ಶಿರಾ: ನೀರು ಸರಬರಾಜು ಮಾಡುತ್ತಿದ್ದ ಓವರ್ ಹೆಡ್ ಟ್ಯಾಂಕ್ ದಿಢೀರ್ ಕುಸಿದುಬಿದ್ದ ಘಟನೆ ತಾಲೂಕಿನ ಚಿನ್ನೇನ್ನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆ ದಿದೆ. ಪಂಚಾಯ್ತಿಯ ಕಪ್ಪೇನಹಳ್ಳಿ ಮತ್ತು ಬೋವಿ ಕಾಲೋನಿಗೆ ನೀರು ಸರಬರಾಜು ಮಾಡುತ್ತಿದ್ದ ಸುಮಾರು 1 ಲಕ್ಷ ಲೀಟರ್ ಸಾಮರ್ಥ್ಯ ಹೊಂದಿದ್ದ, ಟ್ಯಾಂಕ್ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಕಾಮಗಾರಿ ಕಳಪೆ ಎನ್ನುವುದು ಸಾಬೀತಾಗಿದೆ. ಅದರ ಹಿಂದಿನ ಅಕ್ರಮಗಳು ಇನ್ನೂ ತನಿಖೆ ಯಾಗಿ ಹೊರಬರಬೇಕಿದೆ.
ಓವರ್ ಟ್ಯಾಂಕ್ ಕುಸಿದು ಬಿದ್ದಿರುವು ದಕ್ಕೆ ತೀವ್ರ ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಸ್ಥಳ ಪರಿಶೀಲನೆಗೆ ತೆರಳಿದ್ದ ಎಇಇ ರವಿ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಸಮಗ್ರ ತನಿಖೆ ನಡೆಸಿ ತಪ್ಪಿತ ಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿ ಸಿದ್ದಾರೆ. ಗ್ರಾಪಂ ಅಧ್ಯಕ್ಷೆ ಮಂಗಳಮ್ಮ ರಂಗಯ್ಯ, ಉಪಾಧ್ಯಕ್ಷ ವೆಂಕಟೇಶ್, ಸದಸ್ಯರಾದ ತಿಪ್ಪೇಸ್ವಾಮಿ, ಚಂದ್ರಣ್ಣ, ನಂದಿನಿ ದೇವರಾಜು ಹಾಗೂ ಪಂಚಾ ಯಿತಿ ಅಧಿಕಾರಿಗಳು, ಕಾರ್ಯದರ್ಶಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು: ಗ್ರಾಮಸ್ಥರ ಮಾತಿನಂತೆ ಮಾಹಿತಿ ಒಳಗೊಂಡ ವರದಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಳುಹಿಸಿ, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕೋರಲಾಗುವುದು. ಜೊತೆಯಲ್ಲೇ ಗ್ರಾಮದ ಹಿತದೃಷ್ಟಿ ಯಿಂದ ಪ್ರಸ್ತುತ ವರ್ಷ ಹೊಸದಾಗಿ ಟ್ಯಾಂಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.
ಪರ್ಯಾಯ ವ್ಯವಸ್ಥೆ ಮಾಡಿ: ಸತತ ಬರದಿಂದ ಬೇಯುತ್ತಿರುವ ತಾಲೂಕಿ ನಲ್ಲಿ ಬೇಸಿಗೆಯಲ್ಲೇ ಟ್ಯಾಂಕ್ ಕುಸಿದಿದೆ. ಮೇಲ್ನೋಟಕ್ಕೆ ಕಳಪೆ ಕಾಮಗಾರಿ ಕಂಡು ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಸ್ಥರ ಕುಡಿಯುವ ಮತ್ತು ಬಳಕೆ ನೀರಿಗೆ ಅಭಾವ ಉಂಟಾಗದಂತೆ ತಕ್ಷಣ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಪುಟ್ಟರಾಜು ಒತ್ತಾಯಿಸಿದ್ದಾರೆ.
ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ: ಕೇವಲ ಐದಾರು ವರ್ಷದ ಹಿಂದೆ ನಿರ್ಮಿಸಿದ್ದ ಟ್ಯಾಂಕ್ ಏಕಾಏಕಿ ಕುಸಿದಿದೆ ಎಂದರೆ ಅದರ ಗುಣಮಟ್ಟ ಯೋಚಿಸಿ. ಉತ್ತಮ ಗುಣಮಟ್ಟದ ಕಬ್ಬಿಣ, ಸಿಮೆಂಟ್ ಬಳಸಿದ್ದರೆ, ಇಂಥ ಅನಾಹುತ ನಡೆಯುತ್ತದೆ. ಟ್ಯಾಂಕ್ ಕುಸಿದ ಅನಾಹುತಕ್ಕೆ ಕಾರಣರಾದ ಗುತ್ತಿಗೆದಾರನ ಪರವಾನಗಿ ರದ್ದು ಪಡಿಸಬೇಕು. ಅವನಿಗೆ ಸಾಥ್ ನೀಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಅಕ್ರಮ ಎಸಗುವವರಿಗೆ ಭಯವೇ ಇಲ್ಲದಂತಾಗುತ್ತದೆ ಎಂದು ಕಪ್ಪೇನಹಳ್ಳಿ ಸಿದ್ದಯ್ಯ ಆಗ್ರಹಿಸಿದ್ದಾರೆ.