ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ ಜಗತ್ತಿನ 137 ದೇಶಗಳಲ್ಲಿ ಅತಂತ್ರರಾಗಿದ್ದ 5 ಲಕ್ಷಕ್ಕೂ ಅಧಿಕ ಭಾರತೀಯರನ್ನು ವಂದೇ ಭಾರತ್ ಮಿಷನ್ ಯೋಜನೆಯಡಿ ದೇಶಕ್ಕೆ ಕರೆತರಲಾಗಿದೆ.
94,085 ಮಂದಿಯನ್ನು ಮರಳಿ ಕರೆಸಿಕೊಂಡ ಕೇರಳ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ!
ಆರಂಭದಲ್ಲಿ ನಮ್ಮ ಗುರಿಯಿದ್ದದ್ದು ಕೇವಲ 2 ಲಕ್ಷ ಮಂದಿಯನ್ನು ಕರೆ ತರುವುದು.
ಈಗ 5 ಲಕ್ಷ ಮಂದಿಯನ್ನು ಕರೆ ತರಲಾಗಿದೆ. ಇದು ಹೆಮ್ಮೆಯ ಸಾಧನೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿಕೊಂಡಿದೆ.
ಮೂರು ಹಂತದಲ್ಲಿ ಈ ಮಿಷನ್ ಜಾರಿಯಾಗಿತ್ತು. ಮೇ 7ರಿಂದ 15, ಮೇ 17ರಿಂದ ಜೂ.10, ಜೂ.11ರಿಂದ ಜು.2ರವರೆಗೆ ಭಾರತೀಯರನ್ನು ಮರಳಿ ದೇಶಕ್ಕೆ ಕರೆ ತರಲಾಗಿದೆ.