Advertisement
ಕೃತಕ ಬುದ್ಧಿಮತ್ತೆ(ಎಐ) ಸಾಫ್ಟ್ ವೇರ್ ಬಳಸಿಕೊಂಡು ತೀರ್ಪುಗಳನ್ನು ತರ್ಜುಮೆ ಮಾಡಲಾಗಿದೆ.
Related Articles
Advertisement
ಇದಲ್ಲದೇ, ಕೆಲವು ತೀರ್ಪುಗಳನ್ನು ಉರ್ದು, ಅಸ್ಸಾಮೀಸ್, ಪಂಜಾಬಿ ಮತ್ತು ಒಂದು ತೀರ್ಪನ್ನು ನೇಪಾಳಿ ಭಾಷೆಗೂ ಭಾಷಾಂತರ ಮಾಡಲಾಗಿದೆ.
ಶೇ.90ರಷ್ಟು ನಿಖರತೆ:9 ಭಾಷೆಗಳಿಗೆ ಭಾಷಾಂತರಗೊಂಡ ತೀರ್ಪುಗಳು ಶೇ.90ರಷ್ಟು ನಿಖರತೆ ಹೊಂದಿದ್ದು, ಸಣ್ಣಪುಟ್ಟ ತಪ್ಪುಗಳು ಕಂಡುಬಂದರೆ ಕೈಯ್ಯಲ್ಲೇ ಅವುಗಳನ್ನು ಸರಿಪಡಿಸಿ, ನಂತರವೇ ಅಪ್‌ಲೋಡ್ ಮಾಡಲಾಗುತ್ತಿದೆ. ಕೃತಕ ಬುದ್ಧಿಮತ್ತೆಯ ಸಾಫ್ಟ್ ವೇರ್ ಅನ್ನು ಕೆಲವು ಹೈಕೋರ್ಟ್‌ಗಳಿಗೂ ಹಂಚಿಕೆ ಮಾಡಲಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ. 2017ರಲ್ಲಿ ಕೇರಳ ಹೈಕೋರ್ಟ್‌ನ ವಜ್ರಮಹೋತ್ಸವದಲ್ಲಿ ಮಾತನಾಡಿದ್ದ ರಾಷ್ಟ್ರಪತಿ ಕೋವಿಂದ್ ಅವರು, ತೀರ್ಪುಗಳ ಭಾಷಾಂತರವು ಅರ್ಜಿದಾರರಿಗೆ ಲಭ್ಯವಾಗುವಂತೆ ಮಾಡಬೇಕು ಎಂಬ ಸಲಹೆಯನ್ನು ನೀಡಿದ್ದರು. ತದನಂತರ, 2019ರ ಜುಲೈನಲ್ಲಿ ಅಂದಿನ ಸಿಜೆಐ ಆಗಿದ್ದ ನ್ಯಾ.ರಂಜನ್ ಗೊಗೋಯ್ ಅವರು ಕನ್ನಡ ಸೇರಿದಂತೆ 6 ಪ್ರಾದೇಶಿಕ ಭಾಷೆಗಳಲ್ಲೂ ತೀರ್ಪು ಲಭ್ಯವಾಗುವಂಥ ನಿಯಮ ಜಾರಿಗೆ ತಂದರು. ಯೋಜನೆ ಆರಂಭವಾಗಿದ್ದು – ಆಗಸ್ಟ್ 2018
ಭಾಷಾಂತರಗೊಂಡ ತೀರ್ಪುಗಳು- 469
ಒಟ್ಟು ಎಷ್ಟು ಭಾಷೆಗಳಿಗೆ ಭಾಷಾಂತರ? – 12
ಹಿಂದಿಗೆ ತರ್ಜುಮೆಗೊಂಡ ತೀರ್ಪುಗಳು- 243
ತಮಿಳಿಗೆ ಭಾಷಾಂತರಗೊಂಡಿದ್ದು – 70
ಮಲಯಾಳಂಗೆ – 42
ಮರಾಠಿಗೆ – 25
ಕನ್ನಡ ಮತ್ತು ಒರಿಯಾಗೆ – ತಲಾ 23
ತೆಲುಗಿಗೆ ಭಾಷಾಂತರಗೊಂಡಿದ್ದು- 19