Advertisement
ರಷ್ಯಾದ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ಕಾರ್ ಚೇಸ್ ಮಾಡಿದ ಪೊಲೀಸರು ಮಾರಣಾಂತಿಕ ದಾಳಿಯಲ್ಲಿ ನೇರವಾಗಿ ಭಾಗಿಯಾಗಿರುವ ಎಲ್ಲಾ ನಾಲ್ವರು ಬಂದೂಕುಧಾರಿಗಳು ಸೇರಿದಂತೆ 11 ಮಂದಿ ಶಂಕಿತರನ್ನು ಬಂಧಿಸಿದ್ದಾರೆ.
Related Articles
ಶುಕ್ರವಾರ ರಾತ್ರಿ ಜನರು ಕಿಕ್ಕಿರಿದು ಸೇರಿದ್ದ ಸಂಗೀತ ಸಭಾಂಗಣಕ್ಕೆ ದಿಢೀರನೆ ನಾಲ್ವರು ಬಂದೂಕುಧಾರಿಗಳು ನುಗ್ಗಿದರು. ಸತತವಾಗಿ ಗುಂಡು ಹಾರಿಸುತ್ತ, ಭಾರೀ ಬೆಂಕಿ ಉಂಟುಮಾಡುವ ಸ್ಫೋಟಕಗಳನ್ನು ಎಸೆಯುತ್ತ ಸಾಗಿದರು. ಇದರಿಂದ 150ಕ್ಕೂ ಅಧಿಕ ಮಂದಿ ಸಾವನ್ನ ಪ್ಪಿದ್ದಾರೆ. ಈ ಭೀಕರ ದಾಳಿಯನ್ನು ಭಾರತವೂ ಸೇರಿ ಜಗತ್ತಿನ ಪ್ರಮುಖ ರಾಷ್ಟ್ರಗಳಾದ ಅಮೆರಿಕ, ಫ್ರಾನ್ಸ್, ಸ್ಪೇನ್, ಚೀನ, ಇಟಲಿ ಖಂಡಿಸಿವೆ.
Advertisement
ಏನಿದು ಐಸಿಸ್-ಕೆ?ಐಸಿಸ್-ಖೋರೊಸಾನ್ ಪ್ರಾವಿನ್ಸ್ ಎನ್ನುವುದು ಐಸಿಸ್ ಉಗ್ರ ಸಂಘಟನೆಯ ಅಂಗಸಂಸ್ಥೆ. ಇದು ಅಫ್ಘಾನಿ ಸ್ಥಾನದ ಪೂರ್ವಭಾಗದಲ್ಲಿ ಸಕ್ರಿಯವಾಗಿದೆ. ಅಫ್ಘಾನಿ ಸ್ಥಾನದಲ್ಲಿ ಹಲವು ಭೀಕರ ಉಗ್ರ ಕೃತ್ಯಗಳನ್ನು ನಡೆಸಿದೆ. ಯಾಕೆ ದಾಳಿ?
ಐಸಿಸ್-ಕೆ ರಷ್ಯಾವನ್ನು ತನ್ನ ಶತ್ರು ಎಂದು ಪರಿಗಣಿಸಿದೆ. ರಷ್ಯಾ ದೇಶವು ಸಿರಿಯಾದ ಅಧ್ಯಕ್ಷ ಅಲ್ ಬಶರ್ ಅಸದ್‌ಗೆ ಬೆಂಬಲವಾಗಿ ತನ್ನ ಸೇನಾಪಡೆ ಯನ್ನು ಕಳಿಸಿತ್ತು. ಅಸದ್ ವಿರುದ್ಧ ತಿರುಗಿಬಿದ್ದಿದ್ದ ಐಸಿಸ್ ಮತ್ತಿತರ ಉಗ್ರ ಸಂಘಟನೆಗಳ ವಿರುದ್ಧ ದಾಳಿ ನಡೆಸಿತ್ತು. ಇದೇ ರಷ್ಯಾ ವಿರುದ್ಧದ ದಾಳಿಗೆ ಕಾರಣ ಎಂಬ ಶಂಕೆಯಿದೆ.