Advertisement
ಕಂಟೇನ್ಮೆಂಟ್ ಝೋನ್‌ನಲ್ಲೇ ಹೆಚ್ಚಿನ ಕೋವಿಡ್ ಪಾಸಿಟಿವ್ ಪ್ರಕರಣ ಕಂಡು ಬರುತ್ತಿರುವುದನ್ನು ತಡೆಗಟ್ಟಲು ಪರೀಕ್ಷೆಗೆ ಗಂಟಲು ದ್ರವ ಮಾದರಿ ಸಂಗ್ರಹದ ಜತೆಗೆ ಅಲ್ಲಿ ವ್ಯಾಪಕ ತಪಾಸಣೆಗೆ ಸೂಚಿಸಲಾಗಿದೆ. ಈಗ ಗಂಟಲುದ್ರವ ಸಂಗ್ರಹದ ಪ್ರಮಾಣ ದ್ವಿಗುಣಗೊಳಿಸಲಾಗುವುದು. ಜಿಲ್ಲಾ ತಜ್ಞ ವೈದ್ಯರ 2 ತಂಡದ ಉಸ್ತುವಾರಿಯಲ್ಲಿ ಎಲ್ಲಾ ಪ್ರಕ್ರಿಯೆ ನಡೆಯಲಿವೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.
Related Articles
Advertisement
ಜಿಲ್ಲಾ ಪಂಚಾಯತ್ ಸಿಇಒ ಪದ್ಮಾ ಬಸವಂತಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಘವೇಂದ್ರಸ್ವಾಮಿ, ಡಾ| ಜಿ.ಡಿ. ರಾಘವನ್, ಡಾ| ಪ್ರಮೋದ್ ನಾಯಕ ಸುದ್ದಿಗೋಷ್ಠಿಯಲ್ಲಿದ್ದರು.
ಸೋಂಕಿನ ಮೂಲ ಪತ್ತೆಗೆ ತನಿಖೆ ದಾವಣಗೆರೆ ಜಿಲ್ಲೆಯಲ್ಲಿ ವಿದೇಶಗಳಿಂದ ಬಂದವರು ಇಲ್ಲ. ಜಿಲ್ಲೆಗೆ ಬಂದಿರುವ, ಇತರೆಡೆ ಹೋಗಿರುವ 70 ಜನರಲ್ಲೂ ಕೋವಿಡ್ ಸೋಂಕು ಇಲ್ಲ. ಈರುಳ್ಳಿ ವ್ಯಾಪಾರಕ್ಕೆ ಬೇರೆಡೆ ಹೋಗಿ ಬಂದಿರುವ ಮೂವರು ಸೋಂಕಿನ ಮೂಲ ಎಂಬ ಸುಳಿವು ಸಿಕ್ಕಿದೆಯಾದರೂ ಖಚಿತವಾಗಿ ಹೇಳುವಂತಿಲ್ಲ. ಆ ಬಗ್ಗೆ ತನಿಖೆ ನಡೆದಿದೆ. ಆಂಜನೇಯ ಬಡಾವಣೆಯಲ್ಲಿ ನೋಟು ಸಿಕ್ಕಿರುವುದು ನಿಜ. ಆದರೆ ದುರುದ್ದೇಶಪೂರ್ವಕವಾಗಿಯೇ ನೋಟು ಹಾಕಿದ್ದಾರೆ ಎಂಬುದಕ್ಕೆ ಸಾಕ್ಷಿ ಇಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ತಿಳಿಸಿದರು. ಮೂವರಿಗೆ ಕೊರೊನಾ ದೃಢ
ದಾವಣಗೆರೆಯಲ್ಲಿ ಸೋಮವಾರ ಮತ್ತೆ ಮೂವರಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟಾರೆ 65 ಸಕ್ರಿಯ ಪ್ರಕರಣಗಳಿವೆ. ಮೂವರೂ ಜಾಲಿನಗರದವರೇ
ಆಗಿದ್ದಾರೆ. ಒಂದೇ ಮನೆಯವರು ಇಬ್ಬರು ಮತ್ತು ಮತ್ತೂಬ್ಬರು ಸಂಬಂಧಿಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು. ರೋಗಿ ಸಂಖ್ಯೆ 850(33 ವರ್ಷ) ರೋಗಿ 662ರ ಪ್ರಾಥಮಿಕ ಸಂಪರ್ಕ, ರೋಗಿ ನಂಬರ್ 851 ರೋಗಿ ನಂಬರ್ 663 ಹಾಗೂ ರೋಗಿ 852 ರೋಗಿ ನಂಬರ್ 667ರ ಪ್ರಾಥಮಿಕ
ಸಂಪರ್ಕದಲ್ಲಿದ್ದರು. ಮೂವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಟ್ಟು 12 ಜನರನ್ನು ಐಸೋಲೇಷನ್ ಮಾಡಲಾಗಿದೆ. ದ್ವಿತೀಯ ಸಂಪರ್ಕದಲ್ಲಿದ್ದವರ ಪತ್ತೆ ಹಚ್ಚಲಾಗುತ್ತಿದೆ.
ಸೋಮವಾರ 240 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, ಒಟ್ಟು 404 ಗಂಟಲು ದ್ರವ ಮಾದರಿಗಳ ವರದಿ ಬರಬೇಕಾಗಿದೆ. ಎಸ್. ಎಸ್. ಹೈಟೆಕ್ ಆಸ್ಪತ್ರೆಯಲ್ಲಿನ ಪ್ರಯೋಗಾಲಯ ಸಜ್ಜಾಗಿದ್ದು, ಪರೀಕ್ಷೆಗೆ ಸಮ್ಮತಿಸಿದರೆ ಮಂಗಳವಾರದಿಂದಲೇ ಸ್ವಾಬ್ ಟೆಸ್ಟ್‌ಗೆ ಮಾದರಿ ಕಳಿಸಲಾಗುವುದು ಎಂದರು. ರೋಗಿ ನಂಬರ್ 533ರ 14 ದಿನಗಳ ಅವಧಿ ಪೂರ್ಣಗೊಂಡಿದ್ದು, ಬಹಳಷ್ಟು ಚೇತರಿಸಿಕೊಂಡಿದ್ದಾರೆ. ಸೋಂಕಿತರಲ್ಲಿ ಬಹುತೇಕರು ಗುಣಮುಖರಾಗುತ್ತಿದ್ದಾರೆ. ನಾವು ಕೊರೊನಾ ಯುದ್ದದಲ್ಲಿ ಜಯ ಸಾಧಿಸಿಯೇ ತೀರುತ್ತೇವೆ. ಹಾಗಾಗಿ ಜನರು ಭಯಪಡುವ ಅಗತ್ಯವೇ ಇಲ್ಲ ಎಂದರು. ಕೊರೊನಾ ಸೋಂಕಿತರು, ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿರುವರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲು ಆಯುಷ್ ಇಲಾಖೆ ಶಿಫಾರಸು ಮಾಡಿರುವ ಖಾದ್ಯ, ಸಿರಪ್, ಮ್ಯಾಂಗೋಚಾಕೋ ಬಾರ್, ಚಿಕ್ಕಿ ನೀಡಲಾಗುವುದು ಎಂದು ತಿಳಿಸಿದರು.