Advertisement

ಭಾರತೀಯ ಸೇನಾಪಡೆಯಲ್ಲಿ 1.55 ಲಕ್ಷ ಹುದ್ದೆ ಖಾಲಿ: ಕೇಂದ್ರ ಸರ್ಕಾರ

08:58 PM Mar 27, 2023 | Team Udayavani |

ನವದೆಹಲಿ: ಭಾರತೀಯ ಸೇನಾಪಡೆಯ ಮೂರೂ ವಿಭಾಗಗಳಲ್ಲಿ 1.55 ಲಕ್ಷ ಹುದ್ದೆಗಳು ಖಾಲಿ ಇದ್ದು, ಭೂಸೇನೆಯೊಂದರಲ್ಲೇ 1.36 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಸೋಮವಾರ ರಾಜ್ಯಸಭೆಗೆ ಕೇಂದ್ರ ಸರ್ಕಾರ ತಿಳಿಸಿದೆ.

Advertisement

ರಕ್ಷಣಾ ಖಾತೆ ಸಹಾಯಕ ಸಚಿವರಾದ ಅಜಯ್‌ ಭಟ್‌ ಈ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೇ, ಸಶಸ್ತ್ರ ಪಡೆಗಳು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿವೆ. ಅವುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಅಗತ್ಯವಿರುವ ನಿಯಮಿತ ಪರಿಶೀಲನೆ ಮಾಡಲಾಗುತ್ತಿದೆ.

ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಯುವಕರನ್ನು ಪ್ರೇರೇಪಿಸುವಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ. ಭೂಸೇನೆಯಲ್ಲಿ 1.36 ಲಕ್ಷ, ನೌಕಾಪಡೆಯಲ್ಲಿ 12,428 ಹುದ್ದೆ, ವಾಯುಪಡೆಯಲ್ಲಿ 7,031 ಹುದ್ದೆಗಳಿವೆ ಎಂದು ತಿಳಿಸಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next