Advertisement

ಶಾರುಖ್ ಪುತ್ರನಿಗೆ ಧೈರ್ಯ ತುಂಬಿದ ನಟ ಹೃತಿಕ್ ರೋಷನ್

06:32 PM Oct 07, 2021 | Team Udayavani |

ಬೆಂಗಳೂರು: ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಬಂಧಿತನಾದ ಶಾರುಖ್ ಪುತ್ರ ಆರ್ಯನ್ ಖಾನ್ ಪರ ಬಾಲಿವುಡ್‍ನ ಕೆಲವು ಸೆಲೆಬ್ರಿಟಿಗಳು ಬೆಂಬಲ ಸೂಚಿಸಿದ್ದಾರೆ. ಶಾರುಖ್ ಮನೆಗೆ ತೆರಳಿ ಧೈರ್ಯ ತುಂಬಿದ್ದಾರೆ. ಇದೀಗ ನಟ ಹೃತಿಕ್ ರೋಷನ್ ಅವರು ಆರ್ಯನ್ ಉಲ್ಲೇಖಿಸಿ ಪತ್ರವೊಂದನ್ನು ಬರೆದಿದ್ದಾರೆ.

Advertisement

ನನ್ನ ಪ್ರೀತಿಯ ಆರ್ಯನ್​ ಖಾನ್​..’ ಎಂದು ಹೃತಿಕ್​ ಈ ಪತ್ರ ಆರಂಭಿಸಿದ್ದಾರೆ. ‘ಬದುಕೊಂದು ವಿಚಿತ್ರವಾದ ಪ್ರಯಾಣ. ಅನಿಶ್ಚಿತತೆ ಮತ್ತು ಕಷ್ಟದ ಕಾರಣದಿಂದಲೇ ಇದು ಮಹಾನ್​ ಎನಿಸಿಕೊಂಡಿದೆ. ಆದರೆ ದೇವರು ಕರುಣಾಮಯ. ಪ್ರಬಲರಿಗೆ ಮಾತ್ರ ಅವನು ಕಠಿಣವಾದ ಕಷ್ಟ ಕೊಡುತ್ತಾನೆ. ಸಿಟ್ಟು, ಗೊಂದಲ, ಅಸಹಾಯಕತೆ ಎಲ್ಲವನ್ನೂ ನೀನು ಫೀಲ್​ ಮಾಡಬೇಕು. ನಿನ್ನೊಳಗಿನ ನಾಯಕನನ್ನು ಹೊರತರಲು ಇವು ಪ್ರಮುಖ ಅಂಶಗಳು. ಆದರೆ ಹುಷಾರು, ಒಳ್ಳೆಯತನವನ್ನೂ ಇವು ಸುಟ್ಟು ಹಾಕಬಹುದು’.

ಅನುಭವಗಳಿಂದ ಯಾವ ಅಂಶವನ್ನು ನಮ್ಮ ಜೊತೆಗೆ ಇಟ್ಟುಕೊಳ್ಳಬೇಕು ಮತ್ತು ಯಾವುದನ್ನು ದೂರ ಎಸೆಯಬೇಕು ಎಂದು ಅರ್ಥ ಮಾಡಿಕೊಂಡಾಗ ತಪ್ಪು, ಸೋಲು, ಯಶಸ್ಸು ಇವೆಲ್ಲವೂ ಒಂದೇ ಎನಿಸುತ್ತದೆ. ಅವೆಲ್ಲವುಗಳಿಂದ ನೀನು ಇನ್ನೂ ಚೆನ್ನಾಗಿ ಬೆಳೆಯಬಹುದು. ನಿನ್ನನ್ನು ಚಿಕ್ಕಂದಿನಿಂದಲೂ ನೋಡುತ್ತಿದ್ದೇನೆ.   ಎಲ್ಲ ಅನುಭವಗಳನ್ನು ನಿನ್ನದಾಗಿಸಿಕೋ. ಅವು ನಿನ್ನ ಉಡುಗೊರೆಗಳು’ ಎಂದು ಹೃತಿಕ್​ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next