Advertisement

ನಡುಗಡ್ಡೆ ಪ್ರದೇಶ ಕಟ್ಟಡಗಳ ಸ್ವಾಧೀನಕ್ಕೆ ಮಾಲೀಕರ ಒತ್ತಾಯ

10:17 AM Aug 25, 2019 | Team Udayavani |

ಬಾಗಲಕೋಟೆ: ನಗರದ ವಾರ್ಡ್‌ ನಂ 1,2,3,4,6 ಹಾಗೂ 9ಗಳು ನಡುಗಡ್ಡೆ ಪ್ರದೇಶವೆಂದು ಘೋಷಿಸಲ್ಪಟ್ಟ 855 ಕಟ್ಟಡಗಳನ್ನು ಕೂಡಲೇ ಸ್ವಾಧೀನ ಪಡಿಸಿಕೊಳ್ಳುವಂತೆ ನಡುಗಡ್ಡೆ ಪ್ರದೇಶದ ಕಟ್ಟಡಗಳ ಮಾಲೀಕರು ಒತ್ತಾಯಿಸಿದ್ದಾರೆ.

Advertisement

ಚರಂತಿಮಠದ ಶ್ರೀ ಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಶಾಸಕ ಡಾ|ವೀರಣ್ಣ ಚರಂತಿಮಠ ಅವರಿಗೆ ಮನವಿ ಸಲ್ಲಿಸಿದರು.

ಆಲಮಟ್ಟಿ ಜಲಾಶಯವನ್ನು ಈಗಿರುವ 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿದಾಗ ನಗರದ ಕಿಲ್ಲಾ ಭಾಗದ ಆರು ವಾರ್ಡಗಳು ನಡುಗಡ್ಡೆ ಪ್ರದೇಶಗಳಾಗಲಿವೆ. ಇಲ್ಲಿನ ಜನರಿಗೆ ಆಗುವ ತೊಂದರೆಗಳ ಕುರಿತು ಶಾಸಕರ ಗಮನಕ್ಕೆ ತಂದರು.

ಈಗಾಗಲೇ ಈ ಪ್ರದೇಶದ ಕಟ್ಟಡಗಳು ಸ್ವಾಧೀನ ಪ್ರಕ್ರಿಯೆ ಬಗ್ಗೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮುಖ್ಯ ಅಭಿಯಂತರರು ಮೇಲಧಿಕಾರಿಗಳಿಗೆ ಸ್ಪಷ್ಟ ಅಭಿಪ್ರಾಯ ತಿಳಿಸಿದ್ದಾರೆ. ಆದ್ದರಿಂದ ಸ್ವಾಧೀನ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.

513-100ಮೀ ಕೌಂಟರಿನಲ್ಲಿ ಬರುವ ಬಾಡಿಗೆದಾರರಿಗೆ ಈವರೆಗೆ ನಿವೇಶನ ಹಂಚಿಕೆ ಮಾಡಿಲ್ಲ. ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಬಾಡಿಗೆದಾರರು ಬಹುವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದು, ನಿವೇಶನ ಹಂಚಿಕೆ ಮಾಡಲು ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಶಾಸಕ ಡಾ| ವೀರಣ್ಣ ಚರಂತಿಮಠ ಶೀಘ್ರವೇ ಈ ಕಾರ್ಯಕ್ಕೆ ಸೂಚನೆ ನೀಡಲಾಗುತ್ತದೆ. ಆರು ನಡುಗಡ್ಡೆ ಪ್ರದೇಶಗಳ 855 ಕಟ್ಟಡಗಳು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯುರಪ್ಪ ಅವರೊಂದಿಗೆ ಚರ್ಚಿಸಿದ್ದು, ಅವರು ಕೂಡ ಈ ಕಾರ್ಯಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.

Advertisement

ಪ್ರಮುಖರಾದ ಎ.ಎ. ದಂಡಿಯಾ, ಈಶ್ವರ ಸುಗಂಧಿ, ಅರವಿಂದ ಮುಚಖಂಡಿ, ದೀಪಕ ಹಂಚಾಟೆ, ನಿವೃತ್ತ ಶಿಕ್ಷಕ ವಿ.ಕೆ. ಕಾವೇರಿ, ಜಿ.ಎಂ. ಟಂಕಸಾಲಿ, ಈರಣ್ಣ ನಾವಲಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next