Advertisement

ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ

04:58 AM Jul 11, 2020 | Lakshmi GovindaRaj |

ಚಾಮರಾಜನಗರ: ಸಮಾಜದಲ್ಲಿ ಸೋಂಕಿತರನ್ನು ನೋಡುವ ಮನೋಭಾವ ಬದಲಾಗಿ, ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಸೋಂಕಿತರನ್ನು ಬೇರೆ ದೃಷ್ಟಿಯಲ್ಲಿ ನೋಡಬಾರದು. ಕೋವಿಡ್‌ ಮಾರ ಣಾಂತಿಕ  ಕಾಯಿಲೆಯಲ್ಲ ಎಂದು ಕೋವಿಡ್‌ನಿಂದ ಗುಣಮುಖರಾಗಿರುವ ದಂಪತಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.

Advertisement

ನಗರದ ಡೀಸಿ ಕಚೇರಿ ಸಭಾಂಗಣದಲ್ಲಿ ಡೀಸಿ ಡಾ. ಎಂ.ಆರ್‌. ರವಿ ಅವರು ನಡೆಸಿದ ಪತ್ರಿಕಾಗೋಷ್ಠಿ ವೇಳೆ  ಕೋವಿಡ್‌ ಚಿಕಿತ್ಸೆ, ಆಸ್ಪತ್ರೆಯಲ್ಲಿ ನೀಡಿದ ಆರೈಕೆ, ವೈದ್ಯರು, ಅಧಿಕಾರಿಗಳು ತೋರಿದ ಕಾಳಜಿ ಕುರಿತು ಕೋವಿಡ್‌ನಿಂದ ಗುಣಮುಖರಾದ ದಂಪತಿ ತಮ್ಮ ಮನದಾಳದ ಮಾತುಗಳನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆ ತೆರೆದಿಟ್ಟರು.  ಜಿಲ್ಲೆಯ ಕೋವಿಡ್‌ ಆಸ್ಪತ್ರೆ ಯಲ್ಲಿ ಉತ್ತಮ ಔಷಧೋಪಚಾರ ನಡೆಯಿತು. ವೈದ್ಯರು ವಿಶೇಷವಾಗಿ ರೋಗಿಗಳೊಂದಿಗೆ ಕಾಳಜಿ ವಹಿಸಿ, ಚಿಕಿತ್ಸೆ ನೀಡುತ್ತಿ ದ್ದಾರೆ. ಇವರೊಂದಿಗೆ ಇತರೆ  ದ್ಯಕೀಯ ಸಿಬ್ಬಂದಿ ಪ್ರೀತಿಯಿಂದ ರೋಗಿಗಳ ಆರೈಕೆ  ಮಾಡುತ್ತಿದ್ದಾರೆ ಎಂದರು.

ಮನೋಸ್ಥೈರ್ಯ ಹೆಚ್ಚಳ: ಔಷಧ ಚಿಕಿತ್ಸೆಗಿಂತ ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ವೈದ್ಯರಿಂದ ಆಗುತ್ತಿದೆ. ಇದರಿಂದ ರೋಗಿಗಳಲ್ಲಿ ಮನೋಸ್ಥೈರ್ಯ ಹೆಚ್ಚಾಗುತ್ತಿದೆ. ನಕಾರಾತ್ಮಕ ಯೋಚನೆಗೆ ಅವಕಾಶವಿಲ್ಲ ದಂತೆ  ಗುಣಮುಖರಾಗಿ ನಾವು ಬಂದಿದ್ದೇವೆ. ಡೀಸಿ ಮುಂಜಾಗ್ರತಾ ಕ್ರಮಗಳು ಹಾಗೂ ನಿರ್ದೇಶನ ಅನುಸಾರ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳು ಉತ್ತಮ ವಾಗಿವೆ. ಚಿಕಿತ್ಸೆ, ಔಷಧೋಪಚಾರ ಊಟ, ಉಪಹಾರ ಗಳ ಗುಣಮಟ್ಟಮ ವಿತರಣೆ ಸಹ ಚೆನ್ನಾಗಿ ನಿರ್ವಹಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೋಂಕಿನಿಂದ ಗುಣಮುಖರಾದವರನ್ನು ಸಮಾಜ ನೋಡುವ ದೃಷ್ಠಿಕೋನ ಸಕಾರಾತ್ಮಕವಾಗಿರಬೇಕು. ಸೋಂಕಿತರನ್ನು ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲು ಬಂದಾಗ ಅಕ್ಕಪಕ್ಕದ  ಜನರು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಾರೆ. ವಾಟ್ಸಪ್‌ನಲ್ಲಿ ಶೇರ್‌ ಮಾಡುತ್ತಾರೆ. ಇದು ಸರಿಯಲ್ಲ. ಸೋಂಕಿನಿಂದ ಗುಣ ಮುಖರಾಗಿ ಬಂದ ಮೇಲೆಯೂ ಹಿಂದಿನಂತೆ ನಮ್ಮನ್ನು ನೋಡುವುದಿಲ್ಲ. ಅದರ ಬದಲು ಧೈರ್ಯ ತುಂಬಿ  ಪ್ರೀತಿ ವಿಶ್ವಾಸದಿಂದ ಕಾಣಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗ ಬೇಕೆಂಬುದು ತಮ್ಮ ಆಶಯವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next