Advertisement

‘ಓವರ್‌ ಬ್ರಿಡ್ಜ್, ಅಂಡರ್‌ ಪಾಸ್‌ ಯೋಜನೆಗೆ ಯತ್ನ’

10:56 PM Sep 04, 2019 | mahesh |

ಕಟಪಾಡಿ: ಕಾಪು ಕ್ಷೇತ್ರ ಶಾಸಕ ಲಾಲಾಜಿ ಆರ್‌. ಮೆಂಡನ್‌ ಕೋರಿಕೆಯ ಮೇರೆಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌, ಅಪರ ಜಿಲ್ಲಾಧಿಕಾರಿ (ಎ.ಡಿ.ಸಿ.) ಸದಾಶಿವ ಪ್ರಭು ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ ಸಮಸ್ಯೆ ಪರಿಶೀಲಿಸಿದ್ದು, ಸ್ಥಳೀಯಾಡಳಿತದೊಂದಿಗೆ ಸಮಸ್ಯೆ ಆಲಿಸಿದರು.

Advertisement

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಕಾಪು ಕ್ಷೇತ್ರದ ಪ್ರಮುಖ ಸಮಸ್ಯೆ ಬಗ್ಗೆ ಪರಿಶೀಲನೆಗಾಗಿ ಆಗಮಿಸಿದ್ದು, ಕಟಪಾಡಿ ಜಂಕ್ಷನ್‌ ಸಮಸ್ಯೆ ಸಹಿತ ರಾಷ್ಟ್ರೀಯ ಹೆದ್ದಾರಿ ಇತರ ಸಮಸ್ಯೆ ಪರಿಹರಿಸಲು ಎನ್‌ಎಚ್ಎಐ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಟ್ ಡೈರೆಕ್ಟರ್‌ ಜತೆ ಸಭೆ ನಡೆಸಲಾಗುತ್ತದೆ. ಹೆಚ್ಚುವರಿ ಯೋಜನೆಯ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುತ್ತದೆ ಎಂದರು.

ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಆಡಳಿತಕ್ಕೆ ಚುರುಕು ಮುಟ್ಟಿಸುವ ಇರಾದೆಯೊಂದಿಗೆ ಪ್ರಮುಖ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಕಟಪಾಡಿ ಜಂಕ್ಷನ್‌ನಲ್ಲಿ ನಿತ್ಯ ಪೊಲೀಸರು ಹೆದ್ದಾರಿ ದಾಟಿಸುವ ಕೆಲಸ ಮಾಡಬೇಕಾದ ಪರಿಸ್ಥಿತಿ ಇನ್ನೂ ಇದೆ. ದೊಡ್ಡ ಸಮಸ್ಯೆಗೆ ಸುಖಾಂತ್ಯ ಕಾಣುವ ನಿಟ್ಟಿನಲ್ಲಿ ಓವರ್‌ ಬ್ರಿಡ್ಜ್ ಹಾಗೂ ಅಂಡರ್‌ ಪಾಸ್‌ ಬಗ್ಗೆ ಯೋಜನೆ ರೂಪಿಸುವ ಇಂಗಿತ ವ್ಯಕ್ತಪಡಿಸಿದ್ದು, ಕೇಂದ್ರ, ರಾಜ್ಯ ಸರಕಾರದ ಸಹಕಾರ ದೊಂದಿಗೆ ಸುಖಾಂತ್ಯ ಕಾಣಲು ಪ್ರಾಮಾಣಿಕ ಪ್ರಯತ್ನ ನಡೆಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next