ನವದೆಹಲಿ: ವಾಟ್ಸ್‌ಆ್ಯಪ್ ಸಂಸ್ಥೆಯು ನವೆಂಬರ್ ತಿಂಗಳಲ್ಲಿ 17.59 ಲಕ್ಷ ಭಾರತೀಯರ ವಾಟ್ಸ್‌ಆ್ಯಪ್ ಖಾತೆಗಳನ್ನು ನಿಷೇಧಿಸಿದೆ. ಒಂದೇ ತಿಂಗಳಲ್ಲಿ 602 ದೂರುಗಳನ್ನು ವಾಟ್ಸ್‌ಆ್ಯಪ್ ಸಂಸ್ಥೆಯ ದೂರು ಪ್ರಕ್ರಿಯೆ ಸಮಿತಿಗೆ ಸಲ್ಲಿಸಲಾಗಿದ್ದು, ಅದರಲ್ಲಿ 36ರ ವಿರುದ್ಧ ಕ್ರಮ ತೆಗೆದುಕೊಂಡಿರುವುದಾಗಿ ಸಂಸ್ಥೆಯು ಮಾಸಿಕ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಮೇಕೆದಾಟು-ಕಾಂಗ್ರೆಸ್ ಪಾದಯಾತ್ರೆಗೆ ಕೋವಿಡ್ ನಿಯಮ ಅಡ್ಡಿ?ಸಿಎಂ ಪರೋಕ್ಷ ಸುಳಿವು
ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ಅನ್ವಯ ವಾಟ್ಸ್‌ಆ್ಯಪ್ ಸಂಸ್ಥೆ ಕಳೆದ ಆರು ತಿಂಗಳುಗಳಿಂದ ಮಾಸಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಿದೆ. 40 ಕೋಟಿಗೂ ಅಧಿಕ ಬಳಕೆದಾರರಿರುವ ಸಂಸ್ಥೆಯು ಅಕ್ಟೋಬರ್‌ನಲ್ಲಿ 20 ಲಕ್ಷ ಭಾರತೀಯ ವಾಟ್ಸ್‌ಆ್ಯಪ್ ಖಾತೆಗಳನ್ನು ನಿಷೇಧಿಸಿತ್ತು.
ಕಾರು ಮಾರಾಟ: ಹುಂಡೈ ಮೀರಿಸಿದ ಟಾಟಾ
2021ರ ಡಿಸೆಂಬರ್‌ನಲ್ಲಿ ಕಾರು ವ್ಯಾಪಾರದಲ್ಲಿ ಹುಂಡೈ ಸಂಸ್ಥೆಯನ್ನು ಹಿಂದಿಕ್ಕಿ ಟಾಟಾ ಮೋಟಾರ್ ದೇಶದ 2ನೇ ಅತಿದೊಡ್ಡ ಕಾರು ಸಂಸ್ಥೆಯಾಗಿ ಹೊರಹೊಮ್ಮಿದೆ.
ಟಾಟಾ ಮೋಟಾರ್ ಡಿಸೆಂಬರ್‌ನಲ್ಲಿ 35,300 ಕಾರುಗಳನ್ನು ಮಾರಾಟ ಮಾಡಿದ್ದರೆ, ಹುಂಡೈ ಸಂಸ್ಥೆ 32,312 ಕಾರುಗಳನ್ನು ಮಾರಾಟ ಮಾಡಿದೆ. ಈ ವಿತ್ತೀಯ ವರ್ಷದ ಮೂರನೇ ತ್ತೈಮಾಸಿಕದಲ್ಲಿ ಸಂಸ್ಥೆಯಿಂದ 99,002 ಕಾರುಗಳನ್ನು ಮಾರಾಟ ಮಾಡಲಾಗಿದೆ.
ಕಳೆದ ವಿತ್ತೀಯ ವರ್ಷದ 3ನೇ ತ್ತೈಮಾಸಿಕಕ್ಕೆ ಹೋಲಿಸಿದರೆ ಇದು ಶೇ.44 ಏರಿಕೆಯಾಗಿದೆ. 2021ರ ಕ್ಯಾಲೆಂಡರ್ ವರ್ಷದಲ್ಲಿ 3.31 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. 2020ರ ಡಿಸೆಂಬರ್ ಗೆ ಹೋಲಿಸಿದರೆ 2021ರ ಡಿಸೆಂಬರ್‌ನಲ್ಲಿ ಟಾಟಾ ಕಾರು ಮಾರಾಟ ಶೇ.50 ಏರಿಕೆಯಾಗಿದೆ.