Advertisement
ಮೂರನೇ ಅಲೆಯ ಸಂಭಾವ್ಯತೆ ಹಿನ್ನೆಲೆಯಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ಮುಂಬೈನಾದ್ಯಂತ 1ರಿಂದ 18 ವರ್ಷದೊಳಗಿನವರ ಸೀರೋ ಸರ್ವೇ ನಡೆಸಿದ್ದು, ಅರ್ಧದಷ್ಟು ಮಂದಿಯಲ್ಲಿ ಪ್ರತಿಕಾಯ ಸೃಷ್ಟಿಯಾಗಿರುವ ವಿಚಾರ ತಿಳಿದು ಬಂದಿದೆ.
ಮೇ ತಿಂಗಳಲ್ಲಿ ಒಟ್ಟಾರೆ ಸೋಂಕಿತರ ಪೈಕಿ ಶೇ.10.31ರಷ್ಟು ಮಂದಿಯಲ್ಲಿ ಕೊರೊನಾ ಸೋಂಕಿನ ಕಳವಳಕಾರಿ ರೂಪಾಂತರಿ ಪ್ರಕರಣಗಳು ಕಂಡುಬಂದಿದ್ದವು. ಜೂನ್ 20ರ ವೇಳೆಗೆ ಈ ಪ್ರಮಾಣ ಶೇ.51ಕ್ಕೇರಿತ್ತು ಎಂದು ಸಂಸದೀಯ ಸಮಿತಿಗೆ ಕೇಂದ್ರ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Related Articles
ಈ ನಡುವೆ, ಕೊರೊನಾದ ಬೀಟಾ ರೂಪಾಂತರಿಯ ವಿರುದ್ಧ ಈಗಿರುವ ಲಸಿಕೆಗಳು ಪರಿಣಾಮಕಾರಿಯಾಗಿಲ್ಲ ಎಂದು ಬೋಸ್ಟನ್‌ನ ಮಕ್ಕಳ ಆಸ್ಪತ್ರೆಯ ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ವೈರಾಣುವಿನ ಸ್ಪೈಕ್ ಪ್ರೊಟೀನ್‌ನ ಅಧ್ಯಯನ ನಡೆಸಿದಾಗ, ಬೀಟಾ ವಿರುದ್ಧ ಲಸಿಕೆ ಕಡಿಮೆ ಪರಿಣಾಮ ಬೀರಿದ್ದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
Advertisement
ಇದನ್ನೂ ಓದಿ :ವಿಧಾನ ಸಭಾ ಚುನಾವಣೆಯೇ ನಮ್ಮ ಮುಖ್ಯ ಗುರಿ : ಮಾಯಾವತಿ
ಸಮಸ್ಯೆ ಇತ್ಯರ್ಥಕ್ಕೆ ಮನವಿ:ಕೊವಿಶೀಲ್ಡ್ ಲಸಿಕೆ ಪಡೆದವರಿಗೆ ಐರೋಪ್ಯ ಒಕ್ಕೂಟಕ್ಕೆ ಪ್ರವೇಶ ನಿರಾಕರಿಸಿರುವ ಸುದ್ದಿಗೆ ಸಂಬಂಧಿಸಿ ಸೀರಂ ಇನ್ ಸ್ಟಿಟ್ಯೂಟ್ ಸಿಇಒ ಅಡಾರ್ ಪೂನಾವಾಲ ಪ್ರತಿಕ್ರಿಯಿಸಿದ್ದಾರೆ. ಐರೋಪ್ಯ ಒಕ್ಕೂಟಕ್ಕೆ ಪ್ರಯಾಣಿಸುವ ಭಾರತೀಯರಿಗೆ ಸಮಸ್ಯೆ ಎದುರಾಗಿರುವ ವಿಚಾರ ಗಮನಕ್ಕೆ ಬಂದಿದ್ದು, ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದಿದ್ದಾರೆ. 40,845 ಬ್ಲ್ಯಾಕ್ ಫಂಗಸ್ ಪ್ರಕರಣ
ದೇಶದಲ್ಲಿ ಈವರೆಗೆ 40,845 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ. ಜತೆಗೆ, ಈ ಫಂಗಸ್ ನಿಂದ ಮೃತಪಟ್ಟವರ ಸಂಖ್ಯೆ 3,129ಕ್ಕೇರಿದೆ ಎಂದಿದ್ದಾರೆ. ಇದೇ ವೇಳೆ, ಡೆಲ್ಟಾ ಪ್ಲಸ್ ರೂಪಾಂತರಿಯು ಲಸಿಕೆಯ ಪರಿಣಾಮಕಾರಿತ್ವದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಅಥವಾ ಈ ರೂಪಾಂತರಿ ವಿರುದ್ಧ ಲಸಿಕೆ ಕೆಲಸ ಮಾಡಲ್ಲ ಎಂಬುದು ಇನ್ನೂ ಸಾಬೀತಾಗಿಲ್ಲ ಎಂದು ಕೋವಿಡ್ ಕಾರ್ಯಪಡೆ ಅಧ್ಯಕ್ಷ ವಿ.ಕೆ. ಪೌಲ್ ಸ್ಪಷ್ಟಪಡಿಸಿದ್ದಾರೆ.