ಕಲಬುರಗಿ: ಸಂವಿಧಾನ ಬದಲಾವಣೆ ಹಾಗೂ ಅಂಬೇಡ್ಕರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಅವರ ಕಲಬುರಗಿ ಪ್ರವೇಶ ವಿರೋಧಿಸಿ, ಅವರ ಮುಖಕ್ಕೆ ಕಪ್ಪು ಮಸಿ ಬಳಿಯಲೆತ್ನಿಸಿದ ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಗುರುವಾರ ಬಂಧಿಸಿದರು. ಕೇಂದ್ರ ಸಚಿವರು ನಗರಕ್ಕೆ ಆಗಮಿಸಿದ್ದ ವಿಷಯವನ್ನು ಅರಿತ ದಲಿತಪರ ಮತ್ತು ಪ್ರಗತಿಪರ ಕಾರ್ಯಕರ್ತರು ಬೆಳಗ್ಗೆ 10ರ ಸುಮಾರಿಗೆ ಐವಾನ್‌ಶಾಹಿ ಅತಿಥಿಗೃಹಕ್ಕೆ ದೌಡಾಯಿಸಿದರು. ಆದರೆ, ಪೊಲೀಸರ ಸರ್ಪಗಾವಲಿನ ಭದ್ರತೆಯಿದ್ದರೂ ಬ್ಯಾರಿಕೇಡ್‌ಗಳನ್ನು ದಾಟಿಕೊಂಡು ಹೋಗುವ ಮತ್ತು ಮುಖಕ್ಕೆ ಮಸಿ ಬಳಿಯಲು ಸಾಧ್ಯವಾಗದೇ ಇದ್ದರೆ ಮೊಟ್ಟೆ ಎಸೆಯುವ ಯೋಜನೆ ರೂಪಿಸಲಾಗಿತ್ತು. ಪೊಲೀಸರಿಂದಾಗಿ ಇದು
ವಿಫಲವಾಯಿತು. ಇದರಿಂದ ಆಕ್ರೋಶಗೊಂಡ ಸಂಘಟನೆಗಳ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದು, ನೂಕುನುಗ್ಗಲು ಉಂಟಾಯಿತು. ಪೊಲೀಸರು ವಿಠuಲ ದೊಡ್ಡಮನಿ, ಕೆ.ನೀಲಾ, ಹಣಮಂತ ಯಳಸಂಗಿ, ಡಾ| ಮಲ್ಲೇಶಿ ಸಜ್ಜನ್, ಮಲ್ಲಪ್ಪ ಹೊಸಮನಿ ಇತರರನ್ನು ಬಂಧಿಸಿದರು.