Advertisement

ಉತ್ತರ ಪ್ರದೇಶ: ನೂರಕ್ಕೂ ಅಧಿಕ ದನಗಳ ಸಾವು; ತನಿಖೆಗೆ ಆದೇಶ

06:08 AM Feb 11, 2019 | udayavani editorial |

ಮುಜಫ‌ರನಗರ : ಉತ್ತರ ಪ್ರದೇಶದ ಮುಜಫ‌ರನಗರ ಜಿಲ್ಲೆಯ ಗ್ರಾಮಗಳಲ್ಲಿ ಕಳೆದೆರಡು ದಿನಗಳಲ್ಲಿ ನೂರಕ್ಕೂ ಅಧಿಕ ಗೋವುಗಳು ಸಾವಪ್ಪಿದ್ದು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಮೇಯುತ್ತಿದ್ದ ದನಗಳು ಸತ್ತಿರುವುದರಿಂದ ಇವು ವಿಷಕಾರಿ ಹುಲ್ಲನ್ನು ತಿಂದಿರಬಹುದು ಅಥವಾ ಮಲಿನಯುಕ್ತ ನೀರನ್ನು ಕುಡಿದಿರಬಹುದು ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ವಿಜಯ್‌ ಕುಮಾರ್‌ ಹೇಳಿದ್ದಾರೆ.

ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಕಂದಾಯ ಇಲಾಖೆಯ ಒಂದು ತಂಡ ಮತ್ತು ಪಶು ವೈದ್ಯರು ಸ್ಥಳಕ್ಕೆ ಹೋಗಿದ್ದು ದನಗಳ ಸಾವಿಗೆ ಕಾರಣವೇನೆಂಬುದನ್ನು ಕಂಡುಕೊಳ್ಳಲಿದ್ದಾರೆ. ಈ ದನಗಳನ್ನು ಆಸರೆ ಕೇಂದ್ರದಿಂದ ಗೋಮಾಳಕ್ಕೆ ತರಲಾಗಿತ್ತು ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next