Advertisement

ನೂರಕ್ಕೂ ಅಧಿಕ ಟಿಪ್ಪರ್‌ ಮರಳು ಸಂಗ್ರಹ

03:58 PM Nov 28, 2019 | Suhan S |

ಕುಷ್ಟಗಿ: ಕುಷ್ಟಗಿ-ಕಂದಕೂರು ಮಧ್ಯೆ ಎರೆಹಳ್ಳದ ಅಕ್ಕ-ಪಕ್ಕದ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿಟ್ಟಿದ್ದ ನೂರಕ್ಕೂ ಅಧಿ ಕ ಟಿಪ್ಪರ್‌ ಮರಳನ್ನು ತಹಶೀಲ್ದಾರ್‌ ನೇತೃತ್ವದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.

Advertisement

ತಹಶೀಲ್ದಾರ್‌ ಎಂ.ಸಿದ್ದೇಶ್‌ ಅವರು ಖಚಿತ ಮಾಹಿತಿ ಮೇರೆಗೆ ಎರೆಹಳ್ಳದ ನಿರ್ಜನ ಪ್ರದೇಶಕ್ಕೆ ಭೇಟಿ ನೀಡಿದರು. ಹಳ್ಳದ ಅಕ್ಕ-ಪಕ್ಕದ ಜಮೀನುಗಳಲ್ಲಿ ಅಲ್ಲಲ್ಲಿ ಮರಳು ಸಂಗ್ರಹಿಸಿಟ್ಟಿರುವುದಲ್ಲದೇ ಹಳ್ಳದಲ್ಲಿಯೂ ಮರಳು ರಾಶಿ ಸಂಗ್ರಹಿಸಿರುವುದು ಕಂಡು ಬಂತು. ಸಂಗ್ರಹಿಸಿದ ಮರಳು ರಾಶಿಯನ್ನು ವಶಕ್ಕೆ ತೆಗೆದುಕೊಳ್ಳಲು ಕಂದಕೂರು ಹಾಗೂ ಕುಷ್ಟಗಿ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದರು.

ಹಳ್ಳದ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಲು ಅವಕಾಶ ಕಲ್ಪಿಸಿದ ಜಮೀನುಗಳು ಯಾರ ಹೆಸರಲ್ಲಿವೆ ಎನ್ನುವುದು ಖಚಿತ ಪಡಿಸಿಕೊಂಡು, ಸದರಿ ಜಮೀನು ಮಾಲೀಕರ ವಿರುದ್ಧವೂ ಕ್ರಮಕ್ಕೆ ಸೂಚಿಸಿದ ಅವರು, ಮರಳು ಅಗತ್ಯವಾಗಿದ್ದರೆ ಕಟ್ಟಡ ಕೆಲಸಕ್ಕೆ ನೇರವಾಗಿ ಬಳಸಿಕೊಳ್ಳಲಾಗುತ್ತಿತ್ತು. ಆದರೆ ಈ ಪ್ರಕರಣದಲ್ಲಿ ಹಳ್ಳದ ಪ್ರದೇಶದಲ್ಲಿ ಎತ್ತುವಳಿ ಮಾಡಿ, ಅಕ್ರಮವಾಗಿ ಬೇರೆಡೆ ಸಂಗ್ರಹಿಸಲಾಗಿದೆ.

ಕಂದಾಯ ಹಾಗೂ ಪೊಲೀಸ್‌ ಇಲಾಖೆ ಜಂಟಿಯಾಗಿ ಪಂಚನಾಮೆ ನಡೆಸಿ, ಸಂಗ್ರಹಿಸಿದ ಅಕ್ರಮ ಮರಳನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿಕೊಂಡು ಸರ್ಕಾರದ ನಿಗದಿತ ದರದನ್ವಯ ಕ್ಯೂಬಿಕ್‌ ಮೀಟರ್‌ ಗೆ ಸಾರ್ವಜನಿಕರಿಗೆ, ಸರ್ಕಾರದ ಕೆಲಸಗಳಿಗೆ ಮಾರಾಟ ಮಾಡುವುದು, ಲೋಕೋಪಯೋಗಿ ಇಲಾಖೆಯ ವಿವೇಚನೆಗೆ ಬಿಟ್ಟಿದ್ದು ಎಂದರು. ಈ ವೇಳೆ ಗ್ರಾಮ ಲೆಕ್ಕಾ ಧಿಕಾರಿಗಳಾದ ರಮೇಶ ತಾಳಕೇರಿ, ಸಂಗಮೇಶ ಸಿಂಗಾಡಿ, ಚೂರಿ, ಎಎಸ್‌ ಐ ಶಿವಶಂಕರಪ್ಪ ಕುರಿ, ಪೇದೆಗಳಾದ ಅಮರೇಶ ಹುಬ್ಬಳ್ಳಿ, ಸಂಗಮೇಶ ಮತ್ತೀತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next