Advertisement

ಖಗೋಳ ವಿಜ್ಞಾನಿಗಳಿಗಾಗಿ ಓವನ್‌ ಕಳುಹಿಸಿದ ನಾಸಾ!

10:01 AM Nov 04, 2019 | Team Udayavani |

ವರ್ಜೀನಿಯಾ: ಊರಿನಿಂದ ಊರಿಗೆ, ದೇಶದಿಂದ ದೇಶಕ್ಕೆ ಸಾಮಗ್ರಿಗಳನ್ನು ರವಾನೆ ಮಾಡುವುದನ್ನು ನಾವು ಕೇಳಿದ್ದೇವೆ. ಆದರೀಗ, ಬಾಹ್ಯಾಕಾಶದಲ್ಲಿ ಕಾರ್ಯನಿರತರಾಗಿರುವ ಅಮೆರಿಕದ ಗಗನಯಾತ್ರಿಗಳ ಉಪಯೋಗಕ್ಕಾಗಿ ಓವನ್‌ ಸಹಿತ ಸುಮಾರು 3,700 ಕೆ.ಜಿ. ತೂಕದಷ್ಟು ಸರಕನ್ನು ಭೂಮಿಯಿಂದ ರವಾನೆ ಮಾಡಲಾಗಿದೆ! ವರ್ಜೀನಿಯಾದ ವಲ್ಲೊಪ್ಸ್‌ ದ್ವೀಪದಿಂದ ಹೊರಟ ಸಿಗ್ನಸ್‌ ಕ್ಯಾಪುÕಲ್‌ ಎಂಬ ರಾಕೆಟೊಂದು ಈ ಸಾಮಗ್ರಿಗಳನ್ನು ಹೊತ್ತು ಬಾಹ್ಯಾಕಾಶದತ್ತ ಹೆಜ್ಜೆ ಹಾಕಿದೆ. ನಾರ್ತೋಪ್‌ ಗ್ರುಮನ್‌ ಎಂಬ ಖಾಸಗಿ ರಾಕೆಟ್‌ ಸಂಸ್ಥೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆಗಾಗಿ ಈ ರಾಕೆಟನ್ನು ಉಡಾಯಿಸಿದೆ.

Advertisement

ಬಾಹ್ಯಾಕಾಶ ನಿಲ್ದಾಣ ತಲುಪಲಿರುವ ಈ ರಾಕೆಟ್‌ನಿಂದ ವಿಜ್ಞಾನಿಗಳು ತಮಗೆ ಬೇಕಾದ ಪರಿಕರಗಳನ್ನು ಪಡೆಯಲಿದ್ದಾರೆ. ಇದರಲ್ಲಿ, ವಿಜ್ಞಾನಿಗಳು ಬಿಸ್ಕೇಟ್‌ಗಳನ್ನು ತಯಾರಿಸಿಕೊಳ್ಳಲು ಬೇಕಾದ ಓವನ್‌ನಿಂದ ಹಿಡಿದು ನ್ಪೋರ್ಟ್ಸ್ ಕಾರುಗಳಲ್ಲಿ ಉಪಯೋಗಿಸುವ ಕಾರ್ಬನ್‌ ಫೈಬರ್‌, ಕೆಲವಾರು ಕ್ಯಾನ್ಸರ್‌, ಹಾರ್ಮೋನು ಏರುಪೇರು ಸಮಸ್ಯೆಗಳ ನಿವಾರಣೆಗಾಗಿ ಅಗತ್ಯವಾದ ನ್ಯಾನೋ ಮೆಡಿಸಿನ್‌ ಪ್ರಯೋಗಕ್ಕೆ ಪೂರಕ ವಾದ ಔಷಧಿಗಳು ಹಾಗೂ ಇನ್ನಿತರ ಸಾಮಗ್ರಿಗಳು ಇವೆ.

Advertisement

Udayavani is now on Telegram. Click here to join our channel and stay updated with the latest news.

Next