂರು ವಿಭಾಗಗಳಲ್ಲಿ ಆಯ್ಕೆಯಾದ ಜೋಡಿಗಳಿಗೆ ಬೆಳ್ಳಿ ಬಟ್ಟಲುಗಳನ್ನು ಬಹುಮಾನಗಳಾಗಿ ನೀಡಲಾಗುತ್ತಿದೆ ಎಂದರು.

ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷೆ ಅಮರಾವತಿ, ಕಾರ್ಯದರ್ಶಿ ಸಿದ್ದಲಿಂಗಸ್ವಾಮಿ, ನಿರ್ದೇಶಕ ಕೆ.ಸಿ.ಲಕ್ಷ್ಮೀನಾರಾಯಣ್‌, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ.ಜಲಧಿ ರಂಗಣ್ಣ, ದೇವಾಲಯದ ಪ್ರಧಾನ ಅರ್ಚಕ ಮನಾಥಶರ್ಮಾ, ಜಿಪಂ ಸದಸ್ಯ ಜಿ.ಚುಂಚೇಗೌಡ, ಪಶುವೈದ್ಯಾಧಿಕಾರಿ ಡಾ.ವಿಶ್ವನಾಥ್‌, ದೇವಾಲಯ ವ್ಯವಸ್ಥಾಪನ ಸಮಿತಿ ಸದಸ್ಯರಾದ ಎಸ್‌.ಆರ್‌.ಮುನಿರಾಜು, ಮಂಜಣ್ಣ, ನಾಗರತ್ನಮ್ಮ, ಜಗನ್ನಾಥಚಾರ್‌, ಕಾಂಗ್ರೆಸ್‌ ಮುಖಂಡ ಆಂಜಿನಪ್ಪ, ಮುಖಂಡರಾದ ಮುತ್ತಣ್ಣ ಭಾಗವಹಿಸಿದ್ದರು.

Advertisement

ಎತ್ತುಗಳ ಸಾಕಾಣಿಕೆಯಲ್ಲಿ ವಿಶೇಷ ಬಹುಮಾನ ಪಡೆದ ರೈತರು: ಮಹದೇವ ಕೊಡಿಗೇಹಳ್ಳಿಯ ಪುಟ್ಟಪ್ಪ(ಪ್ರಥಮ), ಚನ್ನರಾಯಪಟ್ಟಣದ ಕೃಷ್ಣಪ್ಪ(ದ್ವಿತೀಯ), ದೊಡ್ಡಚೀಮನಹಳ್ಳಿ ಎನ್‌.ಎ.ಮಂಜುನಾಥ್‌ (ತೃತೀಯ), ಸಮಾಧಾನಕರ
ಬಹುಮಾನ-ಹೆಗ್ಗಡಿಹಳ್ಳಿ ಮುನೇಗೌಡ, ಬಸವಪುರ ಮುನಿರಾಜು, ಮಹದೇವಕೊಡಿಗೇಹಳ್ಳಿ ಮುನಿಸ್ವಾಮೇಗೌಡ, ಎರಡು ಹಲ್ಲಿನ ಹೋರಿಗಳ ವಿಭಾಗ- ಹೆಗ್ಗಡಿಹಳ್ಳಿ ವೆಂಕಟೇಶಪ್ಪ, ಸಂತೆಕಲ್ಲಹಳ್ಳಿ ಹೋರಿನಾರಾಯಣಪ್ಪ, ಸೋಣ್ಣಪನಹಳ್ಳಿ ಮಹೇಂದ್ರನಾಯ್ಕ. ಹಾಲು ಹಲ್ಲಿನ ಜೊತೆ ಎತ್ತುಗಳ ವಿಭಾಗ- ಬಿ.ಚನ್ನಸಂದ್ರ ಕೆ.ಮಾರಣ್ಣ (ಪ್ರಥಮ), ಗಡೇನಹಳ್ಳಿ ಜಿ.ಮೂರ್ತಿ (ದ್ವಿತೀಯ), ವಿಜಯಪುರ ಮರವೆ ಆನಂದ (ತೃತೀಯ), ದೇವನಹಳ್ಳಿ ಪೈಲ್ವಾನ್‌ ವೆಂಕಟರಮಣಪ್ಪ, ಮಹದೇವ ಕೊಡಿಗೇಹಳ್ಳಿ, ಮಹೇಂದ್ರ, ಸಮಾಧಾನಕಾರ ಬಹುಮಾನ- ಎರಡು ಹಲ್ಲಿನ ಜೊತೆ ಎತ್ತುಗಳು- ಚನ್ನಹಳ್ಳಿಮುನಿಯಪ್ಪ(ಪ್ರಥಮ), ನಾಲ್ಕು ಹಲ್ಲಿನ ಜೊತೆ ಎತ್ತುಗಳು- ಮಹದೇವ ಕೊಡಿಗೇಹಳ್ಳಿ ಪುಟ್ಟಪ್ಪ(ಪ್ರಥಮ), ವಿಜಯಪುರ ಆದರ್ಶ (ದ್ವಿತೀಯ), ಬೀಸಗಾನಹಳ್ಳಿ ಕರಗಪ್ಪ(ತೃತೀಯ). ಆರು ಹಲ್ಲಿನ ಜೊತೆ ಎತ್ತುಗಳು- ಮಹದೇವ ಕೊಡಿಗೇಹಳ್ಳಿ ನಾರಾಯಣಸ್ವಾಮಿ (ಪ್ರಥಮ), ವಿಜಯಪುರ ಮರವೇ ನಾರಾಯಣಪ್ಪ (ದ್ವಿತೀಯ), ಬಂಡಿಕೊಡಿಗೇಹಳ್ಳಿ ನರಸಪ್ಪ(ತೃತೀಯ). ಬಾಯಿಗೂಡಿದ ಜೊತೆ ಎತ್ತುಗಳು- ವಿಜಯಪುರ ಮರವೆಕೆಂಪಣ ¡(ಪ್ರಥಮ), ಮಹದೇವ ಕೊಡಿಗೇಹಳ್ಳಿ ಪುಟ್ಟಶಾಮಪ್ಪ(ದ್ವಿತೀಯ). 

Advertisement

Udayavani is now on Telegram. Click here to join our channel and stay updated with the latest news.

Next