Advertisement

ಅಮರನಾಥ ಯಾತ್ರಾರ್ಥಿಗಳ ಹತ್ಯೆಗೆ ಆಕ್ರೋಶ

02:14 PM Jul 14, 2017 | |

ದಾವಣಗೆರೆ: ಅಮರನಾಥ ಯಾತ್ರಾರ್ಥಿಗಳ ಮೇಲೆ ಲಷ್ಕರ್‌ ಎ ತೋಯಿಬಾ ಉಗ್ರರು ನಡೆಸಿದ ಹತ್ಯೆ ಖಂಡಿಸಿ ಗುರುವಾರ
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.

Advertisement

ಜಿಲ್ಲಾ ಬಿಜೆಪಿ ಕಚೇರಿಯಿಂದ ಜಯದೇವ ವೃತ್ತದವರೆಗೆ ಮೆರವಣಿಗೆ ನಡೆಸಿ, ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಉಗ್ರರ 
ಕೃತ್ಯವನ್ನ ಖಂಡಿಸಿದರು. ಜಮ್ಮು ಮತ್ತು ಕಾಶ್ಮೀರದ ಖನ್ನಬಲ್‌ ಬಳಿ ಕಳೆದ ಸೋಮವಾರ ರಾತ್ರಿ ಅಮರನಾಥ ಯಾತ್ರಾರ್ಥಿಗಳಿದ್ದ ಬಸ್‌ ಮೇಲೆ ಭಯೋತ್ಪಾದಕರ ಗುಂಪೊಂದು ಗುಂಡಿನ ದಾಳಿ ನಡೆಸಿದೆ. ಧೈರ್ಯಗುಂದದ ಬಸ್‌ ಚಾಲಕ ಸಲೀಂ ಬಸ್‌ ಚಲಾಯಿಸಿಕೊಂಡು ಹೋಗಿದ್ದಾರೆ. ಆದೇ ಬಸ್‌ 75 ಮೀಟರ್‌ನಷ್ಟು ಮುಂದೆ ಹೋಗುತ್ತಿದ್ದಂತೆ ಉಗ್ರರ ಮತ್ತೂಂದು ತಂಡ ಗುಂಡಿನ ದಾಳಿ ನಡೆಸಿ, 7 ಜನ ಯಾತ್ರಾರ್ಥಿಗಳ ಹತ್ಯೆ ಮಾಡಿರುವುದು ಜಿಲ್ಲಾ ಬಿಜೆಪಿ ಅತ್ಯುಗ್ರವಾಗಿ ಖಂಡಿಸುತ್ತದೆ. ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟು ಮಾಡಲು ಯತ್ನಿಸುತ್ತಿರುವ ಉಗ್ರರನ್ನ ಮಟ್ಟ ಹಾಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಅಮರನಾಥ ಯಾತ್ರಾರ್ಥಿಗಳ ಮೇಲೆ ದಾಳಿಯನ್ನ ಇದೇ ಮೊದಲ ಬಾರಿಗೆ ಉಗ್ರ ಸಂಘಟನೆಯೊಂದು ಖಂಡಿಸಿರುವುದು ಗಮನಾರ್ಹ. ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡು ಇನ್ನು ಮುಂದೆ ಇಂತಹ ಘಟನೆ
ನಡೆಯದಂತೆ ನೋಡಿಕೊಳ್ಳಬೇಕು. ಅಮರನಾಥ ಯಾತ್ರಾರ್ಥಿಗಳು ಒಳಗೊಂಡಂತೆ ಜನಸಾಮಾನ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು. ಮೋರ್ಚಾ ಜಿಲ್ಲಾ ಅಧ್ಯಕ್ಷ ಮಹಬೂಬ್‌ ಖಾನ್‌, ಪ್ರಧಾನ ಕಾರ್ಯದರ್ಶಿಗಳಾದ ಇಕ್ಬಾಲ್‌
ಅಹಮದ್‌, ಗೌತಮ್‌ ಜೈನ್‌, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಎಚ್‌.ಎನ್‌. ಶಿವಕುಮಾರ್‌, ಯುವ ಮೋರ್ಚಾ
ಜಿಲ್ಲಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌, ಸೋಗಿ ಶಾಂತಕುಮಾರ್‌, ಪ್ರಭು ಕಲುºರ್ಗಿ, ಟಿಂಕರ್‌ ಮಂಜಣ್ಣ, ಗ್ಯಾರಳ್ಳಿ ಶಿವು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next