Advertisement
ಹೌದು, 2014ರ ಹುಲಿ ಗಣತಿ ಪ್ರಕಾರ ದೇಶದಲ್ಲಿ ಒಟ್ಟು 2226 ಹುಲಿಗಳಿದ್ದು, ಅದರಲ್ಲಿ 408 ಹುಲಿಗಳು ಕರ್ನಾಟಕ ದಲ್ಲಿದ್ದವು. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ಎಂದು ಘೋಷಣೆ ಮಾಡಲಾಗಿತ್ತು. ಅದರಂತೆ ಈ ಬಾರಿಯೂ 4ನೇ ಹುಲಿ ಗಣತಿ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ವಿಶ್ವ ಹುಲಿಗಳ ದಿನದ ಅಂಗವಾಗಿ ಇಂದು (ಜು.29) ಬಿಡುಗಡೆ ಮಾಡಲಿದ್ದಾರೆ.
Related Articles
Advertisement
2010ರ ಗಣತಿ ಪ್ರಕಾರ ಭಾರತದಲ್ಲಿ 1706 ಹುಲಿಗಳಿದ್ದರೆ, 2014ರಲ್ಲಿ 2,226ಕ್ಕೆ ಏರಿಕೆಯಾಗಿದ್ದವು. ಆದರೆ, 2006ರಲ್ಲಿ ಹುಲಿಗಳ ಸಂಖ್ಯೆ 1400ಕ್ಕೆ ಕುಸಿದು ಆತಂಕ ಮೂಡಿಸಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಗಣನೀಯ ವಾಗಿ ಏರಿಕೆ ಕಾಣುತ್ತಿದ್ದು, ಅರಣ್ಯ ಇಲಾಖೆ, ವನ್ಯಜೀವಿ ತಜ್ಞರು ಹಾಗೂ ಪರಿಸರ ಪ್ರೇಮಿಗಳಲ್ಲಿ ಮಂದಹಾಸ ಮೂಡಿಸಿದೆ. ಪ್ರಸ್ತುತ ದೇಶದಲ್ಲಿ 2400 ಹುಲಿಗಳಿದ್ದು, ಕರ್ನಾಟಕ ರಾಜ್ಯದಲ್ಲಿ 470ಕ್ಕೂ ಹೆಚ್ಚು ಹುಲಿ ಗಳಿರುವುದು, ಕಾಡಿನ ಗುಣಮಟ್ಟ ಹಾಗೂ ಅರಣ್ಯ ಇಲಾಖೆಯ ಕಾರ್ಯದಕ್ಷತೆ ತೋರಿಸುತ್ತದೆ.
ಏನಿದು ಹುಲಿ ಯೋಜನೆ? ಹುಲಿಗಳ ಬಗ್ಗೆ ಸಾರ್ವ ಜನಿಕರಲ್ಲಿ ಅರಿವು ಮೂಡಿಸಲು ಹಾಗೂ ಅವುಗಳ ಸಂರಕ್ಷಣೆ ಸಲುವಾಗಿ 1973ರಲ್ಲಿ ಹುಲಿಯೋಜನೆ ಜಾರಿಗೆ ತರಲಾಯಿತು. ದೇಶದಲ್ಲಿ ಒಟ್ಟು 25 ಹುಲಿ ಸಂರಕ್ಷಿತಾ ಪ್ರದೇಶಗಳನ್ನು ಗುರುತಿಸಲಾಗಿದೆ.
