Advertisement

‘ಮಹಾ’ವಿಧಾನಸಭೆಯಲ್ಲಿ ಏಳು ದಿನದಲ್ಲಿ  3ಲಕ್ಷ ಇಲಿ ಸಂಹಾರ!

09:50 AM Mar 23, 2018 | Team Udayavani |

ಮುಂಬಯಿ: ಮಹಾರಾಷ್ಟ್ರ ವಿಧಾನ ಸೌಧದಲ್ಲಿ ಇಲಿಗಳ ಕಾಟ ಜಾಸ್ತಿಯಾಗಿತ್ತೆಂಬ ದೂರಿನ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಯೊಂದಕ್ಕೆ ಸರಕಾರ, ಇಲಿಗಳನ್ನು ಕೊಲ್ಲುವ ಗುತ್ತಿಗೆ ನೀಡಿದ್ದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಏಕನಾಥ್‌ ಕಾಡ್ಸೆ ಆಗ್ರಹಿಸಿದ್ದಾರೆ. 

Advertisement

“ಸರಕಾರದಿಂದ ಇಲಿಗಳನ್ನು ಕೊಲ್ಲುವ ಗುತ್ತಿಗೆ ಪಡೆದಿದ್ದ ಕಂಪನಿಯು, ಕೇವಲ ಏಳು ದಿನಗಳಲ್ಲಿ 3,19,400 ಇಲಿಗಳನ್ನು ಕೊಂದಿದ್ದಾಗಿ ಲೆಕ್ಕ ಕೊಟ್ಟಿದೆ. ಇದು ಹೇಗೆ ಸಾಧ್ಯ? ಏಳು ದಿನಗಳಲ್ಲಿ ಇಷ್ಟು ಇಲಿಗಳನ್ನು ಕೊಂದಿದೆಯೆಂದರೆ, ಪ್ರತಿ ದಿನ 45,628.57 ಇಲಿಗಳನ್ನು ಕೊಂದಿದೆಯೇ? ಹಾಗಾದರೆ, ದಿನವೊಂದಕ್ಕೆ ಸತ್ತ ಇಲಿಗಳ ತೂಕ ಒಟ್ಟು 9,125.71 ಕೆಜಿ ಆಗಲಿದ್ದು, ಇದನ್ನು ಹೊತ್ತೂಯ್ಯಲು ಬೃಹತ್‌ ಟ್ರಕ್‌ಗಳನ್ನು ಬಳಸಲಾಗಿತ್ತೇ?” ಎಂದು ತಮ್ಮದೇ ಆದ ಲೆಕ್ಕಾಚಾರ ನೀಡಿದ ಕಾಡ್ಸೆ, ಸದನದಲ್ಲಿ ನಗೆಬುಗ್ಗೆ ಉಕ್ಕಿಸಿದರು. ಅಲ್ಲದೆ, ಇಡೀ ಪ್ರಕರಣವೇ ಗೊಂದಲಮಯ ಆಗಿರುವುದರಿಂದ ಪ್ರಕರಣದ ನ್ಯಾಯಾಂಗ ತನಿಖೆಯಾಗಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next