ವಾಷಿಂಗ್ಟನ್: ಕೆನಡಾದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ದಾಖಲೆಯ ಗರಿಷ್ಠ 49.1 ಡಿಗ್ರಿ ಸೆಲ್ಸಿಯಸ್ ತಾಪಮಾನದ ಪರಿಣಾಮ 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ. ತೀವ್ರ ತರದ ಬಿಸಿಲ ಬೇಗೆಯಿಂದಾಗಿ ವ್ಯಾಂಕೋವರ್ ಪ್ರದೇಶದಲ್ಲಿಯೇ ಅತೀ ಹೆಚ್ಚು ಸಾವು ಸಂಭವಿಸಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಹಾಲು ಕರೆಯುವ ನೆಪದಲ್ಲಿ ರಕ್ತ ಹೀರುವಂತಿದೆ ಕೇಂದ್ರ ಸರ್ಕಾರದ ತೆರಿಗೆ ನೀತಿ : ಸಿದ್ದರಾಮಯ್ಯ
ಬಿಸಿಲ ಬೇಗೆಯ ಸಾವುಗಳು ಅಮೆರಿಕದ ಪೆಸಿಫಿಕ್ ವಾಯುವ್ಯ ಭಾಗಕ್ಕೆ ವಿಸ್ತರಿಸಿರುವುದಾಗಿ ವರದಿ ಹೇಳಿದೆ. ವ್ಯಾಂಕೋವರ್ ಪ್ರದೇಶದಲ್ಲಿ ಶುಕ್ರವಾರದಿಂದ ಈವರೆಗೆ ಕನಿಷ್ಠ 134 ಮಂದಿ ಬಿಸಿಲ ಬೇಗೆಯಿಂದ ಸಾವನ್ನಪ್ಪಿರುವುದಾಗಿ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ಹೇಳಿದೆ. ಇನ್ನುಳಿದಂತೆ ಅಮೆರಿಕದ ಪೆಸಿಫಿಕ್ ವಾಯುವ್ಯ ಭಾಗದಲ್ಲಿ ಸಾವು ಸಂಭವಿಸಿರುವುದಾಗಿ ತಿಳಿಸಿದೆ.
ಕೆನಡಾದ ಲಿಟ್ಟನ್ ನಲ್ಲಿ ಸತತ ಮೂರನೇ ದಿನವಾದ ಮಂಗಳವಾರ ದಾಖಲೆ ಮಟ್ಟದ ತಾಪಮಾನಕ್ಕೆ ಸಾಕ್ಷಿಯಾಗಿದ್ದು, ಬರೋಬ್ಬರಿ
121 ಡಿಗ್ರಿ (49.5 ಡಿಗ್ರಿ ಸೆಲ್ಸಿಯಸ್) ಫ್ಯಾರನ್ ಹೀಟ್ ತಲುಪಿತ್ತು ಎಂದು ಕೆನಡಾ ಹವಾಮಾನ ಇಲಾಖೆ ವಿವರಿಸಿದೆ.
ವ್ಯಾಂಕೋವರ್ ಹವಾಮಾನದ ಇತಿಹಾಸದಲ್ಲಿ ಇಷ್ಟೊಂದು ಪ್ರಮಾಣದ ಬಿಸಿಲ ಬೇಗೆ ಕಂಡಿಲ್ಲ. ವಿಪರೀತ ಬಿಸಿಲ ಝಳದ ಪರಿಣಾಮವಾಗಿ ಜನರು ಆಕಸ್ಮಿಕವಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ಪೊಲೀಸ್ ಸಾರ್ಜೆಂಟ್ ಸ್ಟೀವ್ ಆ್ಯಡಿಷನ್ ತಿಳಿಸಿದ್ದಾರೆ.