Advertisement

Iran; ಖಾಸೆಮ್ ಸಮಾಧಿ ಬಳಿ ಅವಳಿ ಸ್ಪೋಟಕ್ಕೆ 100 ಕ್ಕೂ ಹೆಚ್ಚು ಮಂದಿ ಮೃತ್ಯು

08:33 PM Jan 03, 2024 | Team Udayavani |

ಕೆರ್ಮನ್‌: 2020 ರಲ್ಲಿ ಯುಎಸ್ ಡ್ರೋನ್‌ನಿಂದ ಹತ್ಯೆಗೀಡಾಗಿದ್ದ ಟಾಪ್ ಕಮಾಂಡರ್ ಖಾಸೆಮ್ ಸೊಲೈಮಾನಿ ಸ್ಮರಣಾರ್ಥವಾಗಿ ಇರಾನ್‌ನಲ್ಲಿ ನಡೆದ ಸಮಾರಂಭದಲ್ಲಿ ಭೀಕರ ಉಗ್ರ ದಾಳಿ ನಡೆದಿದ್ದು, ಬುಧವಾರ ಎರಡು ಸ್ಫೋಟಗಳು 100 ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇರಾನ್ ನ ಆಗ್ನೇಯ ನಗರವಾದ ಕೆರ್ಮನ್‌ನಲ್ಲಿ ಸುಲೇಮಾನಿಯ ಸಮಾಧಿ ಬಳಿ ವಾರ್ಷಿಕೋತ್ಸವದ ಕಾರ್ಯಕ್ರಮದ ಸಂದರ್ಭದಲ್ಲಿ ಇರಾನ್ ರಾಜ್ಯ ದೂರದರ್ಶನವು ಮೊದಲ ಮತ್ತು ನಂತರ ಎರಡನೇ ಸ್ಫೋಟ ನಡೆದಿರುವುದನ್ನು ವರದಿ ಮಾಡಿದೆ.

ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಕೆರ್ಮನ್‌ನ ಹುತಾತ್ಮರ ಶ್ಮಶಾನಕ್ಕೆ ಹೋಗುವ ರಸ್ತೆಯಲ್ಲಿ ಇಡಲಾದ ಎರಡು ಸ್ಫೋಟಕಗಳನ್ನು ಭಯೋತ್ಪಾದಕರು ದೂರದಿಂದಲೇ ಸ್ಫೋಟಿಸಿದ್ದಾರೆ” ಎಂದು ಹೇಳಿದ್ದಾರೆ. ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next