ಹಮೀದ್ ಅಶ್ರಫ್, ಗುರೂಜಿ ಸೂಚನೆ ಮೇರೆಗೆ ದಂಧೆ ನಡೆಸುತ್ತಿದ್ದ
Advertisement
ಬೆಂಗಳೂರು: ಸೈಬರ್ ಭಯೋತ್ಪಾದನೆ ಮತ್ತು ರೈಲ್ವೇ ಇ-ಟಿಕೆಟ್ ವಂಚನೆ ದಂಧೆ ಪ್ರಕರಣದಲ್ಲಿ ಬಂಧಿತನಾಗಿ ಬೆಂಗಳೂರು ಪೊಲೀಸರ ವಶದಲ್ಲಿರುವ ಝಾರ್ಖಂಡ್‌ನ ಗುಲಾಮ್ ಮುಸ್ತಫಾನ ಕೈಕೆಳಗೆ ಸುಮಾರು 20 ಸಾವಿರ ಮಂದಿ ಕೆಲಸ ಮಾಡುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ಅತ್ಯಂತ ಸುರಕ್ಷಿತ ಎನ್ನಲಾದ ರೈಲ್ವೇ ಇಲಾಖೆಯ ಸಾಫ್ಟ್ವೇರ್ ಹಾಗೂ ವೆಬ್‌ಸೈಟ್ ಅನ್ನು ಎಎನ್‌ಎಂಎಸ್ ಎಂಬ ಆ್ಯಂಟಿ ಸಾಫ್ಟ್ವೇರ್ ಬಳಸಿ ಮೂರೂವರೆ ವರ್ಷಗಳ ಹಿಂದೆಯೇ ಹ್ಯಾಕ್ ಮಾಡಲಾ ಗಿತ್ತು. ಈ ಕೆಲಸ ಮಾಡಿದ ಹಮೀದ್ ಅಶ್ರಫ್ ಮತ್ತು ತಂಡ ಸದ್ಯ ದುಬಾೖಯಲ್ಲಿ ತಲೆಮರೆಸಿಕೊಂಡಿದೆ. ಅಂದಿನಿಂದ ಭಾರತದಲ್ಲಿ ದಂಧೆಯ ಸಂಪೂರ್ಣ ಹೊಣೆಯನ್ನು ಮುಸ್ತಫಾ ನಿರ್ವಹಿಸುತ್ತಿದ್ದ. ಈತ ಎಎನ್‌ಎಂಎಸ್ ಆ್ಯಂಟಿ ಸಾಫ್ಟ್ವೇರ್ ಅನ್ನು 30 ಸೂಪರ್ ಅಡ್ಮಿನ್‌ಗಳು, 300 ಮಂದಿ ಲೀಡ್ ಸೆಲ್ಲರ್ಸ್ ಮೂಲಕ ದೇಶದಲ್ಲಿರುವ 20 ಸಾವಿರ ಮಧ್ಯವರ್ತಿಗಳಿಗೆ ರವಾನಿಸುತ್ತಿದ್ದ. ಈ ವ್ಯಕ್ತಿಗಳು ಮುಸ್ತಫಾ ಸೂಚಿಸಿದ ಸಮಯದಲ್ಲಿ ಕ್ಷಣಾರ್ಧದಲ್ಲಿ ಅಕ್ರಮವಾಗಿ ರೈಲ್ವೇ ಟಿಕೆಟ್‌ಗಳನ್ನು ಮಾರಾಟ ಮಾಡಿಸಿ ಹಣವನ್ನು ತಮ್ಮ ಅಕೌಂಟ್‌ಗಳಿಗೆ ಜಮೆ ಮಾಡಿಕೊಳ್ಳುತ್ತಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Related Articles
ನೂರಾರು ಸಿಮ್‌ಕಾರ್ಡ್‌ಗಳನ್ನು ಹೊಂದಿರುವ ಮುಸ್ತಫಾ, ತನ್ನ ಮೊಬೈಲ್‌ಗಳಲ್ಲಿ ವಾಟ್ಸಾಪ್ ಬ್ರಾಡ್‌ಕಾಸ್ಟ್ ಗ್ರೂಪ್‌ಗ್ಳನ್ನು ಮಾಡಿಕೊಂಡಿದ್ದಾನೆ. ವಂಚನೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ರೈಲ್ವೇ ಸೈಬರ್ ಅಧಿಕಾರಿಗಳು ರೈಲ್ವೇ ವೆಬ್‌ಸೈಟ್ ಮತ್ತು ಆ್ಯಪ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಸಮಯವನ್ನು ಬದಲಾಯಿ
ಸುತ್ತಿದ್ದರೆ, ಅದನ್ನು ಗ್ರೂಪ್‌ನಲ್ಲಿ ಮುಸ್ತಫಾ ತನ್ನ ಏಜೆಂಟರ್‌ಗಳಿಗೆ ಸೂಚಿಸು ತ್ತಿದ್ದ. ಅಲ್ಲದೆ,
ಎಎನ್‌ಎಂಎಸ್ ಸಾಫ್ಟ್ವೇರ್ ಪಡೆಯುತ್ತಿದ್ದವರು ಮಾಸಿಕ ಎರಡರಿಂದ ಐದು ಸಾವಿರ ರೂ. ಬಾಡಿಗೆ ಕೊಡಬೇಕಿತ್ತು.