ಹುಲಿಗಳ ವಿವರ: ಕರ್ನಾಟಕದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಬಂಡೀ ಪುರ, ನಾಗರ ಹೊಳೆ ಅರಣ್ಯ ಪ್ರದೇಶವನ್ನು ಹುಲಿ ಕಾರಿಡಾರ್ ಎಂದು ಕರೆಯಲಾಗಿದೆ. ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 2006ರಲ್ಲಿ 290 ಹುಲಿ, 2010ರಲ್ಲಿ 300, 2014ರಲ್ಲಿ 406 ಹುಲಿಗಳಿದ್ದವು. ಅದರಲ್ಲಿ 2014ರಲ್ಲಿ ನಾಗರಹೊಳೆಯಲ್ಲಿ 93 ಹುಲಿ, ಬಂಡೀಪುರದಲ್ಲಿ 110 ಹುಲಿಗಳಿರುವುದು ವಿಶೇಷ. ನಾಗರಹೊಳೆ, ಬಂಡೀಪುರ ಅರಣ್ಯ ಪ್ರದೇಶಗಳು ಹುಲಿ ಸಂತತಿ ಹೆಚ್ಚಳಕ್ಕೆ ಅನುಕೂಲವಾದ ವಾತಾವರಣ ವಿದೆ. ಹುಲಿಗಳಿಗೆ ಅಗತ್ಯವಾದ ಪರಿಸರ ನಿರ್ಮಾಣವಾಗಿದೆ. ಇಲ್ಲಿ ಆಹಾರ ಸಮಸ್ಯೆ ಇಲ್ಲ. ಹೀಗಾಗಿ ಈ ಪ್ರದೇಶದಲ್ಲಿ ಪ್ರತಿ ವರ್ಷವೂ ಹುಲಿ ಸಂತತಿ ಹೆಚ್ಚಾಗು ತ್ತಿರುವುದಕ್ಕೆ ಕಾರಣವಾಗಿದೆ ಎನ್ನುತ್ತಾರೆ ವನ್ಯಜೀವಿ ತಜ್ಞರು.
ಗ್ರಾಮಗಳತ್ತ ಹುಲಿ: ಹುಲಿಗಳು ತಮ್ಮ ವ್ಯಾಪ್ತಿಗಾಗಿ ಪರಸ್ಪರ ಕಾದಾಡುವುದು ಜೊತೆಗೆ ವಯಸ್ಸಾದ ಹುಲಿಗಳು ಬೇಟೆ ಯಾಡಲಾರದೆ ಗ್ರಾಮಗಳ ಸಾಕು ಪ್ರಾಣಿ ಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯವಾದ ಸಂಗತಿಯಾಗಿದೆ. ಇದರಂತೆ ಕಳೆದ 3 ವರ್ಷಗಳಿಂದ ಹಲವು ಗ್ರಾಮಗಳಲ್ಲಿ 12ಕ್ಕೂ ಹೆಚ್ಚು ಹುಲಿಗಳು ಕಾಡಂಚಿನ ಗ್ರಾಮಗಳತ್ತ ಬಂದು ಜನ, ಜಾನುವಾರಗಳ ಮೇಲೆ ದಾಳಿ ನಡೆಸಿರುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಹಾಗೆಯೇ ಕೆಲವೊಂದು ಸಂದರ್ಭಗಳಲ್ಲಿ ದಸರಾ ಆನೆಗಳ ಸಹಾಯದಿಂದ ಹುಲಿ ಕಾರ್ಯಾಚರಣೆಯನ್ನೂ ನಡೆಸಿದ್ದಾರೆ.
ಎಚ್.ಡಿ. ಕೋಟೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಮೂರು ಜನರನ್ನು ಕೊಂದು ಹಾಕಿದ್ದು, ಇದರಲ್ಲಿ ಹತ್ತು ಹುಲಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಯ ಸಹಕಾರದೊಂದಿಗೆ ಸೆರೆ ಹಿಡಿದಿರುವುದನ್ನು ಗಮನಿಸಬಹುದು.
ಕಳೆದ ಬಾರಿ 408 ಹುಲಿ ಪತ್ತೆ: ಕರ್ನಾಟಕ ರಾಜ್ಯದ ಬಂಡೀಪುರ ಹುಲಿ ಮೀಸಲು, ರಾಜೀವ್ ಗಾಂಧಿ (ನಾಗರಹೊಳೆ) ಹುಲಿ ಮೀಸಲು, ಭದ್ರಾ ಹುಲಿ ಮೀಸಲು, ಅಣಶಿ- ದಾಂಡೇಲಿ ಹುಲಿ, ಬಿಆರ್‌ಟಿ ಮೀಸಲು ಪ್ರದೇಶಗಳಲ್ಲಿ ಕಳೆದ ಬಾರಿ ನಡೆಸಿದ ಹುಲಿ ಗಣತಿಯಲ್ಲಿ 408 ಹುಲಿಗಳು ಪತ್ತೆಯಾಗಿದ್ದವು. ಆದರೆ ಈ ಬಾರಿಯ ಗಣತಿಯಲ್ಲಿ 70ಕ್ಕೂ ಹೆಚ್ಚು ಹುಲಿಗಳು ಹೆಚ್ಚಾಗಿದ್ದು, ಒಟ್ಟು 470 ಹುಲಿಗಳನ್ನು ರಾಜ್ಯದಲ್ಲಿ ಗುರುತಿಸಲಾಗಿದೆ.