Advertisement

Birthday: ರಸ್ತೆಯನ್ನೇ ಬ್ಲಾಕ್ ಮಾಡಿ ಹುಟ್ಟುಹಬ್ಬ ಆಚರಿಸಿದ ಪುಂಡರು… ವಿಡಿಯೋ ವೈರಲ್

09:25 AM May 31, 2024 | Team Udayavani |

ಲಕ್ನೋ: ರಸ್ತೆ ಮಧ್ಯದಲ್ಲೇ ಇಪ್ಪತ್ತಕ್ಕೂ ಹೆಚ್ಚು ಕಾರುಗಳನ್ನು ನಿಲ್ಲಿಸಿ ಹುಟ್ಟು ಹಬ್ಬ ಆಚರಿಸಿದ ವಿಚಿತ್ರ ಪ್ರಕರಣವೊಂದು ಲಕ್ನೋದಲ್ಲಿ ನಡೆದಿದ್ದು ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Advertisement

ವೀಡಿಯೊ ವೈರಲ್ ಆಗುತ್ತಿದ್ದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಡಿಯೋದಲ್ಲಿ ಏನಿದೆ:
ವೈರಲ್ ಆಗಿರುವ ದೃಶ್ಯಗಳಲ್ಲಿ, ಏಕನಾ ಕ್ರೀಡಾಂಗಣದ ಬಳಿ ಇರುವ ಸರ್ವೀಸ್ ರಸ್ತೆಯಲ್ಲಿ ಸುಮಾರು 20ಕ್ಕೂ ಅಧಿಕ ಕಾರುಗಳು ನಿಂತಿರುವುದು ಕಾಣಬಹುದು ಅಲ್ಲದೆ ಕೆಲವರು ಕಾರಿನ ಮೇಲೆ ನಿಂತು ಸಂಭ್ರಮಿಸುತ್ತಿರುವುದು ಕಾಣಬಹುದು. ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇತರ ಕಾರಿನವರು ಈ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇದು ಗುರುವಾರ ವೈರಲ್ ಆಗುತ್ತಿದ್ದಂತೆ ಪೊಲೀಸರು ಸ್ವಯಂಪ್ರೇರಿತರಾಗಿ ಕೇಸು ದಾಖಲಿಸಿಕೊಂಡಿದ್ದಾರೆ.

ವೈರಲ್ ವಿಡಿಯೋ ಸಂಬಂಧ ಹೇಳಿಕೆ ನೀಡಿರುವ ದಕ್ಷಿಣದ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ಎಡಿಸಿಪಿ) ಶಶಾಂಕ್ ಸಿಂಗ್ ಇಲ್ಲಿನ ಕ್ರೀಡಾಂಗಣದ ಬಳಿ ಇರುವ ಸರ್ವಿಸ್ ರಸ್ತೆಯಲ್ಲಿ 20-25 ಕಾರುಗಳನ್ನು ನಿಲ್ಲಿಸಿರುವುದನ್ನು ವೈರಲ್ ವೀಡಿಯೊ ತೋರಿಸುತ್ತಿದೆ. ಈ ವ್ಯಕ್ತಿಗಳು ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು ಪ್ರಕರಣ ಕೂಡ ದಾಖಲಾಗಿದೆ ಆದಷ್ಟು ಬೇಗ ತಪ್ಪಿತಸತರನ್ನು ವಶಕ್ಕೆ ಪಡೆಯಲಿದ್ದೇವೆ ಎಂದು ಹೇಳಿದ್ದಾರೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next