ಪಾಟ್ನಾ: ಶಾಲಾ ಸಮವಸ್ತ್ರ ಖರೀದಿಗಾಗಿ ಸರ್ಕಾರದ ಪ್ರೋತ್ಸಾಹ ಧನ ನಿರೀಕ್ಷಿಸಿದ್ದ ಬಿಹಾರದ ಇಬ್ಬರು ಬಡ ವಿದ್ಯಾರ್ಥಿಗಳಿಗೆ ಬುಧವಾರ ಭಾರೀ ಅಚ್ಚರಿ ಕಾದಿತ್ತು.
ಬ್ಯಾಂಕ್ ಖಾತೆಯಲ್ಲಿ 900 ಕೋಟಿ ರೂ. ಇರುವುದನ್ನು ಕಂಡು ವಿದ್ಯಾರ್ಥಿಗಳು ತಬ್ಬಿಬ್ಟಾದ ಘಟನೆ ಕಟಿಹಾರ್‌ನಲ್ಲಿ ನಡೆದಿದೆ.
ಎಟಿಎಂನ ಸ್ಟೇಟ್ ಮೆಂಟ್ ಮತ್ತು ನೆಟ್ ಬ್ಯಾಂಕಿಂಗ್ ನಲ್ಲಿ ಖಾತೆ ಪರೀಕ್ಷಿಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ.
ವಿದ್ಯಾರ್ಥಿ ಆಶಿಶ್ ಖಾತೆಯಲ್ಲಿ 6.2 ಕೋಟಿ ರೂ., ಗುರುಚರಣ್ ವಿಶ್ವಾಸ್ ಖಾತೆಯಲ್ಲಿ 900 ಕೋಟಿ ರೂ. ನಮೂದಾಗಿತ್ತು. ಇಬ್ಬರೂ ಸೀದಾ ತಮ್ಮ ಖಾತೆಯಿದ್ದ ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್‌ನ ಶಾಖೆಗೆ ತೆರಳಿ, ಮಾಹಿತಿ ನೀಡಿದರು. ಬ್ಯಾಂಕ್ ಸಿಬ್ಬಂದಿ ಪರೀಕ್ಷಿಸಿದಾಗ ಕಂಪ್ಯೂಟರೀಕೃತ ಸಿಸ್ಟಂನಿಂದ ಈ ಎಡವಟ್ಟಾಗಿರುವುದು ದೃಢಪಟ್ಟಿದೆ.
ಆದರೆ, ಸ್ಟೇಟ್ ಮೆಂಟ್ ರಿಪೋರ್ಟ್ ನಲ್ಲಿ ತೋರಿಸುತ್ತಿದ್ದ ಷ್ಟು ಬೃಹತ್ ಮೊತ್ತ ನೈಜವಾಗಿ ಖಾತೆಗೆ ಬಿದ್ದಿರಲಿಲ್ಲ!
ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 1108 ಹೊಸ ಪ್ರಕರಣ | 809 ಸೋಂಕಿತರು ಗುಣಮುಖ