ಕೇಪ್ ವರ್ಡೆ : ಅಟ್ಲಾಂಟಿಕ್ ಮಹಾಸಾಗರದ ಕೇಪ್ ವರ್ಡೆ ಕರಾವಳಿಯಲ್ಲಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಒಂದು ಮುಳುಗಿ 60 ಕ್ಕೂ ಹೆಚ್ಚು ಜನರು ಜಲಸಮಾಧಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಹೆಚ್ಚಾಗಿ ಸೆನೆಗಲ್ ವಲಸಿಗರನ್ನು ಹೊತ್ತ ಬೋಟ್ ಜುಲೈ 10 ರಂದು 101 ಪ್ರಯಾಣಿಕರೊಂದಿಗೆ ಸೆನೆಗಲ್‌ನಿಂದ ಹೊರಟಿತ್ತು. ಸೆನೆಗಲ್‌ನ ವಿದೇಶಾಂಗ ಸಚಿವಾಲಯದ ಪ್ರಕಾರ, 38 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಆದರೆ, ಘಟನೆಯ ಸಮಯ ಸ್ಪಷ್ಟವಾಗಿಲ್ಲ.
ಕೇಪ್ ವರ್ಡೆ ಅಥವಾ ಕ್ಯಾಬೊ ವರ್ಡೆ ,ಅಧಿಕೃತವಾಗಿ ರಿಪಬ್ಲಿಕ್ ಆಫ್ ಕ್ಯಾಬೊ ವರ್ಡೆ ಮಧ್ಯ ಅಟ್ಲಾಂಟಿಕ್ ಸಾಗರದಲ್ಲಿರುವ ದ್ವೀಪ ರಾಷ್ಟ್ರವಾಗಿದೆ.
ಸಚಿವಾಲಯದ ಪ್ರಕಾರ, ಬದುಕುಳಿದವರಲ್ಲಿ ಒಬ್ಬರು ಗಿನಿಯಾ-ಬಿಸ್ಸಾವ್‌ನವರು, ಕೇಪ್ ವರ್ಡೆ ದ್ವೀಪದ ಸಾಲ್‌ನಲ್ಲಿದ್ದರು. ಸೆನೆಗಲ್ ತಮ್ಮ ವಾಪಸಾತಿಗಾಗಿ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಪಶ್ಚಿಮ ಆಫ್ರಿಕಾದ ಕರಾವಳಿಯಿಂದ ಕ್ಯಾನರಿ ದ್ವೀಪಗಳಿಗೆ ಅಟ್ಲಾಂಟಿಕ್ ವಿಶ್ವದ ಅತ್ಯಂತ ಮಾರಕ ವಲಸೆ ಮಾರ್ಗವಾಗಿದೆ. ರಾಯಿಟರ್ಸ್ ಪ್ರಕಾರ ಬೇಸಗೆಯು ಅದರ ಅತ್ಯಂತ ಜನನಿಬಿಡ ಅವಧಿಯಾಗಿದೆ.
IOM ಪ್ರಕಾರ, 2022 ರಲ್ಲಿ 559 ಜನರು ಸಾವನ್ನಪ್ಪಿದರು. ಈ ವರ್ಷದ ಮೊದಲ ಆರು ತಿಂಗಳಲ್ಲಿ ಇದೇ ಮಾರ್ಗದಲ್ಲಿ ಕನಿಷ್ಠ 15 ಹಡಗು ಅಪಘಾತಗಳು ದಾಖಲಾಗಿವೆ. 126 ಜನರು ಸಾವನ್ನಪ್ಪಿದ್ದಾರೆ ಮತ್ತು ನಾಪತ್ತೆಯಾಗಿದ್ದಾರೆ. ಕಳೆದ ತಿಂಗಳು, ಸೆನೆಗಲ್‌ನ ರಾಜಧಾನಿ ಡಾಕರ್‌ನ ಕರಾವಳಿಯಲ್ಲಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ಕನಿಷ್ಠ 15 ಜನರು ನೀರು ಪಾಲಾಗಿದ್ದರು.