Advertisement

ಕೋವಿಡ್ ಆತಂಕದ ನಡುವೆ ಅಸ್ಸಾಂನಲ್ಲಿ ಧಾರಾಕಾರ ಮಳೆ, 7 ಜಿಲ್ಲೆ ಜಲಾವೃತ, ಜನಜೀವನ ಅಸ್ತವ್ಯಸ್ತ

01:06 PM May 27, 2020 | Nagendra Trasi |

ಗುವಾಹಟಿ:ಕೋವಿಡ್ ಅಟ್ಟಹಾಸದ ನಡುವೆ ಧಾರಾಕಾರ ಮಳೆಗೆ ಅಸ್ಸಾಂನ ಏಳು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯವಸ್ಥಗೊಂಡಿದೆ. ಸುಮಾರು ಎರಡು ಲಕ್ಷ ಜನರು ತೊಂದರೆಗೊಳಗಾಗಿದ್ದು, 9ಸಾವಿರ ಗ್ರಾಮಸ್ಥರನ್ನು 35 ನಿರಾಶ್ರಿತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಅಸ್ಸಾಂನ ಧೇಮಾಜಿ, ಲಾಖಿಂಪುರ್, ಡರ್ಯಾಂಗ್, ನಾಲ್ಬಾರಿ, ಗೋಲಾಪಾರಾ, ದಿಬ್ರುಗಢ್ ಮತ್ತು ಟಿನ್ ಸುಕಿಯಾ ಜಿಲ್ಲೆಗಳ ಜನರು ಮಳೆಯಿಂದಾಗಿ ಸಂಕಷ್ಟಗೊಳಗಾಗಿದ್ದಾರೆ.

ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ 1007 ಹೆಕ್ಟೇರ್ ಬೆಳೆ ನೀರಿನಲ್ಲಿ ಮುಳುಗಿ ಹೋಗಿದೆ. ಅಷ್ಟೇ ಅಲ್ಲ 16,500 ದೇಶೀಯ ಪ್ರಾಣಿಗಳು, ಪಕ್ಷಿ(ಕೋಳಿ ಸಾಕಣೆ)ಗಳು ಸಮಸ್ಯೆ ಅನುಭವಿಸುವಂತಾಗಿದೆ.

ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ಗೋಲಾಪಾರಾದಲ್ಲಿ 1.68 ಲಕ್ಷ ಜನರು ತೊಂದರೆಗೆ ಒಳಗಾಗಿದ್ದರು. ನಾಲ್ಬಾರಿಯಲ್ಲಿ 10,943 ಮಂದಿ, ದೀಬ್ರುಗಢದಲ್ಲಿ 7,897 ಜನರು ತೊಂದರೆ ಸಿಲುಕಿರುವುದಾಗಿ ಅಸ್ಸಾಂ ವಿಪತ್ತು ನಿರ್ವಹಣಾ ಮಂಡಳಿ ಬಿಡುಗಡೆಗೊಳಿಸಿರುವ ಬುಲೆಟಿನ್ ನಲ್ಲಿ ತಿಳಿಸಲಾಗಿದೆ. ಮುಂದಿನ 2-3 ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದಿರುವುದಾಗಿ ಹವಾಮಾನ ಇಲಾಖೆ ಎಚ್ಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next