Advertisement

ಪ್ರತಿಭಟನಾ ಸಭೆಗೆ ಮುನ್ನ 70 ಜೆಕೆಎನ್‌ಪಿಪಿ ಕಾರ್ಯಕರ್ತರು ವಶಕ್ಕೆ

03:57 PM Mar 08, 2018 | Team Udayavani |

ಜಮ್ಮು : ಎಂಟು ವರ್ಷ ಪ್ರಾಯದ ಬಾಲಕಿಯ ಅಪಹರಣ ಮತ್ತು ಹತ್ಯೆಯ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದು ಆಗ್ರಹಿಸಿ ಪ್ರತಿಭಟನಾ ಸಭೆ ನಡೆಸಲಿದ್ದ ಜಮ್ಮು ಕಾಶ್ಮೀರ ನ್ಯಾಶನಲ್‌ ಪ್ಯಾಂಥರ್‌ ಪಾರ್ಟಿ (ಜೆಕೆಎನ್‌ಪಿಪಿ) ಯ 70ಕ್ಕೂ ಅಧಿಕ ಕಾರ್ಯಕರ್ತರನ್ನು  ಪೊಲೀಸರು ಇಂದು ಗುರುವಾರ ವಶಕ್ಕೆ ತೆಗೆದುಕೊಂಡರು. 

Advertisement

ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿರುವ ಈ ಕಾರ್ಯಕರ್ತರನ್ನು ಕಠುವಾ ಪೊಲೀಸ್‌ ಠಾಣೆಯಲ್ಲಿ ಇರಿಸಲಾಗಿದೆ. 

ಕಳೆದ ಜನವರಿ 23ರಂದು ಸರಕಾರ ಬಾಲಕಿ ಹತ್ಯೆ ಕುರಿತ ಕೇಸನ್ನು ರಾಜ್ಯದ ಪೊಲೀಸ್‌ ಕ್ರೈಮ್‌ ಬ್ರಾಂಚಿಗೆ ವಹಿಸಿಕೊಟ್ಟಿತ್ತು. ಬಾಲಕಿಯ ಅಪಹರಣ ಮತ್ತು ಹತ್ಯೆಯಲ್ಲಿ ಶಾಮೀಲಾದ ಆರೋಪದ ಮೇಲೆ ಕಳೆದ ಫೆಬ್ರವರಿಯಲ್ಲಿ ವಿಶೇಷ ಪೊಲೀಸ್‌ ಅಧಿಕಾರಿಯನ್ನು ಬಂಧಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next