Advertisement
ಚಾರ್ಮಾಡಿ ಪ್ರದೇಶದಲ್ಲಿ ಭಾರೀ ಮಳೆಯಾದ ಪರಿಣಾಮ ಮರಮಟ್ಟುಗಳು ತೇಲಿ ಬಂದು ಅಂತರ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ ಪರಿಣಾಮ ಬಹಳಷ್ಟು ನೀರು ಸುತ್ತಮುತ್ತ ಹಬ್ಬಿದೆ. ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಬಹಳಷ್ಟು ಮಳೆ ಸುರಿದು ರಸ್ತೆಯಲ್ಲಿ ಸಾಗಲು ಸಾಧ್ಯವಾಗದಷ್ಟು ನೀರು ಬಂದಿದೆ. ಇದನ್ನು ವಾಹನ ಸವಾರರು ವೀಡಿಯೋ ಮಾಡಿ ಸಮಸ್ಯೆಯ ಗಂಭೀರತೆ ಬಗ್ಗೆ ತಿಳಿಸಿದ್ದರು.
Related Articles
ಕಳೆದುಹೋಗಿದ್ದ ಸ್ಕೂಟಿ ಪತ್ತೆ
ವಿಶೇಷವೆಂದರೆ 2019ರ ಆಗಸ್ಟ್ 9 ರಂದು ಬೆಳ್ತಂಗಡಿಯಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದ ಸಂದರ್ಭದಲ್ಲಿ ಮಲವಂತಿಗೆ ಗ್ರಾಮದ ಅಶೋಕ್ ಕಡ್ತಿಮೇರು ಎಂಬವರು ನದಿ ಬದಿ ತಮ್ಮ ಸ್ಕೂಟಿ ನಿಲ್ಲಿಸಿ ಅನ್ಯಕಾರ್ಯ ನಿಮಿತ್ತ ತೆರಳಿದ್ದರು. ಇದೀಗ ಸೋಮವಾರ ಸುರಿದ ಪ್ರವಾಹದಂತಹ ಮಳೆಗೆ ನದಿ ನೀರಿನಲ್ಲಿ ತುಂಬಿದ್ದ ಕಲ್ಲು ಮರಳು ಕೊಚ್ಚಿಹೋದ ಪರಿಣಾಮ ಕಳೆದು ಹೋಗಿದ್ದ ಸ್ಕೂಟಿ ಸಿಕ್ಕಿದ ಘಟನೆ ಬಾರಿ ಅಚ್ಚರಿಗೆ ಕಾರಣವಾಗಿದೆ. 5 ವರ್ಷಗಳ ಬಳಿಕ ಮರಳಿನಲ್ಲಿ ಹುದುಗಿದ್ದ ಸ್ಕೂಟಿ ಮತ್ತೆ ಮಾಲಕರ ಕೈಸೇರಿದೆ.
Advertisement