ಬೆಂಗಳೂರು: ದಿನಕ್ಕೊಂದು ಆದೇಶ, ತಿಂಗಳಿಗೊಂದು ನಿಯಮ ಜಾರಿಗೆ ತರುವುದರಿಂದ ಸಾಲ ಮಾಡಿ ಬಂಡವಾಳ ಹಾಕಿ ಗಣಿಗಾರಿಕೆ ನಡೆಸುತ್ತಿರುವ ನಾವು ಬೀದಿಗೆ ಬರುವಂತಾಗಿದೆ. ನಮ್ಮನ್ನು ಬದುಕಿಸಿ ಎಂದು ಅಧಿಕಾರಿಗಳ ಕೈ-ಕಾಲು ಹಿಡಿಯವ ಪರಿಸ್ಥಿತಿ ಬಂದಿದೆ ಎಂದು ಕಲ್ಲುಗಣಿದಾರರು ತಮ್ಮ ಅಳಲು ತೋಡಿಕೊಂಡರು.
ಕಲ್ಲುಗಣಿಗಾರಿಕೆಗೆ ನೀತಿ ರೂಪಿಸುವ ಸಂಬಂಧ ಮಂಗಳವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಕಂದಾಯ ಸಚಿವ
ಕಾಗೋಡು ತಿಮ್ಮಪ್ಪ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಗಣಿ ಸಚಿವ ವಿನಯ್ ಕುಲಕರ್ಣಿ, ಐಟಿ ಸಚಿವ ಪ್ರಿಯಾಂಕ ಖರ್ಗೆ, ವಿಧಾನಸಭೆ ಪ್ರತಿ ಪಕ್ಷದ ನಾಯಕ ಜಗದೀಶ ಶೆಟ್ಟರ್, ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಸಮ್ಮುಖದಲ್ಲಿ ಅಳಲು ತೋಡಿಕೊಂಡು ಕಲ್ಲುಗಣಿದಾರರು, ದಿನಕ್ಕೊಂದು ಆದೇಶ, ತಿಂಗಳಿಗೊಂದು ನಿಯಮ ತರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ಧೋರಣೆಗೆ ಖಂಡನೆ: ಕಲ್ಲುಗಣಿ ಗಾರಿಕೆಗೆ ಪ್ರತಿ ಹಂತದಲ್ಲೂ ಅಡಚಣೆಗಳನ್ನು ತರಲಾಗುತ್ತಿದೆ. ಒಂದೆರೆಡು ಎಕರೆ ಜಮೀನಿನಲ್ಲಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದೇವೆ. ಇದಕ್ಕೆ ಅಧಿ ಕಾರಿಗಳು ಇನ್ನಿಲ್ಲದ ನಿರ್ಬಂಧಗಳನ್ನು ಹಾಕುತ್ತಾರೆ. ಮಾತೆತ್ತಿದರೆ ಎನ್‌ಓಸಿ ತನ್ನಿ ಎಂದು ಹೇಳಿ, ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ತಡೆ ಹಿಡಿಯುತ್ತಾರೆ. ಸಾಲ ಮಾಡಿ ಬಂಡವಾಳ ಹಾಕಿ ಗಣಿಗಾರಿಕೆ ಆರಂಭಿಸಿದ ನಾವು ಇಂದು ಅಧಿಕಾರಿಗಳ ಧೋರಣೆಯಿಂದಾಗಿ ಬೀದಿಗೆ ಬರುವಂತಾಗಿದೆ. ನಮ್ಮನ್ನು ಬದುಕಿಸಿ ಎಂದು ಅಧಿಕಾರಿಗಳ ಕೈ-ಕಾಲು ಹಿಡಿದುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಸಚಿವರು, ಪ್ರತಿಪಕ್ಷ ನಾಯಕರ ಮುಂದೆ ತಮ್ಮ ನೋವು ಹೇಳಿಕೊಂಡ ಕಲ್ಲುಗಣಿದಾರರು, ಎಸ್ಸಿ, ಎಸ್ಟಿ ಜನಾಂಗದವರಿಗೆ ಹೆಚ್ಚು ತೊಂದರೆ ನೀಡ ಲಾಗುತ್ತಿದ್ದು, ಇದಕ್ಕಾಗಿ ಕಲ್ಲುಗಣಿಗಾರಿಕೆಯಲ್ಲಿ ಮೀಸಲಾತಿ ತನ್ನಿ ಎಂದು ಕೆಲವರು ಇದೇ ವೇಳೆ ಒತ್ತಾಯಿಸಿದರು. ಡೀಮx… ಅರಣ್ಯ ಮತ್ತು ಮೀಸಲು ಅರಣ್ಯ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆಗೆ ಅವಕಾಶ ನೀಡುತ್ತಿಲ್ಲ.
ಇದರಿಂದ ತೊಂದರೆ ಎದುರಿಸುವಂತಾಗಿದೆ.
ಕಾಲು ದಾರಿಯನ್ನು ಗಣಿಗಾರಿಕೆ ಸ್ಥಳಕ್ಕೆ ಹೋಗಲು ಅಭಿವೃದ್ಧಿಪಡಿಸಿಕೊಂಡರೆ ಅಕ್ಕಪಕ್ಕ ದಲ್ಲಿ ಹಳ್ಳಿಗಳಿವೆ, ಜನರಿಗೆ ತೊಂದರೆಯಾಗುತ್ತದೆ, ಇಲ್ಲಿಂದ ಬೇರೆ ಕಡೆ ಸ್ಥಳಾತರಿಸಿ ಎಂದು ಅಧಿಕಾರಿಗಳು ಕಾಟ ನೀಡುತ್ತಿದ್ದಾರೆ. ಅಧಿಕಾರಿಗಳ ಇಂತಹ ಕಾಟದಿಂದ ತಪ್ಪಿಸಲು ಸರಳವಾದ ನೀತಿ ಜಾರಿಗೆ ತನ್ನಿ ಎಂದು ಕಲ್ಲುಗಣಿದಾರರು ಆಗ್ರಹಿಸಿದರು.
30 ವರ್ಷಕ್ಕೆ ಗುತ್ತಿಗೆ: ಈ ವೇಳೆ ಮಾತನಾಡಿದ ಸಚಿವ ವಿನಯ್‌ಕುಲಕರ್ಣಿ, ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಗುತ್ತಿಗೆ ನೀಡುವ ಅವಧಿಯನ್ನು 30 ವರ್ಷಕ್ಕೆ ಹೆಚ್ಚಿಸುವ ಸಂಬಂಧ ಕಾನೂನಿಗೆ ತಿದ್ದುಪಡಿ ತರಲಾಗುತ್ತಿದೆ. ಡೀಮx…
ಅರಣ್ಯದ ಪ್ರದೇಶದಲ್ಲಿನ ಕಲ್ಲುಗಣಿಗಾರಿಕೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಶೀಘ್ರ ತೀರ್ಮಾನ ತೆಗೆದುಕೊಳ್ಳಲಾಗುವುದು. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ರಾಮನಗರ, ಕೊಪ್ಪಳ ಸೇರಿ ವಿವಿಧ ಜಿಲ್ಲೆಗಳಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಈ ಭಾಗದಲ್ಲಿ ಕಲ್ಲುಗಣಿಗಾರಿಕೆ ನಡೆಸುವವರ ಹಿತಕಾಪಾಡು
ನೀತಿ ತರುವ ಭರವಸೆ ನೀಡಿದರು.