Advertisement

ನಿವೇಶನಕ್ಕೆ ಕಾಯುತ್ತಿವೆ 7 ಸಾವಿರಕ್ಕೂ ಅಧಿಕ ಅರ್ಜಿ!

02:19 AM Jun 11, 2020 | Sriram |

ವಿಶೇಷ ವರದಿ-ಪುತ್ತೂರು/ಸುಳ್ಯ: ಮನೆ ಕಟ್ಟಿಕೊಳ್ಳಲು ನಿವೇಶನಕ್ಕಾಗಿ ಪುತ್ತೂರು ಮತ್ತು ಸುಳ್ಯ ನಗರ ಸ್ಥಳೀಯಾಡಳಿತಕ್ಕೆ ಸಲ್ಲಿಕೆಯಾದ ಅರ್ಜಿಗಳ ಒಟ್ಟು ಸಂಖ್ಯೆ ಬರೋಬ್ಬರಿ ಏಳು ಸಾವಿರಕ್ಕೂ ಅಧಿಕವಿದೆ.

Advertisement

ದಿನೇ ದಿನೇ ಬೆಳವಣಿಗೆ ಹೊಂದು ತ್ತಿರುವ ಉಭಯ ತಾಲೂಕುಗಳ ನಗರ ಪ್ರದೇಶಗಳಲ್ಲಿ ನಿವೇಶನ ರಹಿತರ ಪಟ್ಟಿಯು ವೃದ್ಧಿಯಾಗುತ್ತಿದ್ದು, ನಿವೇಶನ ಒದಗಿ ಸಲು ಜಾಗವೇ ಇಲ್ಲ ಎಂದು ಸ್ಥಳೀಯಾ ಡಳಿತಗಳು ಕೈಚೆಲ್ಲಿ ಕುಳಿತಿವೆ.

ಪುತ್ತೂರು ನಗರಸಭೆ
ಜಿಲ್ಲಾ ಕೇಂದ್ರವಾಗುವ ಅರ್ಹತೆ ಹೊಂದಿರುವ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ 3,500ಕ್ಕೂ ಮಿಕ್ಕ ಜನರು ನಿವೇಶನ ನೀಡುವಂತೆ ಅರ್ಜಿ ಸಲ್ಲಿಸಿ ದ್ದಾರೆ. ಹಲವು ವರ್ಷಗಳಿಂದ ಅರ್ಜಿ ವಿಲೇವಾರಿ ಆಗಿಲ್ಲ. ಕಾರಣ ನಗರ ದಲ್ಲಿ ಖಾಲಿ ಜಮೀನು ಲಭ್ಯವಿಲ್ಲ ಎನ್ನುವುದು. ಪ್ರಸ್ತುತ ಕೊಡಿಮರ ಬಳಿ 1 ಎಕ್ರೆ ಜಾಗ ಇದ್ದು ಇದನ್ನು ನಿವೇಶನ ರಹಿತರಿಗೆ ನೀಡುವ ನಿಟ್ಟಿನಲ್ಲಿ ಭೂ ಸಮ ತಟ್ಟು ಮಾಡಲಾಗುತ್ತಿದೆ. ಬೇರೆ ಕಡೆ ಗಳಲ್ಲಿ ಸೂಕ್ತ ಜಾಗವಿಲ್ಲ. 3,500 ಅರ್ಜಿ ಗಳ ಪೈಕಿ 2,500ರಷ್ಟು ಅರ್ಹ ಫಲಾನುಭವಿಗಳಿದ್ದರೂ ಅವರಿಗೆ ನೀಡಲು 1 ಎಕ್ರೆ ಸಾಲದು. ಹೀಗಾಗಿ ಹಂಚಿಕೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸುಳ್ಯ ನಗರ ಪಂಚಾಯತ್‌
ಸುಳ್ಯ ನಗರ ಪಂಚಾಯತ್‌ ವ್ಯಾಪ್ತಿ ಯಲ್ಲೂ 3 ಸಾವಿರಕ್ಕೂ ಮಿಕ್ಕಿ ಅರ್ಜಿ ಸಲ್ಲಿಕೆ ಆಗಿವೆ. ಈಗಲೂ ಅರ್ಜಿ ಸಲ್ಲಿಕೆ ಆಗುತ್ತಿದೆ ಹೊರತು ವಿಲೇವಾರಿಯಾಗುತ್ತಿಲ್ಲ. ಇಲ್ಲೂ ಜಾಗದ ಕೊರತೆ ಎನ್ನುವ ಸಬೂಬು ಇದೆ. ಆದರೆ ಜಾಗ ಇದ್ದು ಒತ್ತುವರಿ ಆಗಿದೆ ಎನ್ನುವುದು ನ.ಪಂ.ನ ಕೆಲವು ಸದಸ್ಯರ ಆರೋಪ. ಪರ್ಯಾಯ ವ್ಯವಸ್ಥೆ ಕೂಡ ಇಲ್ಲಿ ಗಗನಕುಸುಮವಾಗಿದೆ.

ಖಾಸಗಿ ಜಾಗ ಖರೀದಿಗೆ ಸರಕಾರಿ ಮೌಲ್ಯ ಸಾಲದು!
ಸರಕಾರಿ ಜಾಗವಿಲ್ಲದಿದ್ದರೆ ನಗರ ವ್ಯಾಪ್ತಿಯ ಗಡಿ ಗ್ರಾಮಗಳಲ್ಲಿ ಅಥವಾ ನಗರ ದೊಳಗೆ ಖಾಸಗಿ ಜಾಗ ಖರೀದಿ ಸಲು ಸರಕಾರ ಅವಕಾಶ ನೀಡಿದೆ. ಆದರೆ ಜಾಗದ ಸರಕಾರಿ ಮಾರುಕಟ್ಟೆ ಮೌಲ್ಯ ತೀರಾ ಕಡಿಮೆ ಇರುವ ಕಾರಣ ಆ ಮೊತ್ತಕ್ಕೆ ಯಾರೂ ಕೂಡ ಜಾಗ ನೀಡುತ್ತಿಲ್ಲ. ಮೌಲ್ಯ ಹೆಚ್ಚಿಸುವ ಮನವಿಗೂ ಸ್ಪಂದನೆ ಸಿಗುತ್ತಿಲ್ಲ. ಹಾಗಾಗಿ ಖಾಸಗಿ ಜಾಗ ಖರೀದಿ ಕೂಡ ನನೆಗುದಿಗೆ ಬಿದ್ದಿದೆ.

Advertisement

ಫ್ಲ್ಯಾಟ್‌ ಮಾದರಿ ಚಿಂತನೆ
ನಿವೇಶನ ಕೊರತೆಗೆ ಪರ್ಯಾಯವಾಗಿ ಫ್ಲ್ಯಾಟ್‌ ಮಾದರಿಯಲ್ಲಿ ಮನೆ ನಿರ್ಮಿಸಿ ನೀಡುವ ಚಿಂತನೆ ಕೂಡ ಉಭಯ ತಾಲೂಕುಗಳ ಸ್ಥಳೀಯಾಡಳಿತದ್ದು. ಬಹು ಮಹಡಿಯ ಕಟ್ಟಡದಲ್ಲಿ ವಸತಿಗೃಹ ನಿರ್ಮಿಸಿ ಹಂಚಿಕೆ ಮಾಡಿದರೆ ನಿವೇ ಶನದ ಅಗತ್ಯ ಉದ್ಭವಿಸುವುದಿಲ್ಲ. ಒಂದೇ ಕಡೆ ಹಲವು ಅರ್ಜಿದಾರರಿಗೆ ಮನೆ ಒದಗಿಸಬಹುದು. ಆದರೆ 7,000ಕ್ಕೂ ಮಿಕ್ಕಿ ಮಂದಿಗೆ ಫ್ಲ್ಯಾಟ್‌ ನಿರ್ಮಾ ಣಕ್ಕೆ ಕೋಟ್ಯಂತರ ರೂ. ಅನು ದಾನದ ಅಗತ್ಯವೂ ಇದೆ. ಅದನ್ನು ಹೊಂದಿ ಸಿದ ಬಳಿಕವಷ್ಟೇ ಯೋಜನೆ ರೂಪಿಸಬಹುದಾಗಿದೆ.

1 ಎಕ್ರೆ ಜಾಗ ಸಮತಟ್ಟು
2,500ಕ್ಕೂ ಮಿಕ್ಕಿ ಜನರಿಗೆ ನಿವೇಶನ ಅಗತ್ಯ ಇದೆ. ನಗರದಲ್ಲಿ ನಿವೇಶನಕ್ಕೆ ಸೂಕ್ತ ಜಾಗ ಇಲ್ಲ. ಜಾಗ ಒದಗಿಸಲು ಕಂದಾಯ ಇಲಾಖೆಗೆ ಮನವಿ ಮಾಡಲಾಗಿದೆ. ಪ್ರಸ್ತುತ ಕೊಡಿಮರದಲ್ಲಿ 1 ಎಕ್ರೆ ಜಾಗ ಇದ್ದು ಭೂ ಸಮತಟ್ಟು ಪ್ರಗತಿಯಲ್ಲಿದೆ.
– ರೂಪಾ ಶೆಟ್ಟಿ, ಪೌರಾಯುಕ್ತೆ, ನಗರಸಭೆ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next