Advertisement
ಈ ಸಾಫ್ಟ್ವೇರ್ ಮೂಲಕ ಟಿಕೆಟ್ ಕಾಯ್ದಿರಿಸಿದರೆ ಯಾವುದೇ “ಕ್ಯಾಪಾ’ (ಕಂಪ್ಯೂಟರ್ ಸಾಫ್ಟ್ವೇರ್ ಬಳಕೆಯಿಲ್ಲದೆ ವ್ಯಕ್ತಿಯೇ ಪಾಸ್‌ವರ್ಡ್ ಹಾಕಬೇಕು ಹಾಗೂ ಆ ಮೂಲಕ ವೆಬ್‌ಸೈಟ್ ಪ್ರವೇಶವನ್ನು ಅಧಿಕೃತಗೊಳಿಸಬೇಕು ಎಂದಿರುವ ತಂತ್ರಾಂಶ) ಹಾಗೂ ಪಾಸ್‌ವರ್ಡ್ ಕೇಳುವುದಿಲ್ಲ. ನೇರವಾಗಿ ಟಿಕೆಟ್ ಬುಕ್ ಮಾಡಬಹುದು. ಹೀಗಾಗಿ ರೈಲ್ವೇ ಟಿಕೆಟ್ ಬುಕ್ಕಿಂಗ್ ಆರಂಭದ ಕೇವಲ 40 ಸೆಕೆಂಡ್‌ಗಳಲ್ಲಿ ಆರೋಪಿಗಳು ಶೇ.50ರಷ್ಟು ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದರು.
ಮುಸ್ತಫಾನೊಬ್ಬನೇ 563 ವೈಯಕ್ತಿಕ ಐಆರ್‌ಸಿಟಿಸಿ ಯೂಸರ್ ಐಡಿ ಬಳಕೆ ಮಾಡುತ್ತಿದ್ದ. ಮೂರು ಸಾವಿರ ಬ್ಯಾಂಕ್ ಖಾತೆಗಳ ಪೈಕಿ 2,400 ಎಸ್‌ಬಿ ಶಾಖೆ ಮತ್ತು 600 ಗ್ರಾಮಾಂತರ ಬ್ಯಾಂಕ್‌ಗಳಲ್ಲಿರುವ ಖಾತೆಗಳ ಮಾಹಿತಿ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ.
500ಕ್ಕೂ ಅಧಿಕ ಐಪಿ ವಿಳಾಸರೈಲ್ವೇ ಸೈಬರ್ ಅಧಿಕಾರಿಗಳನ್ನು ಯಾಮಾರಿಸಲು ಹಾಗೂ ಮಧ್ಯ ವರ್ತಿಗಳ ಅನುಕೂಲಕ್ಕಾಗಿ ಹಮೀದ್ ಅಶ್ರಫ್ ಮತ್ತು ಎಂಜನಿಯರ್ ತಂಡ ದುಬಾೖಯಲ್ಲಿದ್ದು ಕೊಂಡೇ ನಿತ್ಯ ರೈಲ್ವೇ ಸಾಫ್ಟ್ವೇರ್ ಮತ್ತು ಆ್ಯಪ್‌ನ್ನು ಅಪ್‌ಡೇಟ್ ಮಾಡಿ ಮುಸ್ತಫಾಗೆ ಕಳುಹಿಸುತ್ತಿದ್ದರು. ಈತ ತನ್ನ ಮಧ್ಯವರ್ತಿಗಳಿಗೆ ಸರಬರಾಜು ಮಾಡುತ್ತಿದ್ದ. ಅದಕ್ಕಾಗಿಯೇ ಆರೋಪಿಗಳು ಅಂದಾಜು 500 ಐಪಿ ವಿಳಾಸಗಳನ್ನು ದುಬಾೖಯಲ್ಲಿ ಸೃಷ್ಟಿಸಿದ್ದರು. ಹೀಗೆ ಮಾಸಿಕ 10-12 ಕೋಟಿ ರೂ. ಅಕ್ರಮ ವಹಿವಾಟು ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ರೈಲ್ವೇ ಇ-ಟಿಕೆಟ್ ದಂಧೆ ಯನ್ನು ಕೇವಲ ಹಮೀದ್ ಅಶ್ರಫ್ ಮಾತ್ರವಲ್ಲದೆ ಇತರ ನಾಲ್ವರು ಸೇರಿ ಆರಂಭಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಿಪಿಎನ್‌ನಿಂದ ದಂಧೆ
ದೇಶ ಮಾತ್ರವಲ್ಲದೆ, ವಿದೇಶದಲ್ಲೂ ತಮ್ಮ ವಂಚನೆ ಜಾಲ ವಿಸ್ತರಿಸಿಕೊಂಡಿರುವ ಹಮೀದ್ ಅಶ್ರಫ್, ಗುರೂಜಿ ಮತ್ತು ಮುಸ್ತಫಾ ಮತ್ತು ತಂಡ ಸೈಬರ್ ಪೊಲೀಸರ ಕಣ್ಣು ತಪ್ಪಿಸಲು ಯುಗೊಸ್ಲಾವಿಯ ಮೊಬೈಲ್ ನಂಬರ್ ಮತ್ತು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್) ಮೂಲಕ ದಂಧೆ ನಡೆಸುತ್ತಿದ್ದರು ಎಂಬುದು ಗೊತ್ತಾಗಿದೆ. ಸಾಮಾನ್ಯವಾಗಿ ವಿಪಿಎನ್ ಮತ್ತು ಯುಗೊಸ್ಲಾವಿಯ ನಂಬರ್ ಮೂಲಕ ಆನ್‌ಲೈನ್ ಕಾರ್ಯಾ ಚರಣೆ ನಡೆಸಿ ದರೆ ನಿರ್ದಿಷ್ಟವಾದ ಸ್ಥಳ ಪತ್ತೆಯಾಗುವು ದಿಲ್ಲ. ಬೇರೆ ಬೇರೆ ಸ್ಥಳ ಗುರುತಿಸುತ್ತದೆ. ಅದನ್ನು ಅರಿತ ಆರೋಪಿಗಳು ಈ ಮಾರ್ಗ ಅನು ಸರಿಸು ತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಹಮೀದ್ ಅಶ್ರಫ್ ಯಾರು?
ಉತ್ತರ ಪ್ರದೇಶದ ಲಕ್ನೋ ಮೂಲದ ಹಮೀದ್ ಅಶ್ರಫ್ ಸಾಫ್ಟ್ವೇರ್‌ಗಳನ್ನು ಅಭಿವೃದ್ಧಿ ಪಡಿಸುವಲ್ಲಿ ನಿಪುಣನಾಗಿದ್ದಾನೆ. ಈತ 2019ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಬಾಂಬ್ ದಾಳಿ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ರೈಲ್ವೇ ಪ್ರಕರಣದಲ್ಲಿ ಈ ಹಿಂದೆ ಈತನನ್ನು ಪೊಲೀಸರು ಬಂಧಿಸಿದ್ದರು. ಅನಂತರ ತಪ್ಪಿಸಿಕೊಂಡು ಈಗ ದುಬಾೖಯಲ್ಲಿ ತನ್ನದೇ ಜಾಲ ಸೃಷ್ಟಿಸಿಕೊಂಡಿದ್ದಾನೆ. ಈತನ ವಿರುದ್ಧ ಸಿಬಿಐನಲ್ಲಿಯೂ ಪ್ರಕರಣ ದಾಖಲಾಗಿದೆ. ದುಬಾೖಯಲ್ಲಿರುವ ಈತ ನೇರವಾಗಿ ದಂಧೆ ನಡೆಸುವುದು ಬೇಡ ಎಂದು ವಿಕ್ರಂ ಅಗರ್‌ವಾಲ್ ಹಾಗೂ ಇತರರ ಮೂಲಕ ದಂಧೆ ನಡೆಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. - ಮೋಹನ್ ಭದ್ರಾವತಿ