Advertisement

5 ವರ್ಷಗಳಲ್ಲಿ ರೂ1 ಲಕ್ಷ ಕೋಟಿ ದಾಟಿದ ಬ್ಯಾಂಕಿಂಗ್‌ ವಂಚನೆ

06:00 AM May 03, 2018 | Team Udayavani |

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ನಡೆದ ಬ್ಯಾಂಕಿಂಗ್‌ ಕ್ಷೇತ್ರದ ವಂಚನೆ ಮೌಲ್ಯ ಎಷ್ಟು ಗೊತ್ತೇ? ಬರೋಬ್ಬರಿ 1 ಲಕ್ಷ ಕೋಟಿ ರೂ. ಒಟ್ಟು 23 ಸಾವಿರ ಪ್ರಕರಣಗಳು ಗೊತ್ತಾಗಿವೆ ಎಂದು ಆರ್‌ಬಿಐ ತಿಳಿಸಿದೆ. ಮಾಹಿತಿ ಹಕ್ಕು ಅರ್ಜಿಗೆ ನೀಡಿರುವ ಉತ್ತರದಲ್ಲಿ ಈ ಮಾಹಿತಿ ನೀಡಿದೆ. 2016 -17ರ ವಿತ್ತೀಯ ವರ್ಷದಲ್ಲಿ, 5,000ಕ್ಕಿಂತಲೂ ಹೆಚ್ಚು ಅವ್ಯವಹಾರದ ಪ್ರಕರಣಗಳು ದಾಖಲಾಗಿದ್ದವು. ಆದರೆ,  ಕಳೆದ ಏಪ್ರಿಲ್‌ನಿಂದ ಈ ವರ್ಷದ ಮಾರ್ಚ್‌ ಅವಧಿಯಲ್ಲಿ 28,459 ಕೋಟಿ ರೂ. ಮೊತ್ತದ 5,152 ಅವ್ಯವಹಾರ ಪ್ರಕರಣಗಳು ದಾಖಲಾಗಿವೆ. 

Advertisement

ಪಿಎನ್‌ಬಿ ವಂಚನೆ ದೊಡ್ಡದು
ದೇಶದ ನಾನಾ ಬ್ಯಾಂಕುಗಳಿಗೆ ಆಗಿರುವ ಮೋಸಗಳಲ್ಲೇ ಅತಿ ದೊಡ್ಡದೆಂದರೆ ಅದು ವಜ್ರ ವ್ಯಾಪಾರಿ ನೀರವ್‌ ಮೋದಿ ಮಾಡಿರುವ ಹಗರಣ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಆತ ಹಾಗೂ ಆತನ ಆಪ್ತರು ಮಾಡಿರುವ 13,000 ಕೋಟಿ ರೂ.ಗಳ ಮೋಸ, ಈವರೆಗಿನ ದೇಶದ ಇತಿಹಾಸದಲ್ಲೇ ಅತಿದೊಡ್ಡ ಬ್ಯಾಂಕ್‌ ಹಗರಣ ಎಂದು ಆರ್‌ಬಿಐ ಹೇಳಿದೆ. 

ಸರ್ಕಾರ ಹೇಳ್ಳೋದೇನು? 
2017ರ ಡಿಸೆಂಬರ್‌ವರೆಗಿನ ಲೆಕ್ಕಾಚಾರದಂತೆ, ಭಾರತದ ವಿವಿಧ ಬ್ಯಾಂಕುಗಳ ಮರುಪಾವತಿಯಾಗದ ಸಾಲದ ಮೊತ್ತ 8,40,958 ಕೋಟಿ ರೂ. ಎಸ್‌ಬಿಐ ಹೊಂದಿರುವ ಮರುಪಾವತಿಯಾಗದ ಸಾಲದ ಪ್ರಮಾಣ ಶೇ. 23.96ರಷ್ಟಿದೆ ಎನ್ನುತ್ತಿದೆ ಕೇಂದ್ರ ಸರ್ಕಾರ.

8,40,958 ಕೋಟಿ ರೂ. ಭಾರತದಲ್ಲಿರುವ ಮರುಪಾವತಿಯಾಗದ (ಎನ್‌ಪಿಎ) ಸಾಲದ ಮೊತ್ತ (2017ರ ಡಿಸೆಂಬರ್‌ವರೆಗಿನ ಅವಧಿಯಲ್ಲಿ) 
600 ಕೋಟಿ ರೂ. ಇತ್ತೀಚಿನ ಐಡಿಬಿಐ ಬ್ಯಾಂಕ್‌ ಹಗರಣದ ಮೊತ್ತ

ಎನ್‌ಪಿಎ ಯಾರ ಮೇಲೆ ಎಷ್ಟೆಷ್ಟು? 
ಬ್ಯಾಂಕ್‌         ಎನ್‌ಪಿಎ (ಕೋಟಿಗಳಲ್ಲಿ)

Advertisement

ಯಾವ್ಯಾವಾಗ ಎಷ್ಟೆಷ್ಟು ? 
ವರ್ಷ   ಪ್ರಕರಣ ಹಗರಣ ( ಕೋಟಿಗಳಲ್ಲಿ) 

ಈ ವರೆಗೆ ದಾಖಲಾಗಿರುವ ಬ್ಯಾಂಕ್‌ ಹಗರಣ ಪ್ರಕರಣಗಳ ತನಿಖೆ ನಡೆಯುತ್ತಿದೆ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 
ಆರ್‌ಬಿಐ

Advertisement

Udayavani is now on Telegram. Click here to join our channel and stay updated with the latest news.

Next