Advertisement

ಮಾಲೀಕರ ಅತಿ ಆಸೆ ಭವಿಷ್ಯದ ಆತಂಕಕೆ ಮೂಲ!

12:00 PM Oct 24, 2021 | Team Udayavani |

ಬೆಂಗಳೂರು: ಕಟ್ಟಡ ಮಾಲೀಕರೆ ನಿಮ್ಮ ಅತಿ ಆಸೆ ಭವಿಷ್ಯದ ಆತಂಕಕ್ಕೆ ಮೂಲ! ಹೌದು, ಕೊನೆಯ ಕ್ಷಣದಲ್ಲಿ ವಿನ್ಯಾಸ ಬದಲಾವಣೆ, ದುಪ್ಪಟ್ಟು ಗಳಿಕೆಗೆಂದು ನಿಗದಿಗಿಂತ ಹೆಚ್ಚು ಅಂತಸ್ತು ನಿರ್ಮಾಣ, ಹಣ ಉಳಿತಾಯಕ್ಕೆ ಕಟ್ಟಡ ನಿರ್ವಹಣೆ ಬಗ್ಗೆ ಉದಾಸೀನದಂತಹ ಸಾಹಸಗಳು ಕಟ್ಟಡಗಳ ಆಯಸ್ಸನ್ನು ಗೊತ್ತಿಲ್ಲದೇ ಕುಗ್ಗಿಸಲಿದೆ. ಇದು ಭವಿಷ್ಯದಲ್ಲಿ ವಿವಿಧ ರೀತಿಯ ಸಮಸ್ಯೆಗಳಿಗೆ ಕಾರಣ ವಾಗುತ್ತಿದೆ.

Advertisement

ಇತ್ತೀಚೆಗೆ ಕಟ್ಟಡ ಕುಸಿತ ಘಟನೆಗಳಲ್ಲಿ ಇಂಥ ಉದಾಹರಣೆಗಳನ್ನು ಕಾಣಬಹುದು. ಸೆ.27 ರಂದು ಲಕ್ಕಸಂದ್ರದಲ್ಲಿ 3 ಅಂತಸ್ತಿನ 60 ವರ್ಷ ಹಳೆಯ ಶಿಥಿಲವಾಗಿ ಕಟ್ಟಡ ಕುಸಿತವಾ ಯಿತು. ನಿರ್ವಹಣೆ ಇಲ್ಲದೆ ಕಟ್ಟಡ ಶಿಥಿಲಗೊಂಡಿದೆ ಎಂದು ತಿಳಿಸಿದ್ದರು, ಇದರ ಮಾಲೀಕ ಹಣದ ಆಸೆಗೆ ಮೆಟ್ರೋ ಕಾರ್ಮಿಕರಿಗೆ ಮನೆ ಬಾಡಿಗೆ ನೀಡಿದ್ದರು. ಬರೋಬ್ಬರಿ 40 ಮಂದಿ ಕಾರ್ಮಿಕರು ವಾಸವಿದ್ದರು.

ಅ.13ರಂದು ಮಹಾಲಕ್ಷ್ಮೀ ಲೇಔಟ್‌ ಕಮಲಾ ನಗರ ಬಳಿ 15 ವರ್ಷಗಳ ಹಿಂದೆ ನಿರ್ಮಿಸಿದ್ದ ಮೂರು ಅಂತಸ್ತಿನ ಕಟ್ಟಡ. ಶಿಥಿಲಗೊಂಡ ಕಟ್ಟಡಗಳ ಸಮೀಕ್ಷೆ ಪಟ್ಟಿಯಲ್ಲಿದ್ದರೂ, ಮಾಲೀಕರು ಎರಡು ಬಾರಿ ನೋಟಿಸ್‌ ನೀಡಲಾಗಿತ್ತು. ಬ್ಯಾಂಕ್‌ ಸಾಲ ತೀರಿಸಲು ಮತ್ತು ಬಾಡಿಗೆ ಆಸೆಗೆ ಬಾಡಿಗೆ ನೀಡಿ ಬಾಡಿಗೆದಾರರನ್ನು ಅಪಾಯಕ್ಕೆ ಸಿಲುಕಿದ್ದರು. ಅ.17 ರಂದು ಮೈಸೂರು ರಸ್ತೆಯ ಬಿನ್ನಿಮಿಲ್ನ ಪೊಲೀಸ್‌ ಕ್ವಾಟ್ರರ್ಸ್‌ ಕಟ್ಟಡ. ನಿರ್ಮಾಣ ಗೊಂಡು ಮೂರೇ ವರ್ಷಕ್ಕೆ ಕುಸಿದಿದೆ. 18 ಕೋಟಿ ವೆಚ್ಚದಲ್ಲಿ 128 ಫ್ಲಾಟ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಕಳಪೆ ಕಾಮಗಾರಿ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಕುಸಿತಕಟ್ಟಡಗಳಲ್ಲಿ ಬಹುತೇಕ ಕಟ್ಟಡಗಳು ಕಟ್ಟಡ ವಿನ್ಯಾಸ ನಿಯಮ ಪಾಲಿಸಿಲ್ಲ ಎಂದು ಸ್ಥಳ ಪರಿಶೀಲನೆ ನಡೆಸಿರುವ ಬಿಬಿಎಂಪಿ ಎಂಜಿನಿಯರ್‌ಗಳ ತಿಳಿಸಿದ್ದಾರೆ. ‌

ಶೇ.99 ರಷ್ಟು ಕಟ್ಟಡ ವಿನ್ಯಾಸ ಕೇವಲ ಅನುಮತಿಗೆ ಸೀಮಿತ: ಕೊನೆ ಕ್ಷಣ ಬದಲಾವಣೆ ಮನೆ ನಿರ್ಮಾಣ ಸಂದರ್ಭದಲ್ಲಿ ವಿನ್ಯಾಸ ಸಿದ್ಧಪಡಿಸಲಾಗುತ್ತದೆ. ಆದರೆ, ಈ ವಿನ್ಯಾಸವು ಕೇವಲ ಬಿಬಿಎಂಪಿ ಅನುಮತಿ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿದೆ. ಮನೆ ನಿರ್ಮಾಣ ಸಂದರ್ಭದಲ್ಲಿ ಶೇ. 99 ರಷ್ಟು ಮಾಲೀಕರು ತಮ್ಮ ಅನುಕೂಲಕ್ಕೆ ತಕ್ಕಂತೆ ವಿನ್ಯಾಸ ಬದಲಾವಣೆ ಮಾಡುತ್ತಾರೆ.

ಎಂಜಿನಿಯರ್‌ಗಳು ಒಪ್ಪದಿದ್ದರೆ ಮೆಸಿŒಗಳಿಂದ ಕೆಲಸ ಮಾಡಿಕೊಳ್ಳುತ್ತಾರೆ. ಇಂತಹ ಮನಸ್ಥಿತಿಯು ಕಟ್ಟಡಕ್ಕೆ ಭವಿಷ್ಯದಲ್ಲಿ ಹಾನಿ ಮಾಡುತ್ತದೆ ಎನ್ನುತ್ತಾರೆ ನಗರದ ಖಾಸಗಿ ಸಂಸ್ಥೆಗಳ ಸಿವಿಲ್‌ ಇಂಜಿಯರ್‌ಗಳು. ಮಾಲೀಕರ ಆಸೆಗೆ ಐದು ಸಾವಿರ ಕಟ್ಟಡ ಅಂತಸ್ತು ಹೆಚ್ಚಿವೆ: ನಗರದಲ್ಲಿ 5000ಕ್ಕೂ ಅಧಿಕ ಕಟ್ಟಡಗಳು ಅನುಮತಿಗಿಂತಲು ಅಧಿಕ ಎತ್ತರದಲ್ಲಿ ನಿರ್ಮಾ ಣವಾಗಿವೆ ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ ಒಂದು ಅಥವಾ ಎರಡು ಅಂತಸ್ತಿಗೆ ಅನುಮತಿ ಪಡೆದಿರುತ್ತಾರೆ ಆದರೆ ಭವಿಷ್ಯದಲ್ಲಿ ಒಂದರ ಮೇಲೊಂದು ಅಂತಸ್ತು ನಿರ್ಮಿಸಿದ್ದಾರೆ. ಆದರೆ, ಕಟ್ಟಡದ ಪಾಯವನ್ನು ಮಾತ್ರ ಬಿಗಿ ಮಾಡಿಕೊಂಡಿರುವುದಿಲ್ಲ. ಇದು ಕೂಡಾ ಕಟ್ಟಡ ಹಾನಿಗೆ ಕಾರಣವಾಗುತ್ತದೆ ಎನ್ನುತ್ತಾರೆ ಬಿಬಿಎಂಪಿ ಎಂಜಿನಿಯರ್‌ಗಳು.

Advertisement

ಕಟ್ಟಡ ನಿರ್ಮಾಣ, ಅಂತಸ್ತು ಹೆಚ್ಚಿಸುವವರಿಗೆ ತಜ್ಞರ ಸಲಹೆ

ಪಕ್ಕದಲ್ಲಿ ಬೇರೆ ಸ್ವತ್ತು ಇದ್ದರೆ ನಿವೇಶನ ಅಳತೆಗೆ ಅನುಸಾರ ಜಾಗ ಬಿಟ್ಟು ಕಟ್ಟಡವನ್ನು ನಿರ್ಮಿಸಬೇಕು. (ಸದ್ಯ 30/40 ಅಡಿ ವಿಸ್ತೀರ್ಣದ ಕಟ್ಟಡಕ್ಕೆ ಸುತ್ತ ಐದು ಅಡಿ ಅಂತರ ನಿಯಮವಿದೆ)

ನಿವೇಶನದ ನಡುವೆ ಎತ್ತರ ವ್ಯತ್ಯಾಸ ಇದ್ದಾಗ ಅರ್ಥ ರಿಟೈನಿಂಗ್ವಾಲ್‌ (ಆನ್ಸಿಸಿ) ಕಡ್ಡಾಯವಾಗಿ ನಿರ್ಮಿಸಬೇಕು.

ಪಾಯ ಹಾಕುವ ಮೂಲಕ ಮಣ್ಣಿನ ಪರೀಕ್ಷೆ ಮಾಡಿಸಿ ಅನುಮತಿ ಪಡೆದಷ್ಟು ಮಾತ್ರ ಅಂತಸ್ತು ನಿರ್ಮಿಸಬೇಕು.

ಹೆಚ್ಚುವರಿ ಅಂತಸ್ತು ಕಟ್ಟುವ ಮುಂಚೆ ಗುಣಮಟ್ಟ ಮತ್ತು ಜತೆಗೆ ಪಾಯ ಆಳ ಸಾಮರ್ಥ್ಯ ಪರೀಕ್ಷೆ ಮಾಡಿಸಬೇಕು.

ಕಡ್ಡಾಯವಾಗಿ ಎಂಜಿನಿಯರ್ಗಳು ನೀಡಿರುವ ವಿನ್ಯಾಸ ಪಾಲಿಸಬೇಕು.

 ನಗರದಲ್ಲಿ ಸರಾಸರಿ 10 ರಲ್ಲಿ 3-4 ಕಟ್ಟಡಗಳು ಸೂಕ್ತ ನಿರ್ವಹಣೆ ಇರುವುದಿಲ್ಲ. ಬಹುತೇಕರು ಕಟ್ಟಡ ವಿನ್ಯಾಸ ಪಾಲನೆ ಮಾಡುವುದಿಲ್ಲ. ಎರಡು ಅಂಶಗಳನ್ನು ಸೂಕ್ತ ಪಾಲಿಸಿದರೆ ಕಟ್ಟಡಕ್ಕೆ ಭವಿಷ್ಯದಲ್ಲಾಗುವ ಹಾನಿ, ಅವಘಡಗಳನ್ನು ತಪ್ಪಿಸಬಹುದು. ಟಿ.ವಿಶ್ವನಾಥ್‌, ಮುಖ್ಯ ಎಂಜಿನಿಯರ್‌, ಪಶ್ಚಿಮ ವಲಯ, ಬಿಬಿಎಂಪಿ

ಬಹುತೇಕ ಕಟ್ಟಡ ಮಾಲೀಕರು ಎಂಜಿನಿರ್ಗಳು ಹೇಳುವ ನಿಯಮ ಪಾಲಿಸುವುದಿಲ್ಲ. ವಿನ್ಯಾಸ/ ನಕ್ಷೆ ಪಾಲನೆ ವೇಳೆ ಹೆಚ್ಚು ಜಾಗಕ್ಕೆ, ನಿರ್ಮಾಣ ಸಾಮಗ್ರಿ ಗಳ ವಿಚಾರದಲ್ಲಿ ಹಣ ಉಳಿತಾಯಕ್ಕೆ, ಅನುಮತಿಗಿಂತ ಹೆಚ್ಚು ಅಂತಸ್ತು ಅಥವಾ ರೂಮ್ನಿರ್ಮಿಸಲು ನೀಡುತ್ತಾರೆ. ಮಾಲೀಕರ ಲೆಕ್ಕಕ್ಕೆ ನಿಯಮಗಳು ಕೇವಲ ಕಾಗದಕ್ಕೆ ಸೀಮಿತವಷ್ಟೇ. – ಪ್ರವೀಣ್ಕುಮಾರ್ಜಿ ಮುಂದಾಸದ್‌, ಸಿವಿಲ್ಎಂಜಿನಿಯರ್‌, ಖಾಸಗಿ ಕಂಪನಿ

Advertisement

Udayavani is now on Telegram. Click here to join our channel and stay updated with the latest news.

Next