ವಿಜಯಪುರ: ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ವಿಜಯಪುರ ತಾಲೂಕಿನ ದ್ಯಾಬೇರಿ -ಜಂಬಗಿ ಮಾರ್ಗ ಮಧ್ಯದ ಸೇತುವೆಯಲ್ಲಿ ಬೈಕ್ ಸವಾರ ಸಮೇತ ಕೊಚ್ಚಿಕೊಂಡು ಹೋಗಿದ್ದ ಘಟನೆ ವರದಿಯಾಗಿದೆ.
ಅದೃಷ್ಟವಶಾತ್ ಪೀರಾಜಿ ಪ್ರಾಣಾಪಯದಿಂದ ಪಾರಾಗಿದ್ದಾರೆ
ವಿಜಯಪುರ ತಾಲೂಕಿನ ದನವಾಡಹಟ್ಟಿ ಗ್ರಾಮದ ನಿವಾಸಿ ಪೀರಾಜಿ ಎಂಬ ಯುವಕ ಶನಿವಾರ ಬೆಳಿಗ್ಗೆ ದ್ಯಾಬೇರಿ ಜಂಬಗಿ ಹಳ್ಳ ದಾಟುವಾಗ ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದ ಹಳ್ಳದ ರಭಸದಿಂದ ಕೊಚ್ಚಿ ಹೋಗಿದ್ದಾನೆ. ಬೈಕ್ ನಾಪತ್ತೆಯಾಗಿದ್ದು, ಸವಾರ ಪೀರಾಜಿ ಈಜಿ ಸುರಕ್ಷಿತವಾಗಿ ದಡ ಸೇರಿದ್ದಾನೆ. ನೀರು ಪಾರಾಗಿರುವ ಬೈಕ್
ಇನ್ನೂ ಪತ್ತೆಯಾಗಿಲ್ಲ.