Advertisement

ಸರ್ಕಾರಿ ಆಸ್ಪತ್ರೆ ಬೆಡ್‌ ಮೇಲೆ ಹಾಯಾಗಿ ಮಲಗಿದ ಬೀದಿನಾಯಿ

03:28 PM Oct 07, 2020 | Suhan S |

ಚಿಂತಾಮಣಿ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸನಿರ್ವಹಿಸುವ35ಕ್ಕೂ ಹೆಚ್ಚಿನ ಕ್ಲೀನಿಕ್‌, ನಾನ್‌ಕ್ಲೀನಿಕ್‌ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಕಳೆದ 13 ದಿನಗಳಿಂದ ಮುಷ್ಕರದಲ್ಲಿ ನಿರತರಾಗಿರುವುದರಿಂದ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಎದ್ದುಕಾಣುತ್ತಿದ್ದರೆ, ಬೆಡ್‌ಗಳ ಮೇಲೆ ಬೀದಿ ನಾಯಿಗಳು ಹಾಯಾಗಿ ಮಲಗಿ ವಿಶ್ರಾಂತಿಪ ಡೆಯುವಂತಾಗಿದೆ.

Advertisement

ನೌಕರರ ಮುಷ್ಕರದಿಂದಾಗಿ ಆಸ್ಪತ್ರೆಯ ಸ್ವಚ್ಛತೆ ಕಾರ್ಯಗಳ ಜೊತೆಗೆ ಎಲ್ಲಾ ತರಹದ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿರುವುದರಿಂದ ರೋಗಿಗಳ ಸಂಖ್ಯೆಯೂ ಕಡಿಮೆಯಾಗಿ ಬಿಕೋ ಎನ್ನುವಂತಾಗಿದೆ. ಆಸ್ಪತ್ರೆಯಲ್ಲಿಗೆ ಬೆಡ್‌ಗಳ ಮೇಲೆ ಬೀದಿನಾಯಿಗಳು ಬಂದು ಮಲಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾಣವಾಗಿದೆ. ಸ್ವಚ್ಛತೆ ಇಲ್ಲದಿರುವುದರಿಂದದುರ್ವಾಸನೆಬೀರುತ್ತಿದೆ.

ಭಯದ ವಾತಾವರಣ: ಆಸ್ಪತ್ರೆಯ ಹಿಂದಿರುವ ಮಾಂಸದ ಅಂಗಡಿಗಳಲ್ಲಿ ಮಾಂಸ ತಿಂದು ಆಸ್ಪತ್ರೆ ಆವರಣಕ್ಕೆ ಬಂದುಕಿತ್ತಾಡುತ್ತಾ ಒಳಗೂ ನುಗ್ಗುತ್ತಿದ್ದು, ರೋಗಿಗಳಿಗೆ, ಸಿಬ್ಬಂದಿಗೆ  ಮತ್ತು ವೈದ್ಯರಿಗೂ ಸಮಸ್ಯೆಯಾಗಿದ್ದು, ಭಯದ ವಾತವರಣದಲ್ಲಿ ಕಾರ್ಯನಿರ್ವಹಿಸುವಂತಾಗಿದೆ ಎಂದು  ಆಸ್ಪತ್ರೆಯ ವೈದ್ಯಾಧಿಕಾರಿ ಸಂತೋಷ್‌ ತಿಳಿಸಿದರು.

ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಮಯದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕೋವಿಡ್ ಟೆಸ್ಟ್‌ಗೆ ಬರುವವರ ಸಂಖ್ಯೆ ಹೆಚ್ಚು. ಇಂತಹ ಸಮಯದಲ್ಲಿಆಸ್ಪತ್ರೆಯಲ್ಲಿ ಬೀದಿ ನಾಯಿಗಳ ಪ್ರವೇಶ, ಬೆಡ್‌ಗಳ ಮೇಲೆಮಲಗುತ್ತಿರುವುದರಿಂದ ಕಾಯಿಲೆ ವಾಸಿ ಮಾಡಿಕೊಳ್ಳಲು ಬರುವ ರೋಗಿಗಳು, ಸಾರ್ವಜನಿಕರು ಮತ್ತೂಂದೆರೆಡು ಕಾಯಿಲೆ ಹರಡಿಸಿಕೊಂಡು ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯ ಅಧಿಕಾರಿಗಳು ನಿರ್ಲಕ್ಷ್ಯತನ ಬಿಟ್ಟು ಸ್ವಚ್ಛತೆ ಕಾಪಾಡುವುದರ ಜೊತೆಗೆ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಕಾಚಹಳ್ಳಿ ನಿವಾಸಿ ರಾಘವೇಂದ್ರ ಒತ್ತಾಯಿಸಿದ್ದಾರೆ.

ಆಸ್ಪತ್ರೆಯ ಆವರಣಕ್ಕೆ ನುಗ್ಗುವ ಬೀದಿ ನಾಯಿಗಳನ್ನು ಹಿಡಿದು ಸಾಗಿಸುವಂತೆ ಆರು ತಿಂಗಳ ಹಿಂದೆಯೇ ನಗರಸಭೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೆ. ಆದರೂ ಸಹಕ್ರಮಕೈಗೊಂಡಿಲ್ಲ. ಈಗ ನಾಯಿಗಳಕಾಟ ಹೆಚ್ಚಾಗುತ್ತಿದೆ. ಇನ್ನೊಂದು ಬಾರಿ ಮತ್ತೆ ನಗರಸಭೆ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ. ಡಾ.ಸಂತೋಷ್‌, ಆಸ್ಪತ್ರೆಯ ವೈದ್ಯಾಧಿಕಾರಿ

Advertisement

ನಗರಸಭೆಯಿಂದ ಬೀದಿನಾಯಿಗಳನ್ನುಹಿಡಿದು ದೂರ ಸಾಗಿಸುವ ಕಾರ್ಯ ಮಾಡುವುದಿಲ್ಲ. ಬದಲಿಗೆ ಶಸ್ತ್ರಚಿಕಿತ್ಸೆ ಮಾಡುತ್ತೇವೆ. ಇದರಿಂದ ನಾಯಿಗಳ ಸಂತಾನೋತ್ಪತ್ತಿಕಡಿಮೆಯಾಗುತ್ತೆ. ಜನರಿಗೆ ತೊಂದರೆ ಮಾಡದಂತೆ ಇರುತ್ತವೆ. ನಾಯಿಗಳು ಆಸ್ಪತ್ರೆಯಒಳಗೆಬರದಂತೆ ನೋಡಿಕೊಳ್ಳುವ ಜವಾಬ್ದಾರಿಆಸ್ಪತ್ರೆಯ ಅಧಿಕಾರಿಗಳಿಗೆ ಸಂಬಂಧಿಸಿದ್ದು. ಉಮಾಶಂಕರ್‌, ನಗರಸಭೆ ಪೌರಾಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next