Advertisement
ಶೇ. 9.89ರಷ್ಟು ತಗ್ಗಿದ ಬಡವರ ಸಂಖ್ಯೆ: ವರದಿ ಪ್ರಕಾರ, 2015-16ರಲ್ಲಿ ಭಾರತದಲ್ಲಿ ಬಹುಆಯಾಮದ ಬಡತನದಿಂದ ಬಳುತ್ತಿರುವವರ ಸಂಖ್ಯೆ ಶೇ. 24.85ರಷ್ಟಿತ್ತು. 2019-21ರಲ್ಲಿ ಈ ಸಂಖ್ಯೆ ಶೇ.14.96ರಷ್ಟಾಗಿದೆ. ಈ ಮೂಲಕ ಬಡವರ ಸಂಖ್ಯೆ ಶೇ.9.89ರಷ್ಟು ತಗ್ಗಿದೆ. ನೀತಿ ಆಯೋಗದ ಉಪಾಧ್ಯಕ್ಷರಾದ ಸುಮನ್ ಬೆರಿ ಅವರು “ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕ: ಪ್ರಗತಿ ಪರಿಶೀಲನೆ 2023′ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದ್ದಾರೆ.
ನಗರಗಳಿಗೆ ಹೋಲಿಸಿದರೆ ಗ್ರಾಮಾಂತರ ಪ್ರದೇಶಗಳಲ್ಲಿ ಬಹು ಆಯಾಮದ ಬಡತನದಿಂದ ಹೊರಬಂದವರ ಸಂಖ್ಯೆ ಹೆಚ್ಚಿದೆ. ಗ್ರಾಮಾಂತರ ಪ್ರದೇಶದಲ್ಲಿ 2015-16ರಲ್ಲಿ ಶೇ.35.59ರಷ್ಟಿದ್ದ ಬಡತನದಿಂದ ಬಳುತ್ತಿರುವವರ ಸಂಖ್ಯೆ, 2019-21ರ ವೇಳೆಗೆ 19.25ಕ್ಕೆ ಇಳಿಕೆಯಾಗಿದೆ. ಅದೇ ರೀತಿ ನಗರ ಪ್ರದೇಶದಲ್ಲಿ, ಶೇ. 8.65ರಷ್ಟಿದ್ದ ಪ್ರಮಾಣ ಶೇ.5.27ಕ್ಕೆ ತಗ್ಗಿದೆ. ಏನೆಲ್ಲಾ ಒಳಗೊಂಡಿದೆ?
ಬಹುಆಯಾಮದ ಬಡತನ ಸೂಚ್ಯಂಕದಲ್ಲಿ ಮುಖ್ಯವಾಗಿ ಆರೋಗ್ಯ, ಶಿಕ್ಷಣ ಮತ್ತು ಜೀವನ ಮಟ್ಟವನ್ನು ಮಾನದಂಡವಾಗಿ ಬಳಸಲಾಗುತ್ತದೆ. ಇದರಲ್ಲಿ ಪೋಷಣೆ, ಮಗು ಮತ್ತು ಹದಿಹರೆಯದವರ ಮರಣ, ಶಾಲಾ ವರ್ಷಗಳು, ಶಾಲಾ ದಾಖಲಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ವಸತಿ, ಆಸ್ತಿ ಮತ್ತು ಬ್ಯಾಂಕ್ ಖಾತೆ ಸೇರಿ ಒಟ್ಟು 12 ಅಂಶಗಳು ಒಳಗೊಂಡಿರುತ್ತದೆ.
Related Articles
ವರದಿಯ ಪ್ರಕಾರ, ಕರಾವಳಿ ರಾಜ್ಯಗಳ ರಫ್ತು ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ದೊರೆತಿದೆ. ಈ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಆಂಧ್ರ ಪ್ರದೇಶ, ಒಡಿಶಾ, ಪಶ್ವಿಮ ಬಂಗಾಳ ಮತ್ತು ಕೇರಳ ಇವೆ.
Advertisement