ಹೊಸದಿಲ್ಲಿ: ವಿಶ್ವದ 153 ದೇಶಗಳ 11 ಸಾವಿ ರಕ್ಕೂ ಅಧಿಕ ವಿಜ್ಞಾನಿಗಳು ಜಾಗತಿಕ ತಾಪ ಮಾನ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಬಯೋಸೈನ್ಸ್ ಜರ್ನಲ್‌ನಲ್ಲಿ ಪ್ರಕಟಿಸಿರುವ ಲೇಖನದಲ್ಲಿ ಭಾರತ 69 ಮಂದಿ ಸೇರಿದಂತೆ ಜಗತ್ತಿನ 11,258 ವಿಜ್ಞಾನಿಗಳು, ಜಾಗತಿಕ ತಾಪಮಾನ ತುರ್ತು ಪರಿಸ್ಥಿತಿ ಘೋಷಣೆಗೆ ಸಹಿ ಹಾಕಿದ್ದು, ತಾಪಮಾನ ತಗ್ಗಿಸಲು ತ್ವರಿತ ವಾಗಿ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಕಳೆದ 40 ವರ್ಷ ಗಳಲ್ಲಿ ಇಂಧನ ಬಳಕೆ, ಉಷ್ಣಾಂಶ, ಜನಸಂಖ್ಯೆ ಏರಿಕೆ, ಅರಣ್ಯ ನಾಶ, ಇಂಗಾಲ ಹೊರಸೂಸು ವಿಕೆ, ರಸಗೊಬ್ಬರ ದರ, ಸಮುದ್ರ ಮಟ್ಟ ಏರಿಕೆ ಮತ್ತಿತರ ಪರಿಸರ ವಿನಾಶಕಾರಿ ವಿಚಾರವಾಗಿ ಸಾರ್ವಜನಿಕವಾಗಿ ಲಭ್ಯವಿರುವ ಅಂಕಿ ಅಂಶಗಳನ್ನು ಆಧರಿಸಿ ಜಾಗತಿಕ ತಾಪಮಾನವನ್ನು ವಿಶ್ಲೇಷಿಸಲಾಗಿದೆ.
ಇದೇ ಪರಿಸ್ಥಿತಿ ಮುಂದುವರಿದರೆ ಈ ಕ್ಲಿಷ್ಟಕರ ಸನ್ನಿವೇಶವನ್ನು ಪರಿಹರಿಸಲು ಸಾಧ್ಯ ವಾಗುವುದಿಲ್ಲ ಎಂದು ಅಮೆರಿಕದ ವಿಜ್ಞಾನಿ ವಿಲಿಯಂ ರಿಪ್ಪೆಲ್ ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಮುಂಗಾರು ವ್ಯತಿರಿಕ್ತವಾಗು ತ್ತಿದೆ. ಈಗಾಗಲೇ ಹಲವಾರು ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಸಾಕಷ್ಟು ಪ್ರಮಾಣ ದಲ್ಲಿ ಮರುಬಳಕೆ ಮಾಡಿಕೊಳ್ಳುವ ಆಹಾರ ಹಾಗೂ ಇಂಧನವನ್ನು ಹುಡುಕಿಕೊಳ್ಳಬೇಕಿದೆ ಎಂದು ದಿಲ್ಲಿ ವಿವಿ ಸಹಾಯಕ ಪ್ರಾಧ್ಯಾಪಕ ಗ್ಯಾನ್ ಪ್ರಕಾಶ್ ಶರ್ಮ ತಿಳಿಸಿದ್ದಾರೆ.
ತಾಪ ಮಾನ ಇಳಿಕೆಗೆ ಈಗಾಗಲೇ ಹಲವಾರು ರಾಷ್ಟ್ರಗಳು ನಿರಂತರವಾಗಿ ಜಾಗತಿಕ ವಾಗಿ ಸಭೆಗಳನ್ನು ಆಯೋಜಿಸಲಾಗಿದೆ. ಆದರೆ, ಇಂಗಾಲ ಪ್ರಮಾಣ ಏರಿಕೆ ಮಾತ್ರ ತಗ್ಗುತ್ತಿಲ್ಲ ಎಂದು ವಿಜ್ಞಾನಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ.