Advertisement

ಜಾರ್ಖಂಡ್‌: 67 ಅಭ್ಯರ್ಥಿಗಳ ಭವಿಷ್ಯ ನಿರ್ಣಯಿಸುವ 66 ಲಕ್ಷ ಮತದಾರರು

09:16 AM May 12, 2019 | Team Udayavani |

ರಾಂಚಿ : ನಾಳೆ ಭಾನುವಾರ ಮೇ 12ರಂದು ಜಾರ್ಖಂಡ್‌ ನಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 66 ಲಕ್ಷ ಮತದಾರರು 67 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

Advertisement

ಕಣದಲ್ಲಿರುವ 67 ಅಭ್ಯರ್ಥಿಗಳ ಪೈಕಿ ಮುಖ್ಯರಾಗಿರುವವರೆಂದರೆ ಜಾರ್ಖಂಡ್‌ ಸಚಿವ ಚಂದ್ರಪ್ರಕಾಶ್‌ ಚೌಧರಿ, ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್‌ ಮತ್ತು ಮಾಜಿ ಮುಖ್ಯಮಂತ್ರಿ ಮಧು ಕೋಡ.

ಜಾರ್ಖಂಡ್‌ ನ ನಾಲ್ಕು ಲೋಕಸಭಾ ಕ್ಷೇತ್ರಗಳಾಗಿರುವ ಹಾಗೂ 2014ರ ಚುನಾವಣೆಯಲ್ಲಿ ಈ ಎಲ್ಲ 4 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದ್ದ, ಧನಬಾದ್‌, ಗಿರೀಧ್‌, ಜಮ್‌ಶೇದ್‌ಪುರ ಮತ್ತು ಸಿಂಘಭೂಮ್‌ (ಎಸ್‌ಟಿ) ನಲ್ಲಿ ಮತದಾನ ಬೆಳಗ್ಗೆ 7ರಿಂದ ಸಂಜೆ 4ರ ವರೆಗೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next