Advertisement

ಉಕ್ಕಿ ಹರಿಯುತ್ತಿರುವ ಘಟಪ್ರಭೆ: ಮುಂದುವರೆದ ಪ್ರವಾಹ ಸ್ಥಿತಿ

09:28 PM Aug 10, 2022 | Team Udayavani |

ಮಹಾಲಿಂಗಪುರ: ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹಿರಣ್ಯಕೇಶಿ ನದಿಯು ತುಂಬಿ ಹರಿದು ಧೂಪದಾಳ ಜಲಾಶಯ ಮಾರ್ಗವಾಗಿ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಕಳೆದ ಮೂರು ದಿನಗಳಿಂದ ಸಮೀಪದ ನಂದಗಾಂವ-ಅವರಾದಿ, ಅಕ್ಕಿಮರಡಿ-ಮಿರ್ಜಿ, ಢವಳೇಶ್ವರ-ಢವಳೇಶ್ವರ ಸೇತುವೆಯು ಜಲಾವೃತವಾಗಿವೆ.

Advertisement

ಬುಧವಾರ ಸಂಜೆಯ ಮಾಹಿತಿಯಂತೆ ಹಿಡಕಲ್ ಜಲಾಶಯಕ್ಕೆ 29129 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಒಟ್ಟು 51 ಟಿಎಂಸಿ ಸಂಗ್ರಹ ಸಾಮರ್ಥ್ಯದ ಹಿಡಕಲ್ ಜಲಾಶಯದಲ್ಲಿ43 ಟಿಎಂಸಿ ನೀರು ಸಂಗ್ರಹವಾಗಿದೆ. ಪ್ರಸಕ್ತ ವರ್ಷ ಇಲ್ಲಿಯವರೆಗೂ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಹರಿಸಿಲ್ಲ. ಡ್ಯಾಂಗೆ ಬರುತ್ತಿರುವ ಒಳ ಹರಿವು ನೀರಿನ ಪ್ರಮಾಣ ಹೀಗೆ ಮುಂದುವರೆದರೆ ಇನ್ನು ನಾಲ್ಕು ದಿನಗಳಲ್ಲಿ ಡ್ಯಾಂ ಸಂಪೂರ್ಣ ಭರ್ತಿಯಾಗಲಿದೆ.

ಸದ್ಯ ಹಿರಣ್ಯಕೇಶಿ ನದಿಯಿಂದ ಬರುವ ನೀರು ದುಪದಾಳ ಜಲಾಶಯ ಮಾರ್ಗವಾಗಿ ಘಟಪ್ರಭಾ ನದಿಗೆ ಬರುತ್ತಿದೆ. ಬುಧವಾರ ದುಪದಾಳ ಜಲಾಶಯಕ್ಕೆ 19361 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಅದರಲ್ಲಿ  15357 ಸಾವಿರ ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ, 1004 ಕ್ಯೂಸೆಕ್ ನೀರನ್ನು ಘಟಪ್ರಭಾ ಎಡದಂಡೆ ಕಾಲುವೆಗೆ ಹರಿಸಲಾಗುತ್ತಿದೆ. ಬಳ್ಳಾರಿ ನಾಲಾ, ಮಾರ್ಕಂಡೆಯ ಉಪ ನದಿಗಳ ನೀರು ಸಹ ಗೋಕಾಕ ಹತ್ತಿರ ಘಟಪ್ರಭಾ ನದಿಗೆ ಬಂದು ಸೇರುತ್ತವೆ. ಬುಧವಾರ ಮಾಹಿತಿಯಂತೆ ಗೋಕಾಕ ಪಟ್ಟಣದ ಲೋಳಸೂರ ಬ್ರೀಜ್ ಹತ್ತಿರ 23131ಸಾವಿರ ಕ್ಯೂಸೆಕ್ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿರುವ ಕಾರಣ ಮೂರು ಸೇತುವೆಗಳು ಮುಳುಗಡೆಯಾಗಿ ಪ್ರವಾಹ ಪರಿಸ್ಥಿತಿಯು ಮುಂದುವರೆದಿದೆ.

ಇದನ್ನೂ ಓದಿ: ಕೋಲ್ಕತ: ಸ್ವಿಮ್‌ಸೂಟ್‌ ಫೋಟೋದಿಂದಾಗಿ ಪ್ರಾಧ್ಯಾಪಕಿಯ ಕೆಲಸಕ್ಕೇ ಕುತ್ತು!

ಮೂರು ಸೇತುವೆಗಳು ಜಲಾವೃತವಾಗಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹತ್ತಾರು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಈ ಗ್ರಾಮಗಳಿಗೆ ಹೋಗುವವರು ಮುಧೋಳ ಮತ್ತು ಗೋಕಾಕ ಮಾರ್ಗವಾಗಿ ಸುತ್ತುವರೆದು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